ಕರ್ನಾಟಕ ವಲಯದಲ್ಲಿ 183 ಎಸ್‌ಎಸ್‌ಸಿ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಮೇ 16 : ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಕಾರ್ಯನಿರ್ವಹಿಸುವ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಕರ್ನಾಟಕ-ಕೇರಳ ವಲಯದಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ-ಕೇರಳ ವಲಯದಲ್ಲಿ ಅಸಿಸ್ಟಂಟ್, ಜೂನಿಯರ್‌ ಎಂಜಿನಿಯರ್‌, ಡ್ರಾಫ್ಟ್ಸ್ ಮನ್‌, ಟೆಕ್ಸ್ ಟೈಲ್‌ ಡಿಸೈನಲ್, ಲೇಡಿ ಮೆಡಿಕಲ್ ಅಟೆಂಡಂಟ್ ಸೇರಿದಂತೆ 20ಕ್ಕೂ ಹೆಚ್ಚು ವಿಭಾಗಗಳಲ್ಲಿ 183 ಹುದ್ದೆ ಖಾಲಿಯಿದ್ದು, ಅಭ್ಯರ್ಥಿಗಳು ಜೂನ್‌ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ: ಎಸ್‌ಎಸ್‌ಸಿ (183)
ವಿದ್ಯಾರ್ಹತೆ: ಪದವಿ, ಪಿಯುಸಿ ಸೇರಿದಂತೆ ಹುದ್ದೆಗಳ ಅನ್ವಯ ವಿದ್ಯಾರ್ಹತೆ ನಿಗದಿಯಾಗಿದೆ.
ವೇತನ ಶ್ರೇಣಿ: 9300 ರಿಂದ 34800 ರು. ತಿಂಗಳಿಗೆ.

SSC KKR Recruitment 2017-18 Apply Online For 183 Vacancies

ವಯೋಮಿತಿ: ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳ ಅನ್ವಯ ವಯೋಮಿತಿ ಬದಲಾವಣೆಯಿದೆ. ನಿಗದಿತ ವಯೋಮಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆಯಿದೆ.

ಅರ್ಜಿ ಸಲ್ಲಿಕೆ: ಎಸ್ಎಸ್ ಸಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ನಂತರ 100 ರು. ಪರೀಕ್ಷಾ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಭರ್ತಿ ಮಾಡಿದ ಅರ್ಜಿ ಪ್ರತಿ ಹಾಗೂ ಫೋಟೋ ಸೇರಿದಂತೆ ಅಗತ್ಯ ದಾಖಲೆಯೊಂದಿಗೆ ಎಸ್ಎಸ್ ಸಿ ವಲಯ ಕಚೇರಿಗೆ ತಲುಪಿಸಬೇಕು.

ವಿಳಾಸ: The Regional Director, Staff Selection Commission, Karnataka Kerala Region, 1st Floor „E‟ Wing, Kendriya Sadan, Koramangala,BENGALURU - 560 034.

ಪರೀಕ್ಷೆ: ಕಂಪ್ಯೂಟರ್‌ ಆಧಾರಿತ ಬಹು ಆಯ್ಕೆ ಮಾದರಿ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಮುಂದಿನ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಇಲ್ಲಿ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Staff Selection commission (SSCKKR) Karnataka Kerala region released new notification on their official website for the recruitment of total 183 (one Hundred Eighty Three) jobs. Job seekers should register before 7th June 2017
Please Wait while comments are loading...