
ಹೆಂಡತಿಯಿಂದ ಶೋಷಣೆಗೊಳಗಾದ ಪತಿಗೆ ಕೌನ್ಸಿಲರ್ ನೀಡಿದ ಸೂಪರ್ ಸಲಹೆ
ಪ್ರೀತಿಸಿ ಮದುವೆಯಾಗಿದ್ದರೂ ಗಂಡ ಹೆಂಡತಿ ನಡುವೆ ಮೊದಲೆರಡು ವರ್ಷದಲ್ಲಿದ್ದ ಅನ್ಯೋನ್ಯತೆ ಇರಲಿಲ್ಲ. ಪ್ರತೀದಿನ ಪತಿಪತ್ನಿಯರ ಜೊತೆ ಜಗಳ. ಇದರಿಂದ ಬೇಸತ್ತ ಪತಿ, ಕೌನ್ಸಿಲರ್ ಸಲಹೆ ಕೇಳಲು ಅವರ ಬಳಿಗೆ ಹೋದ.
ಪತಿ: ನಮ್ಮಿಬ್ಬರ ನಡುವೆ ಯಾವಾಗಲೂ ಜಗಳ. ಜಗಳವಾದಾಗಲೆಲ್ಲಾ ಪತ್ನಿ ತನ್ನ ಸಹೋದರನನ್ನು ಮನೆಗೆ ಕರೆಸುತ್ತಾಳೆ. ನನ್ನ ಭಾವಮೈದ ಮುಂಬೈನಿಂದ ವಿಮಾನದಿಂದ ಬಂದು ನನಗೆ ನಾಲ್ಕು ಕಪಾಳಕ್ಕೆ ಬಿಗಿದು ಮತ್ತೆ ವಿಮಾನದಲ್ಲಿ ಮುಂಬೈಗೆ ವಾಪಸ್ ಆಗುತ್ತಿದ್ದ. ಇಷ್ಟೇ ಅಲ್ಲಾ.. ಅವನ ಫ್ಲೈಟ್ ಟಿಕೆಟ್ ದುಡ್ಡು ನನ್ನ ಕ್ರೆಡಿಟ್ ಕಾರ್ಡ್ ನಿಂದ ಸ್ವೈಪ್ ಮಾಡುತ್ತಾಳೆ.
ನನ್ ಹುಡ್ಗೀನ ಅಂದು ನೋಡಿದ್ದಕ್ಕೂ ಇಂದು ನೋಡುವುದಕ್ಕೂ!
ಕೌನ್ಸಿಲರ್: ನಿಮ್ಮ ಪರಿಸ್ಥಿತಿ ನೋಡಿ ನನಗೆ ಬಹಳ ವಿಷಾದವಾಗುತ್ತದೆ. ಇವತ್ತಿನ ಪ್ರಪಂಚದಲ್ಲಿ ನಮಗೆಲ್ಲಾ ಇಂತಹ ಸಮಸ್ಯೆಗಳು ಕಾಮನ್ ಆಗಿಬಿಟ್ಟಿದೆ. ನೀವು ಒಂದು ಕೆಲಸ ಮಾಡಿ.
ಪತಿ: ಏನ್ ಸರ್?
ಕೌನ್ಸಿಲರ್: ನೀವೇ ಮುಂಬೈಗೆ ಶಿಫ್ಟ್ ಆಗಿಬಿಡಿ. ನಿಮ್ಮ ವಿಮಾನ ಪ್ರಯಾಣದ ದರ ಉಳಿಯುತ್ತೆ..
--
ಅತ್ತೆ ಮತ್ತು ಸೊಸೆ ನಡುವಿನ ಸಂಭಾಷಣೆ
Recommended Video
ಸೊಸೆ: ಅತ್ತೆ, ನಾನು ಕಪ್ಪು ಇದ್ದೀನಾ?
ಅತ್ತೆ: ಇಲ್ಲಮ್ಮಾ..
ಸೊಸೆ: ಮತ್ತೆ ನಾನು ದಪ್ಪ ಇದ್ದೀನಾ?
ಅತ್ತೆ: ಇಲ್ಲಮ್ಮಾ..ಯಾಕೆ?
ಸೊಸೆ: ನನ್ನ ಮೂತಿ ಸೊಟ್ಟಗಿದೆಯಾ?
ಅತ್ತೆ: ಇಲ್ವಲ್ಲಾ..
ಸೊಸೆ: ನಾನು ಗಯ್ಯಾಳಿನಾ?
ಅತ್ತೆ: ಅಯ್ಯೋ..ಇಲ್ಲಮ್ಮಾ.. ಯಾರು ಹಂಗತ ಹೇಳಿದ್ರು?
ಸೊಸೆ: ಮತ್ತೆ, ಪಕ್ಕದ್ಮನೆ ಶಾರದಮ್ಮ ಹೇಳುತ್ತಾರೆ..ನೀನು ಥೇಟ್ ನಿನ್ ಅತ್ತೆ ಥರಾನೇ ಅಂತ!!