TMC Recruitment: ಟಾಟಾ ಮೆಮೋರಿಯಲ್ ಕೇಂದ್ರ: ಭರ್ಜರಿ ಉದ್ಯೋಗ, ಮಾಸಿಕ ₹78000 ವೇತನ
ಬೆಂಗಳೂರು, ಜನವರಿ 17: ಕೇಂದ್ರ ಸರ್ಕಾರಿ ಮಟ್ಟದಲ್ಲಿ ಉದ್ಯೋಗ ಹಾಗೂ ಟಾಟಾ ಸಮೂಹ ಸೇರ ಬಯಸುವವರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಟಾಟಾ ಮೆಮೋರಿಯಲ್ ಸೆಂಟರ್ (TMC) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಈ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಕಸ್ತರು ಕೂಡಲೇ ಸೂಕ್ತ ದಾಖಲೆಗಳ ಸಮೇತರವಾಗಿ ಅರ್ಜಿ ಸಲ್ಲಿಸಬೆಕು.
ಟಾಟಾ ಮೆಮೋರಿಯಲ್ ಕೇಂದ್ರ (TMC), ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಮಹಾತ್ಮ ಪಂಡಿತ್ ಮದನ್ ಮೋಹನ್ ಮಾಲ್ವಿಯ ಕ್ಯಾನ್ಸರ್ ಕೇಂದ್ರದಲ್ಲಿ ವಿವಿಧ 06 ಪ್ರಮುಖ ಹುದ್ದೆಗಳು ಖಾಲಿ ಇವೆ. ಅರ್ಹತೆ ಮೇರೆಗೆ ಆಯ್ಕೆ ಮಾಡಿಕೊಂಡು ಕೈ ತುಂಬ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಲಾದ ಪೂರ್ಣ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಮಕಾತಿ ಪೂರ್ಣ ವಿವರ ಹೀಗಿದೆ
ನೇಮಕಾತಿ ಸಂಸ್ಥೆ: ಟಾಟಾ ಮೆಮೋರಿಯಲ್ ಕೇಂದ್ರ (TMC)
ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್
ಒಟ್ಟು ಹುದ್ದೆಗಳು: 06
ಅರ್ಜಿ ಸಲ್ಲಿಕೆ ಕೊನೆ ದಿನ: 2025 ಜನವರಿ 29
ಪೋಸ್ಟಿಂಗ್: ವಾರಣಾಸಿ
ವಯೋಮಿತಿ: 45
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅಧಿಕೃತ ವೆಬ್‌ಸೈಟ್ ವಿಳಾಸ: https://tmc.gov.in/
ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಹೀಮಟೋಪೆಥಾಲಜಿ, ಪ್ಲಾಸ್ಟಿಕ್ ಸರ್ಜರಿ, ಮೆಡಿಕಲ್ ಆಂಕಾಲಜಿ ಮತ್ತು ಬಾನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಜನರಲ್ ಮೆಡಿಸಿನ್ ವಿಭಾಗದಲ್ಲಿ ತಲಾ ಒಂದಂತೆ ಒಟ್ಟು 04 ಮಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಸರ್ಜಿಕಲ್ ಆಂಕಾಲಜಿ ವಿಭಾಗದಲ್ಲಿ ಒಟ್ಟು 02 ಹುದ್ದೆಗಳು ಖಾಲಿ ಇವೆ. ಇವುಗಳ ನೇಮಕಾತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಟಿಎಂಸಿ ಮಾಹಿತಿ ನೀಡಿದೆ.

ವಿದ್ಯಾರ್ಹತೆ ವಿವರ
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಹುದ್ದೆಗಳ ವಿಷಯಕ್ಕೆ ಅನುಗುಣವಾಗಿ DM/ MD/DNB/ ತತ್ಸಮಾನ ಸ್ನಾತಕೋತ್ತರ ಪದವಿಯನ್ನು ಕಡ್ಡಾಯವಾಗಿ ಪಡೆದಿರುವವರು ಮಾತ್ರವೇ ಸಲ್ಲಿಸಬೇಕು.
ಅಭ್ಯರ್ಥಿಗಳ ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಆಯಾ ಹುದ್ದೆಗನುಗುಣವಾಗಿದ್ದು, ಗರಿಷ್ಠ 40 ಮತ್ತು 45 ವರ್ಷ ಮೀರಿರಬಾರದು. ಆಯಾ ವಯೋಮಾನದ ಅಭ್ಯರ್ಥಿಗಳು ಯಾವ ಹುದ್ದೆ, ವಿವರ ಎಂಬುದು ಗಮನಿಸಿ ಅರ್ಜಿ ಸಲ್ಲಿಸಬೇಕು. ಇದಷ್ಟು ಮಾತ್ರವಲ್ಲದೇ ಕನಿಷ್ಠ ಒಂದರಿಂದ ಮೂರು ವವ\ರ್ಷ ಕಾರ್ಯಾನುಭವ ಹೊಂದಿದವರು ಮಾತ್ರವೇ ಅರ್ಜಿ ಸಲ್ಲಿಸುವಂತೆ ಕೋರಿದೆ.
ಮಾಸಿಕ ವೇತನ
ಅರ್ಜಿ ಸಲ್ಲಿಸಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವಾರಣಾಸಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. 12ನೇ ವೇತನ ಶ್ರೇಣಿ ಪ್ರಕಾರ ಪ್ರತಿ ಹುದ್ದೆಯ ಅಭ್ಯರ್ಥಿಗೂ ಮಾಸಿಕ 78,800 ರೂಪಾಯಿ ವೇತನ ನೀಡಲಾಗುವುದು ಎಂದು ಟಾಟಾ ಮೆಮೋರಿಯಲ್ ಕೇಂದ್ರ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನಗಳು
ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://tmc.gov.in/ ಭೇಟಿ ನೀಡಬೇಕು. ನಂತರ ಪರದೆಯಲ್ಲಿ ಕಾಣುವ ಅರ್ಜಿ ಸಲ್ಲಿಕೆ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.
ನಂತರ ತೆರೆದುಕೊಳ್ಳುವ ಪರದೆಯಲ್ಲಿ ಕಾಣುವ 'ಹೊಸ ನೋಂದಣಿ' ಆಯ್ಕೆ ಮಾಡಿಕೊಂಡು ಅಗತ್ಯ ವಿವರ ನಮೂದಿಸಿ ನೋಂದಾಯಿಸಿಕೊಳ್ಳಬೇಕು. ನಂತರ ಅಗತ್ಯ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.











Click it and Unblock the Notifications