
ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ; ಶಿಷ್ಯ ವೇತನ, ಅರ್ಹತೆಗಳು
ಬೆಂಗಳೂರು, ನವೆಂಬರ್ 28; ಸಮಾಜ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡುತ್ತಿದೆ. ಆಸಕ್ತರು ತರಬೇತಿ ಪಡೆಯಲು ಬೇಕಾದ ಅರ್ಹತೆ ಮತ್ತು ಇತರ ವಿವರಗಳು ಇಲ್ಲಿವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ/ ಕೆಎಎಸ್/ ಗ್ರೂಪ್-ಸಿ/ ಬ್ಯಾಂಕಿಂಗ್/ ಎಸ್ಎಸ್‌ಸಿ/ ಆರ್‌ಆರ್‌ಬಿ/ ಜೆಇಇ ಮತ್ತು ನೀಟ್ ಪರೀಕ್ಷೆಗಳ ಪೂರ್ವಭಾವಿ ತರಬೇತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಬೆಂಗಳೂರು ಇವರ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
'ಪ್ರಬುದ್ಧ' ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗಕ್ಕೆ ಸಹಾಯಧನ ಅರ್ಜಿ ಹಾಕಿ
ತರಬೇತಿಯ ಅವಧಿ; ಕೇಂದ್ರ ಲೋಕಸೇವಾ ಆಯೋಗ (9 ತಿಂಗಳು). ಕರ್ನಾಟಕ ಲೋಕಸೇವಾ ಆಯೋಗ (7 ತಿಂಗಳು). ಗ್ರೂಪ್ ಸಿ (3 ತಿಂಗಳು). ಬ್ಯಾಂಕಿಂಗ್ (3 ತಿಂಗಳು). ಎಸ್‌ಎಸ್‌ಎ (3 ತಿಂಗಳು). ಆರ್. ಆರ್. ಬಿ. (3 ತಿಂಗಳು).
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಹಾಕಿ
ಸಾಮಾನ್ಯ ಅರ್ಹತೆಗಳು; ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ವಾರ್ಷಿಕ ಆದಾಯ ರೂ. 5.00 ಲಕ್ಷ ಮಿತಿಗೊಳಿಸಲಾಗಿದೆ. ವಯೋಮಿತಿ 18 ರಿಂದ 40 ವರ್ಷಗಳು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಿಗುವ 5 ಸೌಲಭ್ಯಗಳು
ಪದವಿ ಪೂರ್ಣಗೊಂಡಿರುವ ಹಾಗೂ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ sw.kar.nic.in ಮೂಲಕ ಸಲ್ಲಿಸಬೇಕು.
ಶಿಷ್ಯ ವೇತನ; ಯುಪಿಎಸ್‌ಸಿ ದೆಹಲಿ 10 ಸಾವಿರ. ಹೈದರಾಬಾದ್ 8 ಸಾವಿರ. ಬೆಂಗಳೂರು 6 ಸಾವಿರ. ಚೆನ್ನೈ 5 ಸಾವಿರ ರೂ.ಗಳು. ಕೆಎಎಸ್ 4 ಸಾವಿರ. ಬ್ಯಾಂಕಿಂಗ್/ ಗ್ರೂಪ್-ಸಿ/ ಎಸ್. ಎಸ್. ಸಿ. /ಆರ್. ಆರ್. ಜಿ ಮೂರು ಸಾವಿರ ರೂ.ಗಳು.
ಪ್ರವೇಶ ಪತ್ರ ವಿತರಣೆ, ಪರೀಕ್ಷಾ ದಿನಾಂಕ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಕೌನ್ಸಿಲಿಂಗ್
ಮೊದಲಾದ ಮಾಹಿತಿಯನ್ನು Sw.kar.nic.in ವೆಬ್‌ಸೈಟ್‌ನಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಆಡಳಿತಾಧಿಕಾರಿ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ಭವನ, ವಸಂತನಗರ ಬೆಂಗಳೂರು. ಇವರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆಗಳು 080-22207784, 0820-2574892, 9480843046.