PMBI Recruitment 2024: ಈ ನಾಲ್ಕು ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂವ್, ವೇತನ ಮಾಹಿತಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 27: ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾವು (PMBI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 4 ಸಹಾಯಕ ವ್ಯವಸ್ಥಾಪಕ, ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎರಡು ದಿನ ನೇರ ಸಂದರ್ಶನ ನಡೆಸಲು ತೀರ್ಮಾನಿಸಿದೆ. ಆಯ್ಕೆ ಆಗುವವರೆಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಪೋಸ್ಟಿಂಗ್ ನೀಡಲಾಗುತ್ತದೆ.

ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಗೂ ಮೊದಲು ನೇಮಕಾತಿ ಬಗೆಗಿನ ಪೂರ್ಣ ಮಾಹಿತಿ, ವೇತನ, ಸಂದರ್ಶನ ಸ್ಥಳ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿ ತಿಳಿಯಬಹುದು.
ನೇಮಕಾತಿ ಪ್ರಕ್ರಿಯೆ ವಿವರ
ಸಂಸ್ಥೆ ಹೆಸರು: ಫಾರ್ಮಾಸ್ಯುಟಿಕಲ್ಸ್ ಆಂಡ್ ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ
ಹುದ್ದೆ ಹೆಸರು: ಸಹಾಯಕ ಮ್ಯಾನೇಜರ್, ಸೀನಿಯರ್ ಮಾರ್ಕೆಟಿಂಗ್ ಆಫೀಸರ್
ಖಾಲಿ ಹುದ್ದೆಗಳು: 04
ಮಾಸಿಕ ವೇತನ: ₹40,000
ಉದ್ಯೋಗದ ಸ್ಥಳ: ಕರ್ನಾಟಕ, ಕೇರಳ
ಸಂದರ್ಶನ ದಿನಾಂಕ: ಡಿಸೆಂಬರ್ 29, ಹಾಗೂ 2024 ಜನವರ
ವಿದ್ಯಾರ್ಹತೆ ಮಾಹಿತಿ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಪದವಿ, ಪಿಜಿಡಿಎಂ, ಸೇಲ್ಸ್ ಮತ್ತು ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಕಡ್ಡಾಯವಾಗಿ ಮಾಡಿರಬೇಕು ಎಂದು ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ ಸಂಸ್ಥೆ ತಿಳಿಸಿದೆ.
ವಯಸ್ಸಿನ ಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸುವವರ ಪೈಕಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯ ಆಸಕ್ತರಿಗೆ ಗರಿಷ್ಠ 32 ವರ್ಷ, ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 30 ವರ್ಷ ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಇನ್ನೂ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಸಿಗಲಿದೆ.

ಆಯ್ಕೆ ಹೇಗೆ, ಪೋಸ್ಟಿಂಗ್ ಮಾಹಿತಿ
ಅಭ್ಯರ್ಥಿಗಳಿಗೆ ಮೊದಲು ಸ್ಕ್ರೀನಿಂಗ್ ಮಾಡಲಾಗುವುದು. ನಂತರ ಅವರಿಗೆ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಆಯ್ಕೆ ಆಗುವವರಿಗೆ ಕರ್ನಾಟಕ, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಪೋಸ್ಟಿಂಗ್ ನೀಡಲಾಗುವುದು. ಈ ವೇಳೆ ಅವರಿಗೆ ಮಾಸಿಕ ₹ 40,000 ರೂಪಾಯಿ ವೇತನ ನೀಡಲಾಗುವುದು. ಇದರಲ್ಲಿ ಸೀನಿಯರ್ ಮಾರ್ಕೆಟಿಂಗ್ ಆಫೀಸರ್ ಹುದ್ದೆಗೆ ಆಯ್ಕೆ ಆದವರಿಗೆ ಮಾತ್ರ ಮಾಸಿಕ ₹ 30,000 ರೂಪಾಯಿ ಇರಲಿದೆ.
ಸಂದರ್ಶನ ಸ್ಥಳದ ಮಾಹಿತಿ
ಒಂದು ಸಂದರ್ಶನ ಕರ್ನಾಟಕದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕ ದಂದು 'M/s ಮಹಾವೀರ್ ಡ್ರಗ್ಸ್ ಪ್ಲಸ್, #45, ಬೇಸ್‌ಮೆಂಟ್, ಗ್ರೌಂಡ್, 1ನೇ, 2ನೇ, 3ನೇ ಮಹಡಿ, ಕಟ್ಟಡ ನಂ.3, ನಂಜಾಂಬ ಅಗ್ರಹಾರ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಭೇಟಿ ನೀಡಬೇಕು.
ಅದೇ ರೀತಿ ಮತ್ತೊಂದು ಸಂದರ್ಶನವು M/s. ಮಣಿ ಫಾರ್ಮಾಸ್ಯುಟಿಕಲ್ಸ್, ಪ್ಲಾಟ್ ನಂ-2B/443, ಸೆಕ್ಟರ್-8, ಡಾ. ಟೋನ್ಪೆ ರಸ್ತೆ, ಸಿಡಿಎ, ಕಟಕ್, ಒಡಿಶಾ-753014 ಇಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಸೂಕ್ತ ದಾಖಲೆ ಸಹಿತ ಭೇಟಿ ನೀಡಬೇಕು.
ನೆನಪಿಡಬೇಕಾದ ದಿನಾಂಕ
ನೇಮಕಾತಿ ಅಧಿಸೂಚನೆ ಬಿಡುಗಡೆ ದಿನ- ಡಿಸೆಂಬರ್ 23
ಸಂದರ್ಶನ ಎರಡು ದಿನ- ಡಿಸೆಂಬರ್ 29 ಮತ್ತು 2024 ಜನವರಿ 5
ಕರ್ನಾಟಕ ಮತ್ತು ಒಡಿಶಾದಲ್ಲಿ ಸಂದರ್ಶನ ದಿನ - ಡಿಸೆಂಬರ್ 29
ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಸಂದರ್ಶನ ದಿನ- 2024 ಜನವರಿ 5












Click it and Unblock the Notifications