ಕೋಲಾರದಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ
ಕೋಲಾರ, ಜೂನ್ 8: ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ ನಿಗದಿಯಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಮೂಲ ಅಂಕ ಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಚೀಟಿಗಳ 2 ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬಹುದು.
ನಂ.18-158 ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆ ಮತ್ತು ಕೋವಿಡ್-19 ಆಸ್ಪತ್ರೆ, ಕೋಲಾರ ಇಲ್ಲಿ ರಚಿಸಲಾದ ಐ.ಸಿ.ಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದೆ. ಇದಕ್ಕಾಗಿ 06 ತಿಂಗಳ ಮಟ್ಟಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಹುದ್ದೆಗಳು ಹಾಗೂ ವಿದ್ಯಾರ್ಹತೆ:
*ತಜ್ಞ ವೈದ್ಯರು (M.D General Medicine/Md pulmonary Medical DM/DNB Cardiology/Intersivist/Anaesthesia) 06 ಹುದ್ದೆಗಳು,
* ವೈದ್ಯರು (MBBS) 12 ಹುದ್ದೆಗಳು,
* ಶುಶ್ರೂಷಕರು (BSC Nursing/GNM Training Passed) 18 ಹುದ್ದೆಗಳು,
* ಐ.ಸಿ.ಯು ಟೆಕ್ನಿಷಿಯನ್ (Diploma in Anaesthesia care Technology/DOTT/Equivalent) 01 ಹುದ್ದೆ,
* ಗ್ರೂಪ್ 'ಡಿ' (SSLC Pass) 06 ಹುದ್ದೆಗಳು,
* ಮೆಂಟೇನೆನ್ಸ್ ಇಂಜಿನಿಯರ್ (Diploma in Mechanical/Electrical/Electronics/Equivalent) 01 ಹುದ್ದೆ, * ಬಯೋ-ಮೆಡಿಕಲ್ ಇಂಜಿನಿಯರ್ (BE in Bio Medical Engineering/Diploma in Bio Medical Engineering 5 years Experience) 01 ಹುದ್ದೆ.
ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರಗಳೊಂದಿಗೆ ಜೂನ್ 10 ಮತ್ತು ಜೂನ್ 11 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿ, ಎಸ್.ಎನ್.ಆರ್. ಆಸ್ಪತ್ರೆ ಕೋಲಾರ ಇಲ್ಲಿ ಹಾಜರಾಗಲು ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ.