
ಕೊರೊನಾ ವೈರಸ್: ಹೈದರ್ ಕೀ ಸೆಕ್ಸೀ ಗೋರಿ ಕ್ವೀನ್
ಕೊರೊನಾ ವೈರಸ್ ಇಡೀ ವಿಶ್ವದ ನೆಮ್ಮದಿಯನ್ನು ಹಾಳು ಮಾಡಿದೆ. ಇದರಿಂದಾಗಿ, ದೇಶವ್ಯಾಪಿ ಲಾಕ್ ಡೌನ್, ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿಯನ್ನು ಇಟ್ಟುಕೊಂಡು, ಎಂತೆಂಥಾ ಜೋಕ್ಸ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆಯೆಂದರೆ, ಅಬ್ಬಬ್ಬಾ..
ಕಳೆದ ಒಂದು ತಿಂಗಳಲ್ಲಿ ಮನೆಯಲ್ಲೇ ಇರಬೇಕಾಗಿ ಬಂದಿರುವುದು, ಗಂಡ-ಹೆಂಡತಿಯರ ನಡುವಿನ ಸಂಬಂಧ.. ಹೀಗೆ, ಇವೆಲ್ಲದರ ಸುತ್ತ ತರಹೇವಾರಿ ಜೋಕ್ಸ್ ಗಳು, ಮೀಮ್ಸ್ ಗಳು ಸಖತ್ ಚಲಾವಣೆಯಲ್ಲಿವೆ.
Fact Check: ಕೊರೊನಾ ವೈರಸ್ ಕುರಿತು ಟ್ರೋಲ್ ಮಾಡಿದ್ರೆ ಕೇಸ್!
ಮನೆಯೇ ಮಂತ್ರಾಲಯ ಎನ್ನುವ ಸೂತ್ರವನ್ನು ಪಾಲಿಸಲು ಸರಕಾರ ಆದೇಶ ಹೊರಡಿಸಿರುವ ಈ ಸಮಯದಲ್ಲಿ ಎಲ್ಲರ ಸಂಸಾರ, ಸುಖ ಸಂಸಾರವೋ ಅಥವಾ ಗಲಾಟೆ ಸಂಸಾರವೋ ಎನ್ನುವ ವಿಚಾರದಲ್ಲೂ, ಕೆಲವೊಂದು ವರದಿಗಳು ಬಂದಿದ್ದವು.
ಇಬ್ಬರೂ ದುಡಿಯುವ ಸಂಸಾರದಲ್ಲಿ, ಗಂಡ ಹೆಂಡತಿ ಮನೆಯಲ್ಲೇ ಇರುವುದರಿಂದ, ಕಾಂಡೋಮ್ಸ್ ಗಳೂ ಭರ್ಜರಿಯಾಗಿ ಬಿಕರಿಯಾಗುತ್ತಿವೆಯಂತೆ. ಕೆಲವೊಂದು ಸ್ಯಾಂಪಲ್ ಗಳು ಹೀಗಿದೆ, ಸೀರಿಯಸ್ಸಾಗಿ ತೆಗೆದುಕೊಳ್ಳದೇ, ಹಾಗೇ ಸುಮ್ಮನೆ ನಕ್ಕುಬಿಡಿ:
ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕಿ ಕೊಂಡರೂ ಬರೋಲ್ಲಾ!

ಹೈದರ್ ಕೀ ಸೆಕ್ಸೀ ಗೋರಿ ಕ್ವೀನ್
ಪಾಕಿಸ್ತಾನದವರು ಭಾರತಕ್ಕೆ ಫೋನ್ ಮಾಡುತ್ತಾರೆ. ಅವರ ಸಂಭಾಷಣೆ ಹೀಗಿದೆ:
ಪಾಕ್: ಆ, ಲಸಿಕೆಯನ್ನು ಅರ್ಜೆಂಟಾಗಿ ನಮಗೆ ಕಳುಹಿಸಿ..
ಭಾರತ: ಯಾವುದು?
ಪಾಕ್: ಅದೇರೀ, ಲಸಿಕೆ ಹೆಸರು ಹೇಳೋಕೆ ಕಷ್ಟವಾಗುತ್ತಲ್ಲಾ.. ಅದು..
ಭಾರತ: ಯಾವುದಪ್ಪಾ.. ಸರಿಯಾಗಿ ಹೇಳು..
ಪಾಕ್: ಅದೇ.. ಹೈದರ್ ಕೀ ಸೆಕ್ಸೀ ಗೋರಿ ಕ್ವೀನ್
(Hydroxychloroquine)

ಬಾಸ್ ತನ್ನ ಅಸಿಸ್ಟೆಂಟ್ ಗೆ ಫೋನ್ ಮಾಡುತ್ತಾನೆ
ಕಂಪೆನಿಯ ಬಾಸ್ ತನ್ನ ಅಸಿಸ್ಟೆಂಟ್ ಗೆ ಫೋನ್ ಮಾಡುತ್ತಾನೆ..
ಬಾಸ್: ಅಲ್ಲ ಕಣಯ್ಯಾ.. ನಿನಗೆ ಆಗಲೇ ಫೋನ್ ಮಾಡಿದ್ದೆ. ನಿನ್ ಹೆಂಡ್ತಿ ಫೋನ್ ತೆಗೆದುಕೊಂಡ್ರು
ಅಸಿಸ್ಟೆಂಟ್: ಏನಂದ್ಳು ಸರ್?
ಬಾಸ್: ಅಡಿಗೆ ಮಾಡ್ತಾ ಇದ್ದಾರೆ ಎಂದು ಹೇಳಿದ್ರು. ಅದಿರಲಿ, ಫೋನ್ ಮಾಡಿದ ಮೇಲೆ ವಾಪಸ್ ಫೋನ್ ಮಾಡ್ಬೇಕು ತಾನೆ...
ಅಸಿಸ್ಟೆಂಟ್: ಮಾಡಿದ್ದೆ ಸರ್. ನಿಮ್ಮ ಮನೆಯವರು ತೆಗೆದುಕೊಂಡ್ರು..
ಬಾಸ್: ಏನಂದ್ಳು?
ಅಸಿಸ್ಟೆಂಟ್: ಅವರು ಬಟ್ಟೆ ಒಗೀತಾ ಇದ್ದಾರೆ, ಸ್ವಲ್ಪಹೊತ್ತು ಬಿಟ್ಟು ಫೋನ್ ಮಾಡಿ ಅಂದ್ರು

ಸ್ವಲ್ಪಹೊತ್ತಿನಲ್ಲಿ ಮಹಾಭಾರತ ಬರುತ್ತೆ
ಬೆಳಗ್ಗೆ 9ಗಂಟೆಗೆ ಟಿವಿಯಲ್ಲಿ ರಾಮಾಯಣ ನೋಡುತ್ತಿದ್ದ ಮಗ ತಂದೆಯನ್ನು ಕೇಳಿದ...
ಮಗ: ಅಪ್ಪಾ.. ರಾಮನಿಗೆ ಮೂರು ಜನ ತಾಯಿ.. ನನಗೇಕೆ ಒಬ್ಬಳೇ
ತಂದೆ: ಮುಗುಳ್ನಕ್ಕು ಹೆಂಡತಿಯ ಮುಖ ನೋಡಿದ
ಆಗ.. ವಯ್ಯಾರದಿಂದ ಹೆಂಡತಿ, ಮಗನಿಗೆ ಹೇಳುತ್ತಾಳೆ..
ತಾಯಿ: ಸ್ವಲ್ಪ ತಡೀಯಪ್ಪಾ.. ಸ್ವಲ್ಪಹೊತ್ತಿನಲ್ಲಿ ಮಹಾಭಾರತ ಬರುತ್ತೆ.. ದ್ರೌಪದಿಗೆ ಎಷ್ಟು ಜನ ಗಂಡಂದಿರು ಅಂತ ತೋರಿಸ್ತಾರೆ..

ಗಂಡ, ಹೆಂಡತಿ ಮಾಸ್ಕ್ ಹಾಕಿಕೊಂಡು ತರಕಾರೀ ತರೋಕೆ ಹೋದಾಗ
ಗುಂಡ ತನ್ನ ಸ್ನೇಹಿತನಿಗೆ ಫೋನ್ ಮಾಡುತ್ತಾನೆ..
ಗುಂಡ: ನಾನು, ಹೆಂಡತಿ, ಇಬ್ಬರೂ ಮಾಸ್ಕ್ ಹಾಕಿಕೊಂಡು ತರಕಾರಿ ತರೋಕೆ ಹೋಗಿದ್ವಿ..
ತಿಮ್ಮ: ಆಮೇಲೆ ಏನಾಯಿತು?
ಗುಂಡ: ವಾಪಸ್ ಮನೆಗೆ ಬಂದು ಇಬ್ಬರೂ ಮಾಸ್ಕ್ ತೆಗೆದು ನೋಡಿದಾಗ ಬೇರೆ ಯಾವುದೋ ಆಂಟಿ...
ತಿಮ್ಮ: ಅಯ್ಯೋ.. ಆಮೇಲೆ?
ಗುಂಡ: ಆಮೇಲೆ ಆಗೋದೇನು ಮಣ್ಣು.. ಹೆಂಡತಿಯದ್ದು 27 ಮಿಸ್ಡ್ ಕಾಲ್.. ಇನ್ನೇನು ಆಗುತ್ತೋ..ನೋಡಬೇಕು..