ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿವೆ, ಇಂದೇ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 26: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಹಾಯಕ ಉಪಾಧ್ಯಕ್ಷ, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಸೆಪ್ಟೆಂಬರ್ 05, 2016.

ಹುದ್ದೆ : ವಿಶೇಷ ಅಧಿಕಾರಿ
ಹುದ್ದೆಗಳ ಸಂಖ್ಯೆ:33
* ಉಪಾಧ್ಯಕ್ಷ, ಪ್ರಾಡೆಕ್ಟ್ ಡೆವಲ್ ಪ್ಮೆಂಟ್ ಮ್ಯಾನೇಜರ್, ಹಿರಿಯ ಮ್ಯಾನೇಜರ್ ಸಹಾಯಕ ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿವೆ.

State Bank of India recruitment of Specialist Cadre Officer 2016

ವಯೋಮಿತಿ: ಅಭ್ಯರ್ಥಿಯ ವಯಸ್ಸು 26 ರಿಂದ 40 ವರ್ಷದೊಳಗಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇದೆ.

ವಿದ್ಯಾರ್ಹತೆ: ಬಿಇ/ಬಿಟೆಕ್ (ಸಿಎಸ್/ಐಟಿ/ಎಲೆಕ್ಟ್ರಾನಿಕ್ಸ್) ಅಥವಾ ಎಂಬಿಎ(ಫಿನಾನ್ಸ್/ಮಾರ್ಕೆಟಿಂಗ್)

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600 ರು ಅರ್ಜಿ, ಒಬಿಸಿ ಅಭ್ಯರ್ಥಿಗಳಿಗೆ 100 ರು ಪ್ರತಿ ಅರ್ಜಿಗೆ ವಿಧಿಸಲಾಗಿದೆ. ಆನ್ ಲೈನ್ ಮೂಲಕ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಇಂಟರ್ ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.

ಮುಖ್ಯ ದಿನಾಂಕಗಳು:
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05/09/2016
ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 20/09/2016

ಅರ್ಜಿ ಸಲ್ಲಿಸುವುದು ಹೇಗೆ ಈ ಕೆಳಗಿನ ಪಿಡಿಫ್ ನೋಡಿ ಲಿಂಕ್ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿ

ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಪ್ರಶ್ನೆಗಳಿಗೆ FAQs ಹಾಗೂ ಉತ್ತರ ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ:

ಅರ್ಜಿ ಸಲ್ಲಿಸುವುದು ಹೇಗೆ?
* www.sbi.co.in ಗೆ ಲಾಗ್ ಇನ್ ಆಗಿ
* ಇತ್ತೀಚಿನ ಪ್ರಕಟಣೆಯನ್ನು ನೋಡಿ, ಸೂಕ್ತ ಅರ್ಜಿಯನ್ನು ಆಯ್ಕೆ ಮಾಡಿಕೊಳ್ಳಿ
* ಅರ್ಜಿಯನ್ನು ತುಂಬಿ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ
* ಅರ್ಜಿ ಶುಲ್ಕವನ್ನು ಅನ್ ಲೈನ್ ನಲ್ಲಿ ಪಾವತಿಸಿ[ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿವೆ, ಇಂದೇ ಅರ್ಜಿ ಹಾಕಿ]

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India (SBI) has announced notification for the recruitment of Specialist Cadre Officer (Vice President, Product Development Managers, Senior Manager, Manager & Assistant Vice President) vacancies.. Eligible candidates can apply Online from 22-08-2016 to 05-09-2016
Please Wait while comments are loading...