ಕೊಡಗು; ಮೇ 7ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಮಡಿಕೇರಿ, ಮೇ 04; ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ದಿನಾಂಕ 7ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಎಂಬಿಬಿಎಸ್ ವೈದ್ಯರು 7, ತಜ್ಞ ವೈದ್ಯರು (ಮಕ್ಕಳು) 1, ಅರವಳಿಕೆ ತಜ್ಞರು 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜನರಲ್ ಮೆಡಿಸಿನ್ 3, ಸ್ತ್ರೀರೋಗ ತಜ್ಞರು 4, ಅರವಳಿಕೆ ತಜ್ಞರು 8, ಮಕ್ಕಳ ತಜ್ಞರು 7, ಚರ್ಮ ರೋಗ ತಜ್ಞರು 1, ರೇಡಿಯೋಲಾಜಿಸ್ಟ್ 1 ಹುದ್ದೆ ಭರ್ತಿ ಮಾಡಲಾಗುತ್ತಿದೆ.
ದಿನಾಂಕ 7/5/2021 ರಂದು 10 ಗಂಟೆಗೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ನೇರ ಸಂದರ್ಶನಕ್ಕೆ ಆಗಮಿಸುವ ಸಂದರ್ಭದಲ್ಲಿ ಪೊಲೀಸರು ತಡೆದಲ್ಲಿ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆ ಪ್ರತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿಗಳನ್ನು ತೋರಿಸಿ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications