SSLR Recruitment 2023: ಕಂದಾಯ ಇಲಾಖೆಯಲ್ಲಿ 2000 ಖಾಲಿ ಹುದ್ದೆಗಳಿಗೆ ಫೆ. 20ರೊಳಗೆ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ. ಸರ್ಕಾರಿ ಕೆಲಸ ಸೇರಬಯಸುವವರಿಗೆ ನಿಮ್ಮ ನಿಮ್ಮ ಜಿಲ್ಲೆಯಲ್ಲೇ ಕೆಲಸ ಮಾಡಲು ಕೂಡಲೇ ಅರ್ಜಿ ಸಲ್ಲಿಸಿ, ಅದರ ವಿಧಾನ ತಿಳಿಯಿರಿ.

ಬೆಂಗಳೂರು, ಫೆಬ್ರವರಿ 08: ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಖಾಲಿ ಇರುವ ಸುಮಾರು 2000 ಸರ್ವೇ ಸೆಟಲ್​ಮೆಂಟ್​ ಹಾಗೂ ಲ್ಯಾಂಡ್​ ರೆಕಾರ್ಡ್ಸ್ (SSLR)​ ಕರ್ನಾಟಕ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಿ.

ರಾಜ್ಯ ಸರ್ಕಾರಿ ನೌಕರಿ ಸೇರಬೇಕೆನ್ನುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು. ಕಂದಾಯ ಇಲಾಖೆಯಲ್ಲಿ ರಾಜ್ಯ ಪ್ರತಿ ಜಿಲ್ಲೆ ವ್ಯಾಪ್ತಿಯಲ್ಲಿ ಇಂತಿಷ್ಟು ಎಂದು ಹುದ್ದೆಗಳು ಖಾಲಿ ಇವೆ. ಆಯಾ ಜಿಲ್ಲೆಯ ಅರ್ಹ ಅಭ್ಯರ್ಥಿಗಳೇ ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗ ಪಡೆಯಬಹುದು. ಅರ್ಹರು ಆನ್​ಲೈನ್​ (https://landrecords.karnataka.gov.in/service201/)​ ಮೂಲಕವೇ ಅರ್ಜಿ ಸಲ್ಲಿಸಬೇಕು.

ಯಾವ ಜಿಲ್ಲೆಗಳಲ್ಲಿ ಎಷ್ಟೇಷ್ಟು ಹುದ್ದೆಗಳು ಖಾಲಿ ಇವೆ?, ಅರ್ಜಿ ಸಲ್ಲಿಕೆ ಹೇಗೆ, ವೇತನ, ವಿದ್ಯಾರ್ಹತೆ, ವಿಯೋಮಿತಿ ಸೇರಿದಂತೆ ಅಗತ್ಯ ಎಲ್ಲ ಮಾಹಿತಿ ತಿಳಿಯಲು ಮುಂದೆ ಓದಿ.

SSLR Recruitment 2023: Revenue Dept invites application for 2000 empty posts of statewide

ಖಾಲಿ ಹುದ್ದೆಗಳ ಪೂರ್ಣ ವಿವರ

ಕೆಲಸದ ಸಂಸ್ಥೆ- ಕರ್ನಾಟಕ ಕಂದಾಯ ಇಲಾಖೆ

ಹುದ್ದೆ ಹೆಸರು- ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್

ಎಷ್ಟು ಹುದ್ದೆ- 2000

ವಿದ್ಯಾರ್ಹತೆ? - ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ಪಿಯುಸಿ

ಸಂಬಳ ಎಷ್ಟು?- ನಿಯಮಗಳ ಅನ್ವಯ ಮಾಸಿಕ ವೇತನ

ಉದ್ಯೋಗ ಸ್ಥಳ- ಕರ್ನಾಟಕದಾದ್ಯಂತ

ಅರ್ಜಿ ಸಲ್ಲಿಕೆಗೆ ಕಡೆಯ ದಿನ- ಫೆಬ್ರವರಿ 20

ಜಿಲ್ಲಾವಾರು ಖಾಲಿ ಹುದ್ದೆಗಳ ಮಾಹಿತಿ

ಕೋಲಾರ- 53

ಚಿಕ್ಕಬಳ್ಳಾಪುರ- 45

ಗದಗ- 54

ಚಿಕ್ಕಮಗಳೂರು- 83

ಉಡುಪಿ- 86

ಉತ್ತರ ಕನ್ನಡ- 75

ಕೊಡಗು- 25

ಚಿತ್ರದುರ್ಗ- 73

ಚಾಮರಾಜನಗರ- 35

ತುಮಕೂರು- 110

ಬಿಜಾಪುರ- 32

ಬೆಳಗಾವಿ - 85

ಬಳ್ಳಾರಿ- 55

ವಿಜಯನಗರ- 47

ದಕ್ಷಿಣ ಕನ್ನಡ- 36

ದಾವಣಗೆರೆ- 95

ಧಾರವಾಡ- 92

ಬೆಂಗಳೂರು ಗ್ರಾಮಾಂತರ- 66

ಬೆಂಗಳೂರು ಜಿಲ್ಲೆ- 125

ಯಾದಗಿರಿ- 20

ರಾಮನಗರ - 100

ರಾಯಚೂರು- 40

ಶಿವಮೊಗ್ಗ- 125

ಹಾವೇರಿ- 152

ಹಾಸನ- 60

ಬಾಗಲಕೋಟೆ- 47

ಬೀದರ್- 35

ಮಂಡ್ಯ- 71

ಮೈಸೂರು- 40

ಕೊಪ್ಪಳ- 28

ಕಲಬುರಗಿ- 10

ಒಟ್ಟು -2000 ರಾಜ್ಯಾದ್ಯಂತ ಖಾಲಿ ಇದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.

SSLR Recruitment 2023: Revenue Dept invites application for 2000 empty posts of statewide

ಶೈಕ್ಷಣಿಕ ಅರ್ಹತೆ ಏನಿರಬೇಕು

ಖಾಲಿ ಇರುವ ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯದಲ್ಲಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್ ಇಲ್ಲವೇ, ಐಟಿಐ ಅನ್ನು ಕಡ್ಡಾಯವಾ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.

ವಯಸ್ಸು ಎಷ್ಟಿರಬೇಕು

ಸರ್ಕಾರಿ ಉದ್ಯೋಗ ಸೇರಲು ಇಚ್ಚಿಸುವ ಆಸಕ್ತ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇದೇ ವರ್ಷ 2023 ಫೆಬ್ರವರಿ 20ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 65 ವರ್ಷ ದಾಟಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಶುಲ್ಕ-ಅನುಭವ ತಿಳಿಯಿರಿ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ 1000 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಜೊತೆಗೆ ಆನ್‌ಲೈನ್‌ನಲ್ಲೇ ಪಾವತಿಸಬೇಕು. ಇನ್ನೂ ಇತರೆ ಶುಲ್ಕವು ಇದೆ. ಅದು ಟ್ರೈನಿಂಗ್ ಶುಲ್ಕ- 5000 ರೂ. ಡಿಮ್ಯಾಂಡ್ ಡ್ರಾಫ್ಟ್​ ಮೂಲಕ ಹಾಗೂ

ಲೈಸೆನ್ಸ್​ ಶುಲ್ಕ- 3000 ರೂಪಾಯಿ ಪಾವತಿಸಬೇಕು. ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್​ನಲ್ಲಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂದು ಇಲಾಖೆ ಹೇಳಿದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ?

ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆ ಮಾಡಲಾಗುವ ಅಭ್ಯರ್ಥಿಗಳಿಗೆ ಆನ್​ಲೈನ್ ಮೂಲಕವೇ ಟೆಸ್ಟ್​ ಇರಲಿದ್ದು, ನಂತರ ಲಿಖಿತ ಮೂಲಕವು ಪರೀಕ್ಷೆ ಒಂದನ್ನು ಎದುರಿಸಬೇಕು. ವೇತನ ನಿಗದಿಪಡಿಸಿಲ್ಲ. ನಿಯಮಾನುಸಾರ ನೀಡಲಾಗುವುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 080 22221038 ಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+