TCS Good News: ಟಿಸಿಎಸ್ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್
TCS Goog News: ಕಳೆದ ಕೆಲವು ತಿಂಗಳುಗಳಿಂದ ದೈತ್ಯ ಐಟಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ಟಿಸಿಎಸ್ ಕೂಡ ಇದೇ ಹಾದಿ ಹಿಡಿದು ಅಚ್ಚರಿ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಇಷ್ಟು ಮಂದಿ ತನ್ನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್‌ವೊಂದನ್ನು ಘೋಷಣೆ ಮಾಡಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ಅತಿ ದೊಡ್ಡ ಐಟಿ ಕಂಪನಿಗಳಲ್ಲೊಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಉದ್ಯೋಗಿಗಳ ವೆತನ ಪರಿಷ್ಕರಣೆ ಮಾಡುವುದಾಗಿ ಘೋಷಣೆ ಮಾಡಿದೆ. ಹಾಗಾದ್ರೆ ಯಾರಿಗೆ ಹಾಗೂ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

ಇತ್ತೀಚೆಗಷ್ಟೇ ಟಿಸಿಎಸ್ 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಘೋಷಣೆ ಮಾಡಿತ್ತು. ಆದರೂ ಇದೀಗ ಸುಮಾರು ಶೇಕಡ 80ರಷ್ಟು ಉದ್ಯೋಗಿಗಳ ವೇತನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದೆ. ಅಲ್ಲದೆ, ಈ ಘೋಷಣೆ ಅನ್ವಯ ಆಗುವುದು ಮಧ್ಯಮ ಮತ್ತು ಕಿರಿಯ ಹಂತದ ಉದ್ಯೋಗಿಗಳಿಗೆ ಅಂತಲೂ ತಿಳಿದುಬಂದಿದೆ.
ಕಂಪನಿಯು ಈ ವರ್ಷದ ಅವಧಿಯಲ್ಲಿ ಸುಮಾರು 12,000 ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿತ್ತು. ಸೆಪ್ಟೆಂಬರ್ 1, 2025ರಿಂದ ಜಾರಿಗೆ ಬರುವ ವೇತನ ಹೆಚ್ಚಳವನ್ನು ಆಗಸ್ಟ್ 6ರ ಬುಧವಾರದಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಮತ್ತು ಸಿಎಚ್‌ಆರ್‌ಒ ನಿಯೋಜಿತ ಕೆ.ಸುದೀಪ್ ಅವರು ಆಂತರಿಕ ಇಮೇಲ್ ಮೂಲಕ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಿ3ಎ ಮತ್ತು ತತ್ಸಮಾನ ಶ್ರೇಣಿಗಳವರೆಗಿನ ಎಲ್ಲಾ ಅರ್ಹ ಸಹವರ್ತಿಗಳಿಗೆ ಪರಿಹಾರ ಪರಿಷ್ಕರಣೆ ಘೋಷಣೆ ಮಾಡಲು ನಾವು ಸಂತೋಷಪಡುತ್ತೇವೆ. ಇದು ನಮ್ಮ ಕಾರ್ಯಪಡೆಯ ಶೇಕಡ 80ರಷ್ಟು ಜನರನ್ನು ಒಳಗೊಂಡಿದೆ. ಇದು ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ಅಂತಾ ವರದಿಯಾಗಿದೆ.
ನಾವು ಒಟ್ಟಾಗಿ ಟಿಸಿಎಸ್‌ನ ಭವಿಷ್ಯವನ್ನ ನಿರ್ಮಿಸುವಾಗ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಅದು ಹೇಳಿದೆ. ವೇತನ ಹೆಚ್ಚಳದ ಪ್ರಮಾಣದ ವಿವರಗಳು ತಕ್ಷಣ ಲಭ್ಯ ಇಲ್ಲ ಅಂತಲೂ ತಿಳಿಸಿದೆ.
ಹೊಸಬರ ನೇಮಕಕ್ಕೆ ನಿರ್ಧಾರ: ಮತ್ತೊಂದೆಡೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತನ್ನ ಉದ್ಯೋಗಾಕಾಂಕ್ಷಿಗಳಿಗೆ ಇನ್ಫೋಸಿಸ್ ಗುಡ್ ನ್ಯೂಸ್ ಕೊಟ್ಟಿದ್ದು, ಇದೇ ವರ್ಷದಲ್ಲಿ 20,000 ಹೊಸಬರನ್ನು ನೇಮಕ ಮಾಡಿಕಿಳ್ಳುವುದಾಗಿ ಘೋಷಣೆ ಮಾಡಿತ್ತು. ಈ ಬಗ್ಗೆ ಸ್ವತಃ ಕಂಪನಿಯ ಸಿಇಒ ಸಲೀಲ್ ಪರೇಖ್ ಮಾಹಿತಿ ನೀಡಿದ್ದರು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17,000ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿದ್ದೇವೆ. ಈ ವರ್ಷ ಸುಮಾರು 20,000 ಕಾಲೇಜು ಪದವೀಧರರನ್ನು ಕಂಪನಿಗೆ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.
ಎಐ ತಂತ್ರಜ್ಞಾನದಿಂದಾಗಿ ಹೂಡಿಕೆ ಮಾಡಲಾಗುತ್ತಿದೆ. ಇದು ಕಂಪನಿಗೆ ಮುಂಚೂಣಿಗೆ ಬರಲು ಸಹಾಯ ಮಾಡಿದೆ. ಹಲವು ಹಂತಗಳಲ್ಲಿ ಕಂಪನಿಯ ಸುಮಾರು 2,75,000 ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು.












Click it and Unblock the Notifications