Karnataka Govt Jobs: ಅಂಗನವಾಡಿ ಶಿಕ್ಷಕಿ-ಸಹಾಯಕಿ ನೇಮಕಾತಿ, ಮಾಸಿಕ ವೇತನ ವಿವರ
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಪ್ರಸಕ್ತ 2025
ಸಾಲಿನಲ್ಲಿ ಅಂಗನವಾಡಿ ಸಹಾಯಕಿಯರು ಮತ್ತು ಶಿಕ್ಷಕಿಯರ ನೇಮಕಾತಿ ನಡೆಸುತ್ತಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಹಿ ಸುದ್ದಿ ನೀಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು (WCD Kodagu) ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಜಿಲ್ಲೆ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಶುರುವಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ನೇಮಕಾತಿ, ವಿವರ, ವೇತನ ಪೂರ್ಣ ವಿವರ ಇಲ್ಲಿದೆ.

ಕೊಡಗು ಅಂಗನವಾಡಿ ನೇಮಕಾತಿ ವಿವರ
ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು
ಹುದ್ದೆಯ: ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ
ಒಟ್ಟು ಹುದ್ದೆಗಳ: 215
ಉದ್ಯೋಗ ಸ್ಥಳ: ಕೊಡಗು
ಅರ್ಜಿ ಸಲ್ಲಿಕೆ: ಆನ್‌ಲೈನ್ ವಿಧಾನ
ವೆಬ್‌ಸೈಟ್: https://karnemakaone.kar.nic.in/
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 13
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕು. ಅರ್ಹರು ಮಾತ್ರವೇ ಅರ್ಜಿ ಸಲ್ಲಿಸಬೇಕು.
ವಯೋಮಿತಿ ಮತ್ತು ಸಡಿಲಿಕೆ
ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನ ಒಳಗಿರಬೇಕು. ವಯೋ ಸಡಿಲಿಕೆ ನೋಡುವುದಾದರೆ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಸಿಗುತ್ತದೆ. ಉಳಿದ ಜಾತಿ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ಇಲ್ಲ.
ಆಯ್ಕೆ ವಿಧಾನ, ಮಾಸಿಕ ವೇತನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮಾಡಲಾಗುವುದು. ಆ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆ ಆದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ. ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನಗಳು
ಅಭ್ಯರ್ಥಿಗಳು ಮೊದಲು ವೆಬ್‌ಸೈಟ್ https://karnemakaone.kar.nic.in/ಗೆ ಭೇಟಿ ನೀಡಬೇಕು. ಬಳಿಕ ಅಲ್ಲಿ WCD Kodagu ವಿಭಾಗ ಆಯ್ಕೆಮಾಡಿಕೊಳ್ಳಬೇಕು. ಅಲ್ಲಿ ಕಾಣುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆ ಅಧಿಸೂಚನೆ ಪಡೆದು ಓಡಿಕೊಳ್ಳಬೇಕು. ಬಳಿಕ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಬಳಿಕ ಎಲ್ಲ ವಿವರ ನಮೂದಿಸಬೇಕು. ಶುಲ್ಕ ಇದ್ದಲ್ಲಿ ಪಾವತಿಸಬೇಕು. ಅರ್ಜಿಯ ಒಂದು ಪ್ರತಿ ಭವಿಷ್ಯದ ಉಪಯೋಗಕ್ಕಾಗಿ ತೆಗೆದಿಟ್ಟುಕೊಳ್ಳಬೇಕು.












Click it and Unblock the Notifications