ಜೋಕ್ಸ್: ಹೆಂಡ್ತೀನಾ ವಾಪಸ್ ಕರ್ಕೊಂಡು ಬಂದ್ರೆ?

ತಿಮ್ಮ: ಗುಂಡ.. ಬಹಳ ದಿನದಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಲಾರಿ ನೋಡಿದಾಗಲೆಲ್ಲಾ ಹೆದರುಕೊಳ್ಳುತ್ತೀಯಲ್ಲಾ ಯಾಕೆ?
ಗುಂಡ: ಒಂದು ದಿನ ನಾನು ಮತ್ತು ನನ್ನ ಹೆಂಡತಿ ವಾಕಿಂಗ್ ಹೋಗಿ ಬರುತ್ತಿದ್ದಾಗ ಲಾರಿಯವನೊಬ್ಬ ನನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋದ..
ತಿಮ್ಮ: ಅದಕ್ಕೆ?
ಗುಂಡ: ಲಾರಿ ನೋಡಿದಾಗಲೆಲ್ಲಾ ಎಲ್ಲಿ ಅವಳನ್ನು ವಾಪಸ್ ಕರ್ಕೊಂಡು ಬಂದು ಬಿಡುತ್ತಾನೋ ಅನ್ನೋ ಭಯ !!
***
ಒಬ್ಬ ಟೈಲರ್ ಊರಿನ ಬಟ್ಟೆಯನ್ನೆಲ್ಲಾ ಗಂಟುಮೂಟೆ ಕಟ್ಟುಕೊಂಡು ಓಡಿ ಹೋದ..ಕೆಲವರು ಗುಂಪು ಕಟ್ಟಿಕೊಂಡು ಟೈಲರ್ ಹುಡುಕಿಕೊಂಡು ಹೋದರೆ, ಇನ್ನು ಕೆಲವರು ಪೋಲೀಸ್ ಸ್ಟೇಶನ್ ಹೋಗಿ ಕಂಪ್ಲೇಂಟ್ ಕೊಟ್ಟರು.
ನಮ್ಮ ಶರ್ಟ್ ಪೀಸ್ ಕದ್ದೊಯ್ದಿದ್ದಾನೆ..ನನ್ನ ಪ್ಯಾಂಟ್ ಪೀಸ್, ಸೂಟ್.. ನನ್ನ ಪೈಜಾಮ್ ಎಂದು ಪೊಲೀಸರಿಗೆ ಕಂಪ್ಲೇಂಟ್ ಸುರಿಮಳೇನೆ ಆಯಿತು. ಸುಮ್ಮನೆ ಇದ್ದ ಗುಂಡನನ್ನು ಪೊಲೀಸರು ಕೇಳ್ತಾರೆ..
ಪೋಲೀಸ್: ಲೇ.. ನಿಂದು ಏನು ತೆಗೆದುಕೊಂಡು ಹೋಗಿದ್ದಾನೆ?
ಗುಂಡ: ಮೆಸರ್ಮೆಂಟ್ !!
***
ಗುಂಡ: ನೋಡೋ ಪಕ್ದ್ಮನೆ ಹುಡುಗೀನಾ ? ಎಷ್ಟು ಜಾಣೆ ಇದ್ದಾಳೆ. ಈ ಬಾರಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳಂತೆ. ನೀನು ಇದ್ದೀಯಾ ದಂಡಪಿಂಡ..
ಮರಿಗುಂಡ: ಸುಮ್ನಿರಪ್ಪ..
ಗುಂಡ: ಏನು ಸುಮ್ನಿರಪ್ಪ
ಮರಿಗುಂಡ: ಅವಳನ್ನು ನೋಡಿದ್ದಕ್ಕೆ ನಾನು ಫೇಲ್ ಆಗಿದ್ದು..












Click it and Unblock the Notifications