PGCIL ನೇಮಕಾತಿ 2020: 53 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿವೆ
ನವದೆಹಲಿ, ಫೆಬ್ರವರಿ 11: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(PGCIL)ನಲ್ಲಿ 2020ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಸೂಚನೆ ಪ್ರಕಟಿಸಲಾಗಿದೆ. 53 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಫೆಬ್ರವರಿ 20, 2020ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್(PGCIL)
ಒಟ್ಟು ಹುದ್ದೆ: 53
ಹುದ್ದೆ ಹೆಸರು: ಎಕ್ಸಿಕ್ಯೂಟಿವ್ ಟ್ರೈನಿ
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 20, 2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ, ಬಿ. ಟೆಕ್, ಬಿಎಸ್ ಸಿ (ಇಂಜಿನಿಯರಿಂಗ್).

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ಮಾಜಿ ಯೋಧ/ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.
ಸಾಮಾನ್ಯ/ ಒಬಿಸಿ ಇತರೆ: 500 ರು
ವಯೋಮಿತಿ: ಸಾಮಾನ್ಯ: 28 ವರ್ಷ(ಡಿಸೆಂಬರ್ 31, 2019ರಂತೆ). ಒಬಿಸಿ(ಎನ್ ಸಿಎಲ್), ಎಸ್ ಸಿ/ ಎಸ್ಟಿ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ. ಗೇಟ್ 2020, ಗುಂಪಿನ ಚರ್ಚೆ ಹಾಗೂ ವೈಯಕ್ತಿಕ ಚರ್ಚೆ.
ಪ್ರಮುಖ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 31.01.2020.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-02-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications