ಜೋಕ್ : ಬಾಯಿ ಮುಚ್ಚಿಕೊಂಡು ಹೆಂಡತಿ ಮಾತ್ಕೇಳಿ!
ಹೆಂಡತಿ: ಎಲ್ಲಿಗೆ ಹೋಗಿ ಬರ್ತ ಇದೀರಿ?
ಗಂಡ:-ಕಾಲು ನೋವು ಕಣೆ ಅದಕ್ಕೆ ಹಾಸ್ಪಿಟಲ್ಗೆ ಹೋಗಿ ಬರ್ತ ಇದೀನಿ
ಹೆಂಡತಿ:-ಅಯ್ಯೊ ಒಬ್ರೆ ಹೋಗಿದಿರಾ ನನ್ನ ಕರ್ದ್ರಿದ್ರೆ ಬರ್ತ ಇರ್ಲಿಲ್ವಾ
ಗಂಡ: -ಅಲ್ರೆಡಿ ಕಾಲ್ ನೋವು ಇದೆ ಅದರ ಜೊತೆಗೆ ತಲೆನೋವು ಯಾಕೆ ಅಂತ ಕರಿಲಿಲ್ಲ ಕಣೆ ಅಷ್ಟೇ
ಹೆಂಡತಿ:-ರೀ
****
ಸೋಫಾದಲ್ಲಿ ಬೇಕಾದಷ್ಟು ಸ್ಥಳ ಇದ್ದರೂ, ಬೆವರು ಕಿತ್ತುಬರುವಷ್ಟು ಸೆಖೆ ಇದ್ದರೂ ,ಗಂಡ ಹೆಂಡ್ತಿ ಮೈಗೆ ಮೈ ತಾಗಿಕೊಂಡೇ ಕುಳಿತರು ಅಂತಂದ್ರೆ,
ಹೊಸದಾಗಿ ಮದುವೆಯಾಗಿದ್ದಾರೆ ಅಂತ ಅರ್ಥ.
ಜೊತೆಯಾಗಿ ಕೂರದೇ,ಬೇರೆ ಬೇರೆ ಸೋಫಾದಲ್ಲಿ ಕುಳಿತ್ರು ಅಂತಂದ್ರೆ,
ಮದುವೆಯಾಗಿ ಕನಿಷ್ಟ ಹತ್ತು ವರ್ಷಗಳಾಗಿವೆ ಅಂತ ಅರ್ಥ.
ಸೋಫಾದಲ್ಲಿ ಗಂಡನ ಪಕ್ಕದಲ್ಲೇ ಸ್ಥಳವಿದ್ದರೂ ಕೂರದೇ, ನೆಲದಲ್ಲಿ ಆರಾಮವಾಗಿ ಕುಳಿತು,"ಇಲ್ಲೇ ಚೆನ್ನಾಗಿದೆ" ಅಂತ ಹೆಂಡ್ತಿ ಹೇಳಿದ್ಲು ಅಂತಂದ್ರೆ,
ಆಯಪ್ಪನ ಸಹವಾಸ ಸಾಕಾಗಿದೆ...ಅಂತ ಅರ್ಥ..!
*****
ಗಂಡ ಪೇಪರ್ ಓದ್ತಾ ಇದ್ದ....
ಹೆಂಡತಿ ಕೇಳಿದಳು, ರೀ ಸ್ವಲ್ಪ ಪೇಪರ್
ಕೊಡಿ ಅಂತ.....
ಏನಕ್ಕೆ ಪೇಪರ್ ನಿನಗೆ, ಟೆಕ್ನೋಲೊಜಿ ಎಷ್ಟೊಂದು
ಮುಂದುವರೆದಿದೆ. ತಗೋ ನನ್ನ ಹೊಸಾ ಟ್ಯಾಬ್,
ಉಪಯೋಗಿಸು ಅಂದ...
ಹೆಂಡತಿ ಟ್ಯಾಬ್ ತಗೊಂಡು ಒಂದು....
ಜಿರಳೆ ಹೊಡೆದ್ಲು......
ಗಂಡ ಮೂರ್ಛೆ ಹೋದ.......
ನೀತಿ: ಬಾಯಿ ಮುಚ್ಚಿಕೊಂಡು ಹೆಂಡತಿ....
ಹೇಳಿದ ಹಾಗೆ ಕೇಳ ಬೇಕು.......












Click it and Unblock the Notifications