ಬೆಂಗ್ಳೂರು ಮಳೆ: ಚಿತ್ರಗುಪ್ತರೇ, ಇವನ ಜೊತೆ ತಿಲೋತ್ತಮೆಯನ್ನು ಕಳುಹಿಸಿ

ಒಂದೆರಡು ದಿನದಿಂದ ಶಾಂತನಾಗಿರುವ ವರುಣ ಇನ್ಯಾವಾಗ ಅಬ್ಬರಿಸುತ್ತಾನೋ.. ಈ ನಡುವೆ ಬೆಂಗಳೂರು ಮಳೆ, ರಸ್ತೆಗುಂಡಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಜೋಕ್ಸುಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲಿ ಕೆಲವೊಂದು ಇಲ್ಲಿದೆ:

ಒಬ್ಬ ನಗರದ ಕಂಪೆನಿಯೊಂದಕ್ಕೆ ಸಂದರ್ಶನಕ್ಕೆಂದು ಹೋದ:
ಎಚ್ ಆರ್ : ನಿಮ್ಮ ಬಯೋಡೇಟಾದಲ್ಲಿ ಈಜು ಬರುತ್ತದೆ ಎಂದು ವಿಶೇಷ ಒತ್ತುನೀಡಿ ಬರೆದಿರುವುದೇಕೆ?
ಅಭ್ಯರ್ಥಿ: ಕಾರಣವಿದೆ ಸರ್..
ಎಚ್ ಆರ್: ಏನದು?
ಅಭ್ಯರ್ಥಿ: ಎಂತಹ ಮಳೆಯೇ ಬರಲಿ, ಈಜಿಕೊಂಡಾದರೂ ಆಫೀಸಿಗೆ ಬರುತ್ತೇನೆ. ರಜೆ ಹಾಕುವುದಿಲ್ಲ..
ಎಚ್ ಆರ್: ಗುಡ್.. ನೀವು ಸಿಲೆಕ್ಟ್ ಆಗಿದ್ದೀರಾ..
ಅಭ್ಯರ್ಥಿ: ಥ್ಯಾಂಕ್ಯೂ ಸರ್..

ಯಮಧರ್ಮ: ಚಿತ್ರಗುಪ್ತರೇ.. ಇವನನ್ನು ನರಕಕ್ಕೆ ಎಳೆದೊಯ್ದು, ಮೈಯೊಳಗಿನ ಎಲುಬುಗಳನ್ನು ಪುಡಿಪುಡಿ ಮಾಡಿ, ಕಾದ ಕಬ್ಬಿಣದ ಸಲಾಕೆಯಿಂದ ಬರೆಕೊಡಿ
ಚಿತ್ರಗುಪ್ತ: (ಪುಸ್ತಕ ಪರಿಶೀಲಿಸಿ) ಸ್ವಾಮಿ.. ಇವನು ಭೂಲೋಕದಲ್ಲಿರುವ ಭಾರತ ದೇಶದ, ಕರ್ನಾಟಕ ರಾಜ್ಯದ ಬೆಂಗಳೂರು ಎನ್ನುವ ನಗರದ ರಸ್ತೆಗಳಲ್ಲಿ ಓಡಾಡಿದ್ದಾನೆ..
ಯಮಧರ್ಮ: ಅದಕ್ಕೇನಂತೆ?
ಚಿತ್ರಗುಪ್ತ: ಸ್ವಾಮೀ.. ಅಲ್ಲಿ ಓಡಾಡಿದ್ದರಿಂದ, ಈಗಾಗಲೇ ಅವನ ಎಲುಬುಗಳು ಪುಡಿಪುಡಿಯಾಗಿವೆ..
ಯಮಧರ್ಮ: ಅಹುದೇ.. ಬೆಂಗಳೂರು ರಸ್ತೆಗಳಲ್ಲಿ ಓಡಾಡಿದ್ದರಿಂದ, ಬೇರೆ ಶಿಕ್ಷೆ ವಿಧಿಸುವುದುಂಟೇ.. ಸಲ್ಲದು.. ಸಲ್ಲದು..
ಚಿತ್ರಗುಪ್ತ: ಹಾಗಿದ್ದಲ್ಲಿ.. ಈ ನರಮಾನವನನ್ನು ಏನು ಮಾಡೋಣ?
ಯಮಧರ್ಮ: ಇವನನ್ನು ತಿಲೋತ್ತಮೆಯ ಜೊತೆ ಸ್ವರ್ಗವಿಹಾರಕ್ಕೆ ಕಳುಹಿಸಿ.. ಸುಧಾರಿಸಿಕೊಳ್ಳಲಿ...ಪಾಪ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+