57 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ವಿಜಯಾ ಬ್ಯಾಂಕ್

Posted By: Gururaj
Subscribe to Oneindia Kannada

ಬೆಂಗಳೂರು, ಏಪ್ರಿಲ್ 13 : ವಿಜಯಾ ಬ್ಯಾಂಕ್ 57 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು 27 ಏಪ್ರಿಲ್ 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿಜಯಾ ಬ್ಯಾಂಕ್ ಆನ್‌ಲೈನ್ ಮೂಲಕ ಮ್ಯಾನೇಜರ್ ಚಾರ್ಟೆಡ್ ಅಕೌಂಟೆಂಟ್, ಮ್ಯಾನೇಜರ್ ಲಾ, ಮ್ಯಾನೇಜರ್ ಸೆಕ್ಯುರಿಟಿ ಇನ್ ಎಂಎಂಜಿ ಸ್ಕೇಲ್ -2 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

113 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ ಕೊಂಕಣ ರೈಲ್ವೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಫಾರ್ ಮ್ಯಾನೇಜರ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಲಾ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಲ್ (ಎಲ್‌ಎಲ್‌ಬಿ) (ರೆಗ್ಯುಲರ್ ಫುಲ್ ಟೈಂ) ಪರೀಕ್ಷೆಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಉತ್ತಿರ್ಣರಾಗಿರಬೇಕು. ಸೆಕ್ಯೂರಿಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

Vijaya Bank recruitment : Apply for 57 manager posts

ಮ್ಯಾನೇಜರ್ ಚಾರ್ಟೆಡ್ ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 35 ವರ್ಷ, ಮ್ಯಾನೇಜರ್ ಲಾ ಹುದ್ದೆ, ಮ್ಯಾನೇಜರ್ ಸೆಕ್ಯೂರಿಟಿ ಹುದ್ದೆಗೆ 20 ರಿಂದ 45 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5, ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ 3, PWD ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ವೇತನ ಶ್ರೇಣಿ 31,705 ರಿಂದ 45,950 ರೂ.ಗಳು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡೆಬಿಟ್, ಕ್ರೆಡಿಟ್ ಅಥವ ನೆಟ್ ಬ್ಯಾಂಕಿಗ್ ಮೂಲಕ ಅರ್ಜಿ ಶುಲ್ಕವನ್ನು ನೆಟ್ ಬ್ಯಾಕಿಂಗ್ ಮೂಲಕ ಪಾವತಿ ಮಾಡಬೇಕಾಗಿದೆ. ಎಸ್‌ಸಿ/ಎಸ್‌ಟಿ/PWD ಅಭ್ಯರ್ಥಿಗಳಿಗೆ 100 ರೂ. ಶುಲ್ಕ, ಓಬಿಸಿ ಸೇರಿದಂತೆ ಉಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಪ್ರಮುಖ ಅಂಶಗಳು
* ವಿಜಯಾ ಬ್ಯಾಂಕ್‌ನಲ್ಲಿ ಕೆಲಸ
* ಮ್ಯಾನೇಜರ್ ಹುದ್ದೆಗಳು
* 57 ಹುದ್ದೆ
* ದೇಶದ ಯಾವುದೇ ನಗರದಲ್ಲಿ ಕೆಲಸ

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijaya Bank invites applications (On-Line) for recruitment for the post of Manager Chartered Accountant , Manager Law , Manager- Security. 27/4/2018 Last date for submit applications.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ