ಏ22ರಿಂದ ಕೋಲಾರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ

Posted By:
Subscribe to Oneindia Kannada

ಕೋಲಾರ, ಏಪ್ರಿಲ್ 21 : ಕೋಲಾರ ಜಿಲ್ಲಾ ಆಡಳಿತ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ನಿರುದ್ಯೋಗಳಿಗೆ ಏಪ್ರಿಲ್ 22 ಮತ್ತು 23ರಂದು (ಶನಿವಾರ ಮತ್ತು ಭಾನುವಾರ) ಎರಡು ದಿನಗಳ ಕಾಲ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಇಲ್ಲಿನ ಶ್ರೀನಿವಾಸಪುರ ರಸ್ತೆಯಲ್ಲಿರುವ ಸಿ ಬೈರೇಗೌಡ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಆರ್ ರಮೇಶ್ ಕುಮಾರ್ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದು, ಶಾಸಕ ವರ್ತೂರ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.

The Kolar District Administration organized job fair from April 22 to 23

ಉದ್ಯೋಗ ಮೇಳಕ್ಕೆ ನೋಡಲ್ ಅಧಿಕಾರಿಗಳನ್ನು ಹಾಗೂ ಸಹಾಯ ಅಧಿಕಾರಿಗಳನ್ನು ಮಾಡಲಾಗಿದ್ದು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು. ಉದ್ಯೋಗಾಕಾಂಕ್ಷಿಗಳನ್ನು ಹೊರತು ಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಶುಕ್ರವಾರ ನಡೆದ ಉದ್ಯೋಗ ಮೇಳ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಏ.22 ಮತ್ತು 23 ರಂದು ನಡೆಯಲಿರುವ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿತರನ್ನು ಒಳಗೆ ಬಿಡಲು ಅವಕಾಶ ಇದೆ. ನಂತರ ಅಧಿಕಾರಿಗಳು, ವಾಲೆಂಟರಿಗಳನ್ನು, ಸಿಬಿಐಟಿ ಸ್ಟಾಪ್ ಮತ್ತು ಅಭ್ಯರ್ಥಿಗಳನ್ನು ಮಾತ್ರ ಒಳಗೆ ಬಿಡಬೇಕು. ಅದನ್ನು ಹೊರತು ಪಡಿಸಿ ಬೇರೆ ಯಾರನ್ನೂ ಸಹ ಒಳಗೆ ಬಿಡಬೇಡಿ ಎಂದು ಡಿವೈಎಸ್ಪಿ ಅಬ್ದುಲ್ ಸತ್ತಾರ್ ಅವರಿಗೆ ನಿರ್ದೇಶನ ನೀಡಿದರು.

ವೇದಿಕೆ ಕಾರ್ಯಕ್ರಮ ಮುಗಿಯುವವರೆಗೆ ಅಭ್ಯರ್ಥಿಗಳನ್ನು ಬಿಲ್ಡಿಂಗ್ ಒಳಗಡೆ ಹೋಗಲು ಬಿಡಬೇಡಿ. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಅವರ ಮೊಬೈಲ್ಗೆ ಕಳುಹಿಸಿರುವ ಮೆಸೆಜ್ ತೋರಿಸಿದರೆ ಮಾತ್ರ ಸಂದರ್ಶನಕ್ಕೆ ಹೋಗಲು ಅವಕಾಶ ನೀಡಿ. ಉದ್ಯೋಗ ಮೇಳದ ಜವಾಬ್ದಾರಿಗಳನ್ನು ವಹಿಸಿರುವವರಿಗೆ ವಿವಿಧ ಬಣ್ಣಗಳ ಐಡೆಂಟಿ ಕಾರ್ಡ್ ನೀಡಲು ತಿಳಿಸಿದರು.

ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ 3 ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶ ಇರುತ್ತದೆ.ಅವರು ಸಂದರ್ಶನ ಮುಗಿಸಿದ ಕಾಲಹರಣ ಮಾಡದೆ ಹೊರ ನಡೆದು ಇತರರಿಗೆ ಅವಕಾಶ ನೀಡಬೇಕು. ಅಭ್ಯರ್ಥಿಗಳಿಗೆ ಗೊಂದಲ ಉಂಟಾದರೆ ಅದನ್ನು ನಿವಾರಿಸಲು ಒಂದು ಸ್ಟಾಲ್ ತೆರೆಯಲು ಸೂಚನೆ ನೀಡಿದರು. ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು.

ಮೊದಲ ದಿನ ಹೆಚ್ಚು ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳದಲ್ಲಿ ನೋಂದಣಿ ಮಾಡಿಕೊಂಡವರಿಗೆ ಎರಡನೇ ದಿನ ಸಂದರ್ಶನಕ್ಕೆ ಹೋಗಬಹುದು. ಮೊದಲ ದಿನ ನೋಂದಣಿ ಮಾಡಿಕೊಂಡವರಿಗೆ ಅರ್ಜಿ ನೀಡಲಾಗುವುದು. ಅದನ್ನು ತೆಗೆದುಕೊಂಡು ತೆರಳಬೇಕು. ನಂತರ 2 ನೇ ದಿನ ಬಂದು ಸಂದರ್ಶನಕ್ಕೆ ಹೋಗಬೇಕು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kolar Udyog Mela is jointly organized by Kolar District Administration, Department of Industries and Commerce and Directorate of Vocational Education.The fair held on the 22nd and 23rd of April 2017 at C.Byregowda Institute of Technology, Srinivaspur Road, Kolar.
Please Wait while comments are loading...