SBI Recruitment 2022-23: 1503 ಖಾಲಿ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 29: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಖಾಲಿ ಇರುವ ವಿವಿಧ 1503 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 2023ರ ಜನವರಿ 10ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಖಾಲಿ ಇರುವ ಕಲೆಕ್ಷನ್ ಫೆಸಿಲಿಟೇಟರ್, ಮ್ಯಾನೇಜರ್, ಕ್ರೆಡಿಟ್ ಅನಾಲಿಸ್ಟ್, ಸರ್ಕಲ್ ಅಡ್ವೈಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿಗಳ ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕ, ಅರ್ಹತೆ ಕುರಿತು ಇಲ್ಲಿ ತಿಳಿದುಕೊಳ್ಳಿ.
ಒಟ್ಟು ಹುದ್ದೆಗಳ ಮಾಹಿತಿ
ವ್ಯವಸ್ಥಾಪಕರು- 9 ಹುದ್ದೆಗಳು
ಕ್ರೆಡಿಟ್ ಅನಾಲಿಸ್ಟ್- 55 ಹುದ್ದೆಗಳು
ಸರ್ಕಲ್ ಅಡ್ವೈಸರ್- 1 ಹುದ್ದೆ
ಕಲೆಕ್ಷನ್ ಫೆಸಿಲಿಟೇಟರ್- 1438 ಹುದ್ದೆಗಳು
ಎಸ್‌ಬಿಐ ನಲ್ಲಿ ಒಟ್ಟು 1503ಹುದ್ದೆಗಳ ಖಾಲಿ ಇವೆ.
ಅರ್ಹತೆ ಏನಿದೆ

ಆಹ್ವಾನಿಸಲಾದ ಹುದ್ದೆಗಳಿಗೆ ಭಿನ್ನ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಸಂಬಂಧಿತ ವಿದ್ಯಾರ್ಹತೆಯನ್ನು ಪರಿಶೀಲಿಸಿಕೊಳ್ಳುವಂತೆ ಎಸ್‌ಬಿಐ ಸೂಚಿಸಿದೆ.
ವಯಸ್ಸಿನ ಮಿತಿ
ಕಲೆಕ್ಷನ್ ಫೆಸಿಲಿಟೇಟರ್- 56 ರಿಂದ 63 ವರ್ಷ
ಕ್ರೆಡಿಟ್ ಅನಾಲಿಸ್ಟ್- 25 ರಿಂದ 35 ವರ್ಷ
ಮ್ಯಾನೇಜರ್- 28 ರಿಂದ 35 ವರ್ಷ
ಸರ್ಕಲ್ ಅಡ್ವೈಸರ್- ಗರಿಷ್ಠ ವಯೋಮಿತಿ 62 ವರ್ಷ
ಆಯ್ಕೆ ಪ್ರಕ್ರಿಯೆ- ಶುಲ್ಕದ ವಿವರ
ಅರ್ಹ ಅಭ್ಯರ್ಥಿಗಳ ಎಲ್ಲಾ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ನಂತರ ಅಭ್ಯರ್ಥಿಗಳನ್ನು ನೇತ ಸಂದರ್ಶನದ ಮೂಲಕ ಆಯ್ಕೆ ಆಗಲಿದ್ದಾರೆ. ಸಾಮಾನ್ಯ ವರ್ಗ/ಒಬಿಸಿ/ಆರ್ಥಿಕ ದುರ್ಬಲ ವಿಭಾಗ (EWS)ಅಭ್ಯರ್ಥಿಗಳಿಗೆ- 750 ರೂ. ಹಾಗೂ

ಎಸ್‌ಸಿ, ಎಸ್‌ಟಿ, ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಲಾಗಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಈ https://bank.sbi/web/careers ಲಿಂಕ್ ಕ್ಲಿಕ್ ಮಾಡಿ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications