ತಿಮ್ಮ ಗುಂಡ ಸೂರ್ಯಯಾನಕ್ಕೆ ಹೊರಟರು, ಆಲ್ ದಿ ಬೆಸ್ಟ್!
ತಿಮ್ಮ : ಎಲ್ರೂ ಚಂದ್ರಯಾನ. ಚಂದ್ರಯಾನ ಅಂತಾರೆ. ಏನು ದೊಡ್ಡ ಘನಂದಾರಿ ಕೆಲ್ಸಾನೋ ಅದು?
ಗುಂಡ : ಹೌದು, ನಾವು ಸೂರ್ಯನ ಬಳಿ ಹೋಗೋಣ.
ತಿಮ್ಮ : ಆದರೆ ಸೂರ್ಯನಿಂದ ನಾವು 10 ಮಿಲಿಯನ್ ಮೈಲಿ ಒಳಗೆ ಹೋದ್ರೆ, ಹಾಗೇ ಮೆಲ್ಟ್ ಆಗಿ ಬಿಡ್ತೀವಿ ಗೊತ್ತಾ?
ಗುಂಡ : ಡೋಂಟ್ ವರಿ .. ರಾತ್ರಿ ಹೊತ್ತು ಹೋಗೋಣ ಬಿಡು.. ಏನಂತೀಯ?
***
ಗುಂಡನ ಮಗ : ಅಪ್ಪಾ.. ನೆಲದ ಮೇಲೆ ನೂರು ಮತ್ತು ಐನೂರು ರೂಪಾಯಿ ನೋಟು ಬಿದ್ದಿದ್ದರೆ, ಯಾವುದು ತಗೋತಿಯಾ?
ಗುಂಡ : ಆಫ್ ಕೋರ್ಸ್, ಐನೂರು ರೂಪಾಯಿ ನೋಟು ಕಣೋ.
ಗುಂಡನ ಮಗ : ಎಂಥ ಸ್ಟುಪಿಡ್ ಅಪ್ಪಾ ನೀನು? ಎರಡೂ ನೋಟು ಯಾಕೆ ತೆಗೋಬಾರ್ದು?
***
ಗುಂಡ ಕೆಲಸಕ್ಕೆ ಅರ್ಜಿ ಹಾಕುತ್ತಾನೆ. ಅರ್ಜಿ ಹಾಕಿದ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬರುತ್ತೆ..
ಮಾಲೀಕ : ಹಳೇ ಕಂಪೆನಿಯಲ್ಲಿ ಎಷ್ಟು ಸಮಯ ಕೆಲಸ ಮಾಡಿದ್ದೀಯಾ?
ಗುಂಡ : 30 ವರ್ಷ.
ಮಾಲೀಕ : ನಿನ್ನ ವಯಸ್ಸೆಷ್ಟು?
ಗುಂಡ : 25 ವರ್ಷ.
ಮಾಲೀಕ : ಅರೇ.. ಅರೇ.. ಅದು ಹೇಗೆ ಸಾಧ್ಯ? ನಿನಗೆ 25 ವರ್ಷ. ಅನುಭವ 30 ವರ್ಷ.
ಗುಂಡ : ಹೌದು ಸಾರ್.. ಅಲ್ಲಿ ಓವರ್ ಟೈಮ್ ಮಾಡುತ್ತಿದ್ದೆ!
***
ಜೀವನದಲ್ಲಿ ಜಿಗುಪ್ಸೆಗೊಂಡ ಗುಂಡ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ರೈಲ್ವೆ ಹಳಿ ಕಡೆ ಹೆಜ್ಜೆ ಹಾಕುತ್ತಾನೆ.. ಹೋಗ ಬೇಕಾದರೆ ಚಿಕನ್ ಬಿರಿಯಾನಿ ಮತ್ತು ಒಂದು ಕ್ವಾಟರ್ ವಿಸ್ಕಿ ಒಯ್ಯುತ್ತಾನೆ. ಇದನ್ನು ನೋಡಿದ ದಾರಿಹೋಕ ಯಾಕೆ ಇದನ್ನೆಲ್ಲಾ ತೆಗೆದು ಕೊಂಡು ಹೋಗ್ತಾ ಇದ್ದೀಯಾ ಎಂದು ತಡೆಯುತ್ತಾನೆ. ಗುಂಡ ಹೇಳ್ತಾನೆ.. " ಈ ಟ್ರೈನ್ ಏನಾದ್ರೂ ಲೇಟ್ ಆಗಿ ಬಂದು ಹೊಟ್ಟೆ ಹಸಿವಿನಿಂದ ನಾನ್ ಸತ್ರೆ ಏನಪ್ಪಾ ಮಾಡ್ಲಿ"











Click it and Unblock the Notifications