ನ್ಯಾಯಾಧೀಶರಿಗೇ ಸುಬ್ಬುವಿನ ಪಾಟೀ ಸವಾಲು!
ಕೊಲೆ ಪ್ರಕರಣವೊಂದರಲ್ಲಿ ಪರೋಕ್ಷ ಸಾಕ್ಷಿಯಾಗಿದ್ದ ಸುಬ್ಬುವನ್ನು ಸಾಕ್ಷ್ಯ ನೀಡಲು ನ್ಯಾಯಾಲಯಕ್ಕೆ ಕರೆಸಿದ್ದರು. ಸುಬ್ಬು ವಿಟ್ನೆಸ್ ಬಾಕ್ಸಲ್ಲಿ ನಿಂತು "ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ" ಎಂದು ಪ್ರಮಾಣ ಸ್ವೀಕರಿಸಿದ. ನ್ಯಾಯಾಧೀಶರು ವಿಚಾರಣೆ ಆರಂಭಿಸಿದರು.
ನ್ಯಾಯಾಧೀಶರು : ಮಿಸ್ಟರ್ ಸುಬ್ಬು ಅವರೆ, ಕೊಲೆ ನಡೆದಾಗ ನೀವು ಎಲ್ಲಿದ್ದಿರಿ?
ಸುಬ್ಬು : ಅಲ್ಲೇ ಹತ್ತಿರದಲ್ಲೇ ಎಲ್ಲೋ ಇದ್ದೆ ಯುವರ್ ಆನರ್.
ನ್ಯಾಯಾಧೀಶರು : ಅಲ್ಲೇ ಎಲ್ಲೋ ಇದ್ದೆ ಅಂದ್ರೆ, ನೀನು ಗುಂಡು ಹಾರಿಸಿದ್ದು ನೋಡಿಲ್ಲ.
ಸುಬ್ಬು : ಇಲ್ಲ ಯುವರ್ ಆನರ್. ಆದರೆ, ಗುಂಡು ಹಾರಿಸಿದ್ದು ಕೇಳಿದೆ ಅಷ್ಟೆ.
ನ್ಯಾಯಾಧೀಶರು : ಹಾಗಿದ್ರೆ ನಿನ್ನ ಸಾಕ್ಷ್ಯಕ್ಕೆ ಯಾವುದು ಮೌಲ್ಯವಿಲ್ಲ. ವಿಟ್ನೆಸ್ ಬಾಕ್ಸಿಂದ್ ಕೆಳಗಿಳಿ.
ನ್ಯಾಯಾಧೀಶರ ಆದೇಶದಂತೆ ಸುಬ್ಬು ಕೆಳಗಿಳಿದ. ಕೆಳಗಿಳಿಯುವ ಮುನ್ನ ನ್ಯಾಯಾಧೀಶರಿಗೆ ಬೆನ್ನು ಮಾಡಿ ನಗಲು ಪ್ರಾರಂಭಿಸಿದ. ನ್ಯಾಯಾಧೀಶರಿಗೆ ಕೋಪ ನೆತ್ತಿಗೇರಿತು. ಆಕ್ರೋಧಿತರಾದ ನ್ಯಾಯಾಧೀಶರು ಸುಬ್ಬುವನ್ನು ಮತ್ತೆ ಕಟಕಟೆಗೆ ಬರಲು ಹೇಳಿದರು.
ನ್ಯಾಯಾಧೀಶರು : ಏಯ್, ಯಾಕೆ ನಗ್ತಾ ಇದ್ದೀಯಾ? ನಿನ್ನ ಮೇಲೆ ನ್ಯಾಯಾಲಯಕ್ಕೆ ಅವಮಾನ ಮಾಡಿದ ಕೇಸ್ ಹಾಕ್ತೀನಿ.
ಸುಬ್ಬು : (ಶಾಂತನಾಗಿ) ನಾನು ನಕ್ಕಿದ್ದನ್ನು ನೀವು ನೋಡಿದ್ರಾ, ಯುವರ್ ಆನರ್?
ನ್ಯಾಯಾಧೀಶರು : ಇಲ್ಲ, ಆದ್ರೆ ನೀನು ನಕ್ಕಿದ್ದು ನನಗೆ ಕೇಳಿತು.
ಸುಬ್ಬು : ಬರೀ ಕೇಳಿದ್ರಿಂದ ನಾನು ನಕ್ಕಿದ್ದು ಸಾಬೀತಾಗುವುದಿಲ್ಲ, ಯುವರ್ ಆನರ್!












Click it and Unblock the Notifications