ಬಿಎಂಸಿಆರ್‌ಐ ನೇಮಕಾತಿ; 100 ಹುದ್ದೆಗೆ ನೇರ ಸಂದರ್ಶನ
ಬೆಂಗಳೂರು, ನವೆಂಬರ್ 01: ಬಿಎಂಸಿಆರ್‌ಐ ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಆಯೋಜನೆ ಮಾಡಿದೆ. ನವೆಂಬರ್ 4 ರಿಂದ 6ರ ತನಕ ಆಸಕ್ತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಕೋವಿಡ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲು ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಯು ಮೂರು ತಿಂಗಳ ಅವಧಿಗೆ ಒಳಪಟ್ಟಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 16,500 ರೂ. ವೇತನ ನೀಡಲಾಗುತ್ತದೆ.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಏಳನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತರು ನವೆಂಬರ್ 4 ರಿಂದ 6ರ ತನಕ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯ ತನಕ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ನೇರ ಸಂದರ್ಶನ ನಡೆಯುವ ಸ್ಥಳ: ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಕಚೇರಿ ಎದುರು ಇರುವ ಆವರಣ. ನೇರ ಸಂದರ್ಶನಕ್ಕೆ ಬರುವಾಗ ಅಗತ್ಯ ದಾಖಲೆಗಳನ್ನು ತರಬೇಕು.












Click it and Unblock the Notifications