ಜೋಕು ಜೋಕಾಲಿ: ಹೆಂಡತಿ ಮೇಲೆ ಗಂಡನಿಗೇಕೆ ಅನುಮಾನ!

Posted By:
Subscribe to Oneindia Kannada

ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು,

"ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ" ಎಂದಿತು.

ಈತ, ಮುಂದೆ ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದೊಡ್ಡದೊಂದು ಕಲ್ಲು ಇವನ ಮುಂದೆ ಬಿತ್ತು. ಆಶ್ಚರ್ಯವಾದರೂ, ಅತ ನಡೆಯುವುದನ್ನು ಮುಂದುವರೆಸಿದ.

ಮಾಗಿಯ ಚಳಿಗೆ ಬೆಚ್ಚಗಿನ ಸನ್ನಿ ಲಿಯೋನ್ ಪ್ಲಸ್ 18 ಜೋಕ್ಸ್

ಮುಂದೆ ರಸ್ತೆಯ ತಿರುವನ್ನು ಇನ್ನೇನು ದಾಟಬೇಕು ಅನ್ನುವಷ್ಟರಲ್ಲಿ, ಅಶರೀರವಾಣಿ ಮತ್ತೆ ,

"ಇನ್ನು ಒಂದು ಹೆಜ್ಜೆ ಮುಂದಿಟ್ಟರೆ, ಒಂದು ಕಾರು ನಿನ್ನ ಮೇಲೆ ಹರಿದು, ನೀನು ಸಾಯುತ್ತೀಯ" ಎಂದು ಎಚ್ಚರಿಸಿತು.
ಅತ ರಸ್ತೆ ದಾಟದೆ ಅಲ್ಲೇ ನಿಂತ. ಆ ಕ್ಷಣದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಕಾರೊಂದು ರಸ್ತೆಯ ತಿರುವನ್ನು ದಾಟಿ ಮುಂದೆ ಹೋಯಿತು.

ಸಂಕ್ರಾಂತಿ ವಿಶೇಷ ಪುಟ

ಆಗ ಆಶ್ಚರ್ಯ ಚಕಿತನಾಗಿ, "ಯಾರಪ್ಪಾ ನೀನು?" ಎಂದು ಅಶರೀರವಾಣಿಯನ್ನು ಉದ್ದೇಶಿಸಿ ಕೇಳಿದ.

ಆಗ ಅಶರೀರವಾಣಿ ನುಡಿಯಿತು,

"ನಾನು ನಿನ್ನ ರಕ್ಷಣಾ ದೇವತೆ."

ಯಾವಾಗ್ಲೂ ವಯಸ್ಕರ ಚಿತ್ರ ನೋಡ್ತೀರಾ, ಅದ್ರಲ್ಲಿ ಬರೋದು ಒಂದಾದ್ರೂ ಗೊತ್ತಾ?

ಆಗ ಆತ ಆಶ್ಚರ್ಯದಿಂದ ಕೇಳಿದ,

"ಹೌದಾ? ನಾನು ಮದುವೆಯಾಗುವಾಗ ನೀನು ಎಲ್ಲಿದ್ದೆಯಪ್ಪಾ...!?"🤔😡

Full Silent...!!!🤫

😀😆😝😂😜
***

ಶಿವಪ್ಪ ಕಾಯೋ ತಂದೆ...!!!

ಗೆಳಯ 1: ಯಾಕೊ ಬೇಜಾರಲ್ಲಿದ್ದೆ ನೆನ್ನೆ?

ಗೆಳಯ 2: ನನ್ನ ಹೆಂಡ್ತಿ ಒಂದು ಸೀರೆಗೆ ₹20,000 ಖರ್ಚು ಮಾಡಿದ್ಲು..😣

ಗೆಳಯ 1: ಮತ್ತೆ ಇವತ್ತು ಖುಷಿಯಾಗಿದೀಯ..!

ಗೆಳಯ 2 : ಇವತ್ತು ಅದ್ನ ತಗೊಂಡು ನಿನ್ನ ಹೆಂಡ್ತಿಗೆ ತೋರ್ಸೋಕೆ ಹೋಗಿದಾಳೆ.
***
ಗಂಡ: ಯಾರೇ ಅದು ನಿನ್ನ ಮೊಬೈಲ್ ಅಲ್ಲಿ Iron Man ಅಂತ ಸೇವ್ ಮಾಡಿದ್ಯಲ್ಲ...
.
ಹೆಂಡತಿ: ಅಯ್ಯಾ ಕರ್ಮ ನೀವೋ ನಿಮ್ಮ ಅನುಮಾನನೋ ಅದು ದೋಭಿ ನಂಬರ್ ರೀ..
***

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jokes for the day: Here is Husband and wife chit chat latest jokes and popular jokes shared on whats app.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ