ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಲ್ಲಿ ವಿಶೇಷ ಅಧಿಕಾರಿ ಹುದ್ದೆಗಳಿವೆ, ಅರ್ಜಿ ಹಾಕಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 11: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜೂನ್ 06ರಿಂದಲೇ ಆನ್ ಲೈನ್ ನಲ್ಲಿ ಅರ್ಜಿ ಲಭ್ಯವಿದ್ದು, ಜುಲೈ 20 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ.

ಅರ್ಹ ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿ ಕಾರ್ಯವು ಅರ್ಜಿ ಶುಲ್ಕಪಾವತಿ(ಆನ್ ಲೈನ್ ಮೂಲಕ ಅಥವಾ ನೇರ ಶುಲ್ಕ ಪಾವತಿ) ಖಾತ್ರಿ ಆದ ಬಳಿಕ ಪೂರ್ಣಗೊಳ್ಳಲಿದೆ.

State Bank of India Specialized position Jobs 2016

ಹುದ್ದೆಗಳ ವಿವರ :
* ಉಪಾಧ್ಯಕ್ಷ, ಸಿಆರ್ ಎಂ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಎಂಬಿಎ ಮಾರ್ಕೆಟಿಂಗ್ ಅಥವಾ ಎಂಸಿಎ), (ಅನುಭವ: 10 ವರ್ಷ)
* ಉಪಾಧ್ಯಕ್ಷ, ಕಸ್ಟಮರ್ ಅನಾಲಿಟಿಕ್ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಎಂಬಿಎ ಮಾರ್ಕೆಟಿಂಗ್/ಫಿನಾನ್ಸ್/ಅಪರೇಷನ್ಸ್ ಅಥವಾ ಎಂಸಿಎ), (ಅನುಭವ: 10 ವರ್ಷ)
* ಉಪಾಧ್ಯಕ್ಷ, ಟೆಕ್ನಿಕಲ್ ಆರ್ಕಿಟೆಕ್ಟ್ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಬಿಇ/ಬಿಟೆಕ್/ಎಂಎಸ್ಸಿ/ಎಂಟೆಕ್), (ಅನುಭವ: 10 ವರ್ಷ)

ಅರ್ಜಿ ಸಲ್ಲಿಸಲು : https://www.sbi.co.in/careers ಗೆ ಭೇಟಿ ನೀಡಿ Latest Announcements ನಲ್ಲಿ ಸಂಬಂಧಪಟ್ಟ ಒಂದು ಹುದ್ದೆಯ ಅರ್ಜಿಯನ್ನು ಭರ್ತಿ ಮಾಡಿ ರಸೀತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅರ್ಜಿ ಶುಲ್ಕ 600 ರು ಗಳನ್ನು ಆನ್ ಲೈನ್ ನಲ್ಲೇ ಪಾವತಿಸಬಹುದು.

* ಅರ್ಜಿ ಸಲ್ಲಿಸಲು ಆನ್ ಲೈನ್ ನೋಂದಣಿ ಆರಂಭ : 06/07/2016
* ಆನ್ ಲೈನ್ ಮೂಲಕ ನೋಂದಣಿ ಹಾಗೂ ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 20/07/2016
* ಅರ್ಜಿ ಸಲ್ಲಿಸಲು ಪೋಸ್ಟ್ ಮೂಲಕ ಕೊನೆ ದಿನಾಂಕ : 270/07/2016

ಅರ್ಜಿ ವಿಳಾಸ: Central Recruitment & Promotion Department, Corporate Centre,
3rd Floor, Atlanta Building, Nariman Point, Mumbai - 400 021

ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ಪೂರ್ಣ ವಿವರ ಪಡೆದುಕೊಳ್ಳಿ: ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

English summary
State Bank of India invites Online applications from Indian citizens for appointment in following Positions in Specialist Cadre on contract basis in State Bank of India. Candidates are requested to apply Online through official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X