ಹೆಂಡ್ತಿ ಫ್ರೆಂಡ್ ಯಾಕೆ ಹೆಂಡ್ತಿ ಆಗಲ್ಲಾ?
ಗುಂಡ : ನನಗೆ ಬಹಳ ದಿನದಿಂದ ಒಂದು ಡೌಟ್.
ತಿಮ್ಮ : ಏನಪ್ಪಾ ಅದು?
ಗುಂಡ : ತಂಗಿ ಫ್ರೆಂಡ್ ನಂಗೂ ತಂಗಿ, ತಮ್ಮನ ಫ್ರೆಂಡ್ ನಂಗೂ ತಮ್ಮ. ಆದರೆ..
ತಿಮ್ಮ : ಆದ್ರೆ ಏನಪ್ಪಾ.
ಗುಂಡ : ಹೆಂಡ್ತಿ ಫ್ರೆಂಡ್ ಯಾಕೆ ಹೆಂಡ್ತಿ ಆಗಲ್ಲಾ? ಆಲ್ವಾ.. ಸರಿ ಇಲ್ಲ ಕಣೋ ಪ್ರಪಂಚ!
***
ರೋಗಿ : ಡಾಕ್ಟರ್.. ಇದು ನನ್ನ ಜೀವನದಲ್ಲಿ ಮೊದಲ ಆಪರೇಶನ್.. ದಯವಿಟ್ಟು ಜಾಗರೂಕತೆಯಿಂದ ಆಪರೇಶನ್ ಮಾಡಿ ಡಾಕ್ಟ್ರೆ.
ಡಾಕ್ಟರ್ : ಡೋಂಟ್ ವರಿ.. ಚಿಂತೆ ಮಾಡಬೇಡ.. ನಂದು ಕೂಡ ಇದು ಮೊದಲನೇ ಆಪರೇಶನ್!
***
ಟೀಚರ್ : ಲೇ ಮರಿಗುಂಡ.. ನೀನು ಸ್ಕೂಲಿಗೆ ಯಾಕೆ ಬರ್ತೀಯಾ?
ಮರಿಗುಂಡ : ವಿದ್ಯೆಗಾಗಿ..
ಟೀಚರ್ : ಗುಡ್.. ಮತ್ತೆ ಇವತ್ತು ಯಾಕೆ ಮಲ್ಕೊಂಡಿದ್ದೀಯಾ?
ಮರಿಗುಂಡ : ಇವತ್ತು ಅವಳು ಬಂದಿಲ್ಲ ಟೀಚರ್. ಅದಕ್ಕೆ
ಟೀಚರ್ : (ತಲೆ ಮೇಲೆ ಮೊಟಕಿ) ಯಾರು?
ಮರಿಗುಂಡ : (ದಡಬಡಿಸಿ ಎದ್ದು) ಅದೇ.. ವಿದ್ಯಾ ಟೀಚರ್.
***
ಗುಂಡಿ (ಗುಂಡನ ಪತ್ನಿ): ನಿನ್ನ ಗಂಡ ಡೈಲಿ ಕುಡ್ಕೊಂಡು ಬರ್ತಾನಲ್ಲಾ. ನಿಂಗೆ ಕೇಳೋಕೆ ಏನು?
ತಿಮ್ಮಿ (ತಿಮ್ಮನ ಪತ್ನಿ): ಕೇಳ್ದೆ.. ಆದ್ರೆ ಕೊಡಲಾಂದ್ರು.












Click it and Unblock the Notifications