ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕೆಲಸ; ನ. 6ಕ್ಕೆ ನೇರ ಸಂದರ್ಶನ
ಶಿವಮೊಗ್ಗ, ನವೆಂಬರ್ 03: ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಣೆ ಮಾಡಲು ವಿವಿಧ ಹುದ್ದೆಗಳ ಭರ್ತಿ ಮಾಡುತ್ತಿದೆ. ಆಸಕ್ತರು ನವೆಂಬರ್ 6ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಕಛೇರಿ ಆರಂಭಿಸುತ್ತಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ ಮತ್ತು ಹೈದರಾಬಾದ್ ನಗರಗಳಿಗೆ ವಿಮಾನ ಸೇವೆ ನವೆಂಬರ್ 21ರಿಂದ ಆರಂಭವಾಗುತ್ತಿದೆ.

ಈ ಹಿನ್ನಲೆಯಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲು ಸ್ಟಾರ್ ಏರ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದಕ್ಕಾಗಿ ನವೆಂಬರ್ 6ರ ಸೋಮವಾರ ಶಿವಮೊಗ್ಗ ನಗರದಲ್ಲಿ ನೇರ ಸಂದರ್ಶನ ಆಯೋಜನೆ ಮಾಡಿದೆ.
ಹುದ್ದೆಗಳ ವಿವರ; ಸ್ಟಾರ್ ಏರ್ ವಾಣಿಜ್ಯ ಹುದ್ದೆಗಳಾದ ಡೆಪ್ಯೂಟಿ ಸೂಪರ್ ವೈಸರ್/ ಆಫೀಸರ್, ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯುಟಿವ್, ಕಸ್ಟಮರ್ ಸರ್ವೀಸ್ ಎಕ್ಸಿಕ್ಯುಟಿವ್, ಟ್ರೈನಿ ಕಸ್ಟಮರ್ ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಸೆಕ್ಯುರಿಟಿ ವಿಭಾಗದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಸೆಕ್ಯುರಿಟಿ, ಸೆಕ್ಯುರಿಟಿ ಸೂಪರ್ ವೈಸರ್, ಸೀನಿಯರ್ ಸೆಕ್ಯುರಿಟಿ ಏಜೆಂಟ್, ಸೆಕ್ಯುರಿಟಿ ಏಜೆಂಟ್, ಟ್ರೈನಿ ಸೆಕ್ಯುರಿಟಿ ಏಜೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್, ಸರ್ಕಾರದ ಅಧಿಕೃತ ಗುರುತಿನ ಚೀಟಿ, ಅನುಭವ ಪ್ರಮಾಣ ಪತ್ರ, ಇತರ ಅಗತ್ಯ ದಾಖಲೆಗಳ ಜೊತೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ನೇರ ಸಂದರ್ಶನ ನವೆಂಬರ್ 6ರಂದು ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯ ತನಕ ರಾಯಲ್ ಆರ್ಕಿಡ್ ಸೆಂಟ್ರಲ್ ಶಿವಮೊಗ್ಗ, ವಿನಾಯಕ ಚಿತ್ರ ಮಂದಿರದ ಮುಂಭಾಗ, ಬಿ. ಹೆಚ್. ರಸ್ತೆ, ಶಿವಮೊಗ್ಗ 577201 ಇಲ್ಲಿ ನಡೆಯಲಿದೆ.
ಈ ವರ್ಷದ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ 4 ಮಾರ್ಗಗಳಲ್ಲಿ ವಿಮಾನ ಸೇವೆಗೆ ಅನುಮತಿ ಸಿಕ್ಕಿದೆ. ಬೆಂಗಳೂರು-ಶಿವಮೊಗ್ಗ ನಡುವಿನ ವಿಮಾನ ಸೇವೆ ಈಗಾಗಲೇ ಆರಂಭವಾಗಿದೆ.
ಸ್ಟಾರ್ ಏರ್ ಶಿವಮೊಗ್ಗದಿಂದ ಹೈದರಾಬಾದ್, ಗೋವಾ, ತಿರುಪತಿಗೆ ನವೆಂಬರ್‌ನಲ್ಲಿ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ವಿಮಾನದ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿಮಾನ ಹೊರಡುವ ಸಮಯ, ವಾರದ ಯಾವ ದಿನ ಸಂಚಾರ ನಡೆಸುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ರಾತ್ರಿ ವೇಳೆಯೂ ವಿಮಾನ ಇಳಿಯುವ ಸೌಲಭ್ಯ ಸಹ ವಿಮಾನ ನಿಲ್ದಾಣದಲ್ಲಿದೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.












Click it and Unblock the Notifications