ಅಪ್ಪನ ದಿನದಂದು ಎರಡೇ ಎರಡು ತರಲೆ ಜೋಕುಗಳು
ಐದು ವರ್ಷದ ಪಪ್ಪು, ಅಮ್ಮ ಹೇಳುತ್ತಿದ್ದ ರಾಜನ ಕಥೆಯನ್ನು ಎಷ್ಟು ತಾದಾತ್ಮ್ಯದಿಂದ ಕೇಳುತ್ತಿದ್ದನೆಂದರೆ, ಆ ಕಥೆಯಲ್ಲಿಯೇ ಮುಳುಗಿಹೋಗಿದ್ದನು, ಮೂವರು ಹೆಂಡತಿಯರಿದ್ದ ರಾಜನ ಕಥೆ ಆತನಿಗೆ ತುಂಬಾ ಹಿಡಿಸಿತ್ತು. ಕಥೆ ಮುಗಿದ ನಂತರ...
ಪಪ್ಪು : ಅಮ್ಮಾ ಅಮ್ಮಾ, ನಾನೂ ಆ ರಾಜನಂತೆ ಮೂವರು ಹೆಂಡಂದಿರನ್ನು ಮದುವೆಯಾಗುತ್ತೇನೆ. ಒಬ್ಬಳು ನನಗಾಗಿ ಅಡುಗೆ ಮಾಡುತ್ತಾಳೆ, ಮತ್ತೊಬ್ಬರು ನನ್ನ ರಂಜಿಸಲೆಂದು ಹಾಡು ಹಾಡುತ್ತಾಳೆ ಮತ್ತು ಮತ್ತೊಬ್ಬಳು ನನಗೆ ಸ್ನಾನಕ್ಕೆ ಹಾಕುತ್ತಾಳೆ.
ಅಮ್ಮ (ಅಚ್ಚರಿಯಿಂದ) : ಪುಟ್ಟಾ ಪುಟ್ಟಾ, ಒಬ್ಳು ಅಡುಗೆ ಮಾಡ್ತಾಳೆ, ಒಬ್ಳು ಹಾಡ್ತಾಳೆ, ಒಬ್ಳು ಸ್ನಾನ ಮಾಡಿಸ್ತಾಳೆ. ಆದರೆ, ನಿನ್ನನ್ನು ಮಲಗಿಸುವವರು ಯಾರು?

ಪಪ್ಪು : ನೀನೇ ಅಮ್ಮ, ಅವರೆಲ್ಲ ಏನೇ ಮಾಡಿದರೂ, ನೀನೇ ನನ್ನನ್ನು ಮಲಗಿಸಬೇಕು.
ಪಪ್ಪುವಿನ ಈ ಮಾತು ಕೇಳಿ ಅಮ್ಮನ ಹೃದಯ ತುಂಬಿ ಬರುತ್ತದೆ. ಆಕೆಯ ಕಣ್ಣಿಂದ ಆನಂದಭಾಷ್ಪ ಉದುರುತ್ತದೆ. ಸೆರಗಿನಿಂದ ಕಣ್ಣೊರೆಸಿಕೊಂಡು.
ಅಮ್ಮ : ಪುಟ್ಟಾ, ಆದರೆ, ಆ ನಿನ್ನ ಮೂವರು ಹೆಂಡತಿಯೊಡನೆ ಮಲಗುವವರು ಯಾರು? (ಎಂದು ಮುಗ್ಧವಾಗಿ ಕೇಳುತ್ತಾಳೆ.)
ಪಪ್ಪು : ಅಪ್ಪ ಇದ್ದಾನಲ್ಲ!
ಅಲ್ಲೇ ಮೂಗಿನ ಮೇಲೆ ಕನ್ನಡಕ ಹಾಕಿಕೊಂಡು ಪೇಪರ್ ಓದುತ್ತ ಕುಳಿತಿದ್ದ ಪಪ್ಪುವಿನ ಅಪ್ಪನ ಕಣ್ಣಲ್ಲಿ ಈಗ ಆನಂದಭಾಷ್ಪ! ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಾನೆ.
***
ಗಿಳಿ ಹಸಿರು ಬಣ್ಣದ ಸೀರೆಯನುಟ್ಟ ಲೀಲಾವತಿ ಮಿಸ್ ಮೊದಲ ದಿನ ತರಗತಿಯೊಳಗೆ ಬರುತ್ತಾಳೆ. ಆಕೆಯ ಕಣ್ಣುಗಳು ಮೊದಲ ಬೆಂಚಿನಲ್ಲಿ ಕುಳಿತಿದ್ದ ಇಬ್ಬರು ಏಳು ವಯಸ್ಸಿನ ಹುಡುಗರ ಮೇಲೆ ಬೀಳುತ್ತದೆ. ಇಬ್ರೂ ನೋಡಲು ಒಂದೇ ರೀತಿಯಿದ್ದಾರೆ. ಆಹಾ ಎಂಥಾ ಹೋಲಿಕೆ?
ಟೀಚರ್ : ಮೈಗಾಡ್, ನೀವಿಬ್ರೂ ಟ್ವಿನ್ಸಾ?
ಇಬ್ಬರೂ ಒಟ್ಟಿಗೇ : ಅಲ್ಲ ಮೇಡಂ, ಅಕ್ಕಪಕ್ಕದ ಮನೆಯವರು. ನಾನು ದಿನೇಸ, ಈತ ಸುರೇಸ!
ಎಲ್ಲರಿಗೂ ಅಪ್ಪನ ದಿನದ ಹಾರ್ದಿಕ ಶುಭಾಶಯಗಳು.












Click it and Unblock the Notifications