ನನ್ನವಳನ್ನ ಬಿಟ್ಟಾಕಪ್ಪಾ, ನಿನ್ ಹೆಂಡ್ತೀನ ಹುಡುಕೋಣ ಬಾ!
ಗುಂಡ ಮತ್ತು ತಿಮ್ಮನ ಹೆಂಡತಿಯರು ಇದ್ದಕ್ಕಿದ್ದಂತೆ ಕಾಣೆಯಾದ್ರು. ಇಬ್ಬರೂ ಜೊತೆಗೆ ಹೆಂಡ್ರನ್ನ ಹುಡುಕಲಾರಂಭಿಸಿದರು.
ತಿಮ್ಮ : ಲೇ ಗುಂಡ ನಿನ್ನ ಹೆಂಡತಿ ನೋಡೋಕೆ ಹ್ಯಾಗಿದ್ದಾಳೋ?
ಗುಂಡ : 36 -24 -36, ಬೆಳ್ಳಗೆ, ಬೋಲ್ಡ್, ನೀಲಿ ಕಣ್ಣು, ಸಖತ್ ಸೆಕ್ಷಿಯಾಗಿದ್ದಾಳೆ. ನಿನ್ನ ಹೆಂಡತಿ ಹ್ಯಾಗಿದ್ದಾಳೋ?
ತಿಮ್ಮ : ನನ್ ಹೆಂಡತೀನ ಬಿಟ್ಹಾಕಪ್ಪಾ... ಬಾ.. ಮೊದಲು ನಿನ್ನ ಹೆಂಡತೀನ ಹುಡುಕೋಣ.
***
ಪೆಟ್ರೋಲ್ ಬೆಲೆ ಇದೇ ರೀತಿ ಗಗನಕ್ಕೇರುತ್ತಿದ್ದರೆ 2015ರ ವೇಳೆಗೆ ಬ್ಯಾಂಕ್ ಗಳ ಮುಂದೆ ಈ ರೀತಿ ಪೋಸ್ಟರ್ ಇರಬಹುದೇನೋ?
"ಸಾರ್ವಜನಿಕರಿಗೊಂದು ಸಂತಸದ ಸುದ್ದಿ, ಕಡಿಮೆ ಬಡ್ಡಿ ದರದಲ್ಲಿ ಪೆಟ್ರೋಲ್ ಲೋನ್ ಗಾಗಿ ಇಲ್ಲಿ ಸಂಪರ್ಕಿಸಿ."
ಹಾಗೆಯೆ, ಸರಕಾರ ರೈತರ ಭೂಮಿಗಳನ್ನು ಇದೇ ರೀತಿ ಕಸಿದುಕೊಳ್ಳುತ್ತಿದ್ದರೆ ಅದೇ ವೇಳೆಗೆ ಈ ರೀತಿ ಜಾಹೀರಾತು ನೋಡಲಿದ್ದೀರಿ...
"ಹೊಲದಲ್ಲಿ ಕೆಲಸ ಮಾಡಲು ಮಹಿಳೆಯರು ಬೇಕಾಗಿದ್ದಾರೆ. ಊಟ, ಎಲೆ ಅಡಿಕೆ, ವಸತಿ ಎಲ್ಲ ಸೌಲಭ್ಯಗಳನ್ನು ಮಾಲಿಕರೇ ನೀಡಲಿದ್ದಾರೆ!"
***
ಗುಂಡ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಮಧ್ಯದಲ್ಲಿ ಬಿದ್ದಿರೋ ಹಸಿರು ಬಣ್ಣದ ಮುದ್ದೆ ನೋಡಿದ..
ಎನಾಪ್ಪ ಇದೆಂದು ಅದನ್ನು ಮುಟ್ಟಿದ ನಂತರ ಹಾಗೆ ನೆಕ್ಕಿದ. ನಂತರ 'ಛೀ.. ಸೆಗಣಿ' ಎಂದು
"ಸದ್ಯ ತುಳಿದಿಲ್ಲ ನನ್ನ ಪುಣ್ಯ' ಎಂದು ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡ.
***
ಗುಂಡ : ಲೈಫ್ ಸಖತ್ ಬೇಜಾರಾಗ್ತಿದೆ ಕಣೋ?
ತಿಮ್ಮ : ಯಾಕೋ ಏನಾಯಿತೋ?
ಗುಂಡ : ಹಾಗೇ.. ಸುಮ್ನೆ ಯಾವುದಾದರೂ ಕೆರೆಗೋ.. ನದಿಗೋ.. ಸಮುದ್ರಕ್ಕೋ .. ಹೋಗಿ...
ತಿಮ್ಮ : ಹೋಗಿ...?
ಗುಂಡ : ಮೀನು ಹಿಡಿಯೋಣಾಂತ...











Click it and Unblock the Notifications