ಇವನೌನ, ಯಾವ ನನ್ ಮಗಾ ಪಾಠಾ ಮಾಡ್ಯಾನಲೇ?
ಅವ ಪಾರ್ಟಿಗೆ ಇಷ್ಟು ಲಂಚ ನೀಡಿದ, ಇವ ಪುಢಾರಿಗೆ ಇಷ್ಟು ಡೊನೇಷನ್ ನೀಡಿದ, ಪಿಣರಾಯಿ ಬಂದ, ಭಾಷಣ ಬಿಗಿದು ಹೋದ, ಪತ್ನಿ ಮೇಲಿನ ಸಿಟ್ಟಿಗೆ ಐವರನ್ನು ಕೊಚ್ಚಿ ಕೊಂದ, ಹೀನಾಯವಾಗಿ ಸೋತ ಭಾರತ ಇತ್ಯಾದಿ ಸುದ್ದಿಗಳನ್ನು ಓದಿ ಚಿತ್ರಾನ್ನವಾದ ತಲೆಗೆ ಒಂದಿಷ್ಟು ನೆಮ್ಮದಿ ನೀಡುವಂಥ, ನಕ್ಕು ನಲಿಸುವಂಥ ಜೋಕ್ ಗಳು ಇಲ್ಲಿವೆ. ಓದಿ ನಿರಾಳರಾಗಿ. ಭಾನುವಾರವನ್ನು ಸಂತಸದಿಂದ ಕಳೆಯಿರಿ.
ಮಾಸ್ತರ : ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ ಮೊದಲ ಬಂತೋ?
ರಾಮ್ಯಾ : ಸರ್ ತತ್ತಿ ಬಂತ್ರಿ..
ಮಂಜ್ಯಾ : ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ?
ಮಾಸ್ತರ : ಹೇಳಲೇ ಮಂಜ್ಯಾ, ನೀನ ಹೇಳ.
ಮಂಜ್ಯಾ : ಸರ ಮೊದಲ ಬೀರ್ ಬಂತರಿ, ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ, ಆಮೇಲೆ ಕೋಳಿ ಬಂತರಿ, ಲಾಸ್ಟಗೆ 850 ರು. ಬಿಲ್ ಬಂತರಿ ಸರಾ..
ಮಾಸ್ತರ : ಹೊಗ್ರ್ಯೋ ಇವನೌನ. ಯಾವ ನನ್ ಮಗಾ ಮಾಸ್ತರ ಪಾಠಾ ಮಾಡ್ಯಾನಲೇ ನಿನಗ?

***
ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು!
***
ತಿಮ್ಮ : ಅಲ್ಲೋ ಕಾಲಿಗೆ ಹಾವು ಕಚ್ಚಿ ಇನ್ನೂ ಐದು ನಿಮಿಷ ಆಗಲಿಲ್ಲ. ಅಷ್ಟರಾಗ ಹೆಂಗ ಸತ್ತ?
ಗುಂಡ : ತಲೀಗೆ ವಿಷ ಏರತ್ತೋ ಏನೋ ಅಂತ.... ಕುತ್ತಿಗೀಗೆ ಜೋರಾಗಿ ಹಗ್ಗ ಬಿಗಿದಿದ್ವಿ..!
***
ಬಾಸ್ : ನಿನ್ನೆ ಯಾಕ್ರಿ ಕೆಲ್ಸಕ್ಕೆ ಬರ್ಲಿಲ್ಲ?
ನಾನು : ಕ್ಯಾಲೆಂಡರಲ್ಲಿ ರೆಡ್ ನಂ. ತೋರಿಸ್ತಿತ್ತು ಅಂತ ರಜಾ ಹಾಕ್ದೆ ಸಾ. ಸಂಜೆ ಗೊತ್ತಾಯ್ತು ಹೊಸ ಕ್ಯಾಲೆಂಡರ್ ಪೂಜೆಗೆ ನಮ್ಮಜ್ಜಿ ಕುಂಕುಮ ಹಚ್ಚಿದ್ರು ಅಂತ! ತಪ್ಪಾಯ್ತು ಸಾ.
***
ಡಾಕ್ಟರ್ : ಹುಂ.. ಏನ್ ತಿಂಡಿ ತಿಂದಿದ್ಯವ್ವಾ?
ಹುಡ್ಗಿ : ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ & ಕಾರ್ನ್ ಪಿಜ್ಜಾ..
ಡಾಕ್ಟರ್ : ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?
ಹುಡ್ಗಿ : ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
***
ನ್ಯಾಯಾಲಯದಲ್ಲಿ ಕಟಕಟೆಯಲ್ಲಿ ಗುಂಡನನ್ನು ನಿಲ್ಲಿಸಿರುತ್ತಾರೆ. ನ್ಯಾಯಾಧೀಶರ ಕಠಣಾತಿಕಠಿಣ ತೀರ್ಪು ಹೊರಡಿಸುತ್ತಾರೆ.
ಜಡ್ಜ್ : ಈ ಗುಂಡನ ಎರಡೂ ಕಿವಿ ಕಟ್ ಮಾಡಿ.
ಗುಂಡ : ಬ್ಯಾಡಾ ಸ್ವಾಮಿ. ಕಿವಿ ಏನಾರ ಕಟ್ ಮಾಡಿದ್ರ ನಾ ಕುರುಡ ಆಗ್ತೀನಿ..
ಜಡ್ಜ್ : ಲೇ ಹುಚ್ಚಾ ಕಿವಿ ಕತ್ತರಿಸಿದ್ರ ಕುರುಡ ಹೆಂಗ ಆಗ್ತೀಲೇ⁉
ಗುಂಡ : ಚಷ್ಮಾದ ಕಡ್ಡಿ ಏನ್ ನಿನ್ನ ಕಿವ್ಯಾಗ ಇಡ್ಲ್ಯಾ?
***
ಹುಡುಗ : ಮಸ್ತ ಡ್ರೆಸ್ ಹಾಕಿ ಅಲಾ
ಹುಡುಗಿ : ಥ್ಯಾಂಕ್ಸ್
ಹುಡುಗ : ಲಿಫ್ಸ್ ಟಿಕ್ ಅಂತೂ ಭಾರಿ ಐತಿ
ಹುಡುಗಿ : ಥ್ಯಾಂಕ್ಸ್
ಹುಡುಗ : ಮೇಕಪ್ ಅಂತು ಖತರನಾಕ
ಹುಡುಗಿ : ಥ್ಯಾಂಕ್ಸ್ ಅಣ್ಣಾ
ಹುಡುಗ : ಆದರೂ ಎನ್ ಬಿಡವಾ ಅಂಥಾ ಏನ್ ಚಂದ ಕಾಣವಲ್ಲಿ.
***
ಭಿಕ್ಷುಕ : ಸಾರ್ ತಿನ್ನಲಿಕ್ಕೆ ಏನಾದರೂ ಕೊಡಿ ಸಾರ್....
ಗುಂಡ : ನಿನಗೆ ಕೊಟ್ಟ್ರೆ ನನಗೆ ಏನು ಸಿಗುತ್ತೆ?
ಭಿಕ್ಷುಕ : ಸಾರ್ ನಿಮಗೆ ಸ್ವರ್ಗ ಖಂಡಿತ ಸಿಗತ್ತೆ.
ಗುಂಡ : ನಿಂಗೆ ಬೆಂಗಳೂರಿಗೆ ಬೆಂಗಳೂರೇ ಕೊಡ್ತೀನಿ.
ಭಿಕ್ಷುಕ : ತಿನ್ನೋಕೇನಾದ್ರೂ ಕೊಡಿ ಅಂದ್ರೆ, ಬೆಂಗಳೂರು ಕೊಡ್ತಾರಂತೆ? ಬೆಂಗಳೂರು ಏನು ನಿಂದಾ?
ಗುಂಡ : ಮತ್ತೆ ಸ್ವರ್ಗ ಏನು ನಿಮ್ಮಪ್ಪಂದಾ?












Click it and Unblock the Notifications