ಶಿವಮೊಗ್ಗ ವಿಮಾನ ನಿಲ್ದಾಣ ನೇಮಕಾತಿ; ಹುದ್ದೆ, ವೇತನ ವಿವರ

ಶಿವಮೊಗ್ಗ, ಡಿಸೆಂಬರ್ 10; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ಡಿಸೆಂಬರ್ 19ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕೆಎಸ್‌ಐಐಡಿಸಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ನೋಡಿಕೊಳ್ಳುತ್ತದೆ. ಈ ಕಂಪನಿಯು 1 ವರ್ಷದ ಅವಧಿ (ಗುತ್ತಿಗೆ ಆಧಾರ) ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಲು ಉದ್ದೇಶಿಸಿದೆ.

Shivamogga Airport Jobs Walk In Interview For Airport Director Post

ಸೇವೆಯು ತೃಪ್ತಿಕರವಾಗಿರುವುದಕ್ಕೆ ಒಳಪಟ್ಟು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಗುತ್ತಿಗೆಯನ್ನು ಪರಸ್ಪರ ಒಪ್ಪಿತವಾದ ನಿಯಮಗಳು ಮತ್ತು ನಿಬಂಧನೆಗಳ ಮೇಲೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಣೆ ಮಾಡಬಹುದಾಗಿದೆ.

ಹುದ್ದೆ, ವೇತನ ವಿವರ; ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು (1 ಹುದ್ದೆ)ಗೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 35 ವರ್ಷಗಳು, ಗರಿಷ್ಠ ವಯೋಮಿತಿ 55 ವರ್ಷಗಳು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ರೋಡೀಕೃತ ಮಾಸಿಕ ವೇತನ 1,25,000 ರೂ.ಗಳು.

ಅಭ್ಯರ್ಥಿಗಳು ಬಿಜಿನೆಸ್, ಏವಿಯೇಷನ್ ಅಡ್ಮಿನಿಸ್ಟ್ರೇಷನ್/ ಇಂಜಿನಿಯರಿಂಗ್‌ನಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಬ್ಯಾಚುಲರ್ಸ್‌ ಪದವಿ ಪಡೆದಿರಬೇಕು. ಕಾರ್ಯನಿರ್ವಾಹಕರಾಗಿ, ವೃತ್ತಿ ಮಟ್ಟದ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.
ಅಭ್ಯರ್ಥಿಯು ಅಂಗೀಕರಿಸಬಹುದಾದ ಚಾಲನಾ ದಾಖಲೆಯೊಡನೆ ರಾಜ್ಯ ಚಾಲಕರ ಪರವಾನಗಿ ಹೊಂದಿರಬೇಕು. ಪೈಲೆಟ್ ಪರವಾನಗಿಯನ್ನು ಹೊಂದಿದ್ದರೆ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು ಈ ವಿಷಯಗಳ ಪರಿಶೀಲನೆಯಲ್ಲಿ ಪರಿಣಿತರಾಗಿರಬೇಕು.

* ಡಿಜಿಸಿಎ ಅನುಸಾರ ಫ್ಲೈಟ್ ಸೇಫ್ಟಿ ಡಾಕ್ಯುಮೆಂಟೇಶನ್ ಸಿಸ್ಟಂನ ಅನುಷ್ಠಾನ ಮತ್ತು ನಿರ್ವಹಣೆ.

* ಏರ್ ಸೈಡ್ ಇನ್ ಫ್ರಾಸ್ಟ್ರಕ್ಚರ್, ಟರ್ಮಿನಲ್ ಸಿಸ್ಟಮ್ಸ್, ಲ್ಯಾಂಡ್ ಸೈಡ್ ಫೆಸಿಲಿಟೀಸ್‌ನ ಪರಿಕಲ್ಪನೆ ವಿನ್ಯಾಸದಲ್ಲಿ ಪರಿಜ್ಞಾನ ಹೊಂದಿರಬೇಕು ಮತ್ತು ಗ್ರೌಂಡ್‌ ಟ್ರಾನ್ಸ್‌ಪೋರ್ಟೇಷನ್ ಟರ್ಮಿನಲ್ ಮತ್ತು ಏರ್‌ಸೈಡ್ ಆಪರೇಷನ್‌ಗಳ ಸಂಯೋಜನೆ.

* ಏರೋಸ್ಪೇಸ್ ಡೊಮಿನಿಯನ್‌ನಲ್ಲಿ ಸಿಸ್ಟಮ್ಸ್ ಸುರಕ್ಷತೆ ಅಗತ್ಯತೆಗಳ ಅಭಿವೃದ್ಧಿ ಮತ್ತು ಪರಿಶೀಲನೆ.

* ಏರ್ ಟ್ರಾಫಿಕ್ ಕಂಟ್ರೋಲ್ ಕ್ರಮಾವಳಿಗಳ ಕಾರ್ಯಾಚರಣೆ

* ವಿಮಾನ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆ ಕೈಪಿಡಿಗಳು, ಡಿಜಿಸಿ ಅನುಮೋದನೆ ಪಡೆದ ನಂತರ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ಸೇರ್ಪಡೆ ಮಾಡುವುದು.

ಅರ್ಹ, ಆಸಕ್ತಿಯುಳ್ಳ ಅಭ್ಯರ್ಥಿಗಳು ಮೂಲ ಪತ್ರಗಳ ಜೊತೆಗೆ ಅಂಕಪಟ್ಟಿಗಳು ಮತ್ತು ಅನುಭವದ ವಿವರಗಳನ್ನು ಒಳಗೊಂಡ ಅರ್ಜಿಯೊಡನೆ ಕೆಎಸ್‌ಐಐಡಿಸಿ, ಬೆಂಗಳೂರು ಇಲ್ಲಿ ದಿನಾಂಕ 19ನೇ ಡಿಸೆಂಬರ್ 2023 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

ಕೆಎಸ್‌ಐಐಡಿಸಿ ನಿಯಮಗಳ ಅನ್ವಯ ಇತರೆ ಭತ್ಯೆಗಳು, ಟಿಎ, ಡಿಎ ಅನ್ವಯವಾಗುವುವು. ಆಯ್ಕೆಯಾದ ಸಿಬ್ಬಂದಿಯನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗುವುದು. ಯಾವುದೇ ಸ್ಪಷ್ಟನೆಗಾಗಿ 9845833566 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+