ಆರೋಗ್ಯ ಕಾರ್ಯಕರ್ತರಾಗಿ; ಅರ್ಹತೆ, ಗೌರವಧನ
ಬೆಂಗಳೂರು, ಜುಲೈ 17 : ಕರ್ನಾಟಕದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಶುಕ್ರವಾರ ಒಂದೇ ದಿನ 3,693 ಪ್ರಕರಣ ರಾಜ್ಯದಲ್ಲಿ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ಸಮಯದಲ್ಲಿ ಜನರು ಸಹ ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡಬಹುದು ಎಂದು ಆಹ್ವಾನ ನೀಡಿದೆ. ನೀವು ಸಹ ಕೋವಿಡ್-19 ವಿರುದ್ಧದ ಸಮರದಲ್ಲಿ ಭಾಗಿಯಾಗಲು ಇಚ್ಚಿಸಿದರೆ ಹೆಸರು ನೋಂದಾಯಿಸಬಹುದು.
ಸರ್ಕಾರ ಸ್ಥಾಪನೆ ಮಾಡಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಸ್ವಯಂ ಸೇವಕರು ಕನಿಷ್ಠ 10 ದಿನಗಳ ಕಾಲ ಸೇವೆ ಸಲ್ಲಿಸಬಹುದು. ವೈದ್ಯರು, ದಾದಿಯರು, ಪರಿಚಾರಕರಾಗಿ ನೀವು ಸೇವೆ ಸಲ್ಲಿಸಬಹುದು ಎಂದು ಇಲಾಖೆ ಟ್ವೀಟ್‌ನಲ್ಲಿ ಹೇಳಿದೆ.

ನೀವು ಸ್ವಯಂ ಸೇವಕರಾಗಿ ಕೆಲಸ ಮಾಡಿದರೂ ಸಹ ಗೌರವ ಧನವನ್ನು ನೀಡಲಾಗುತ್ತದೆ. ವೈದ್ಯರಿಗೆ ಮಾಸಿಕ 45,000, ದಾದಿಯರಿಗೆ 30,000 ಮತ್ತು ಪರಿಚಾರಕರಿಗೆ 15,000 ರೂ. ನೀಡಲಾಗುತ್ತದೆ.
ಸರ್ಕಾರದಿಂದ ಕೋವಿಡ್ ಕರ್ತವ್ಯಕ್ಕಾಗಿ ನೇಮಕಗೊಂಡ ಸ್ವಯಂ ಸೇವಕರು ವಿಮಾ ಸೌಲಭ್ಯಕ್ಕೆ ಸಹ ಒಳಪಡಲಿದ್ದಾರೆ ಎಂದು ತಿಳಿಸಲಾಗಿದೆ.
ಆಸಕ್ತಿ ಇದ್ದವರು ಟ್ವೀಟ್‌ನಲ್ಲಿರುವ ವಿಳಾಸಕ್ಕೆ ವಿವರಗಳನ್ನು ಕಳಿಸಬಹುದಾಗಿದೆ.
ಆರೋಗ್ಯ ಕಾರ್ಯಕರ್ತರಾಗಿ ಕೋವಿಡ್-19 ವಿರುದ್ಧದ ಸಮರದಲ್ಲಿ ಭಾಗಿಯಾಗಲು ಇಚ್ವಿಸಿದರೆ, ಬೇಕಾದ ವಿದ್ಯಾರ್ಹತೆ ಹಾಗೂ ಕಾರ್ಯನಿರ್ವಹಣೆ ಕುರಿತು ತಿಳಿಯಿರಿ 👇@CMofKarnataka @BSYBJP @sriramulubjp @drashwathcn @mla_sudhakar @iaspankajpandey @BBMP_MAYOR @BBMPCOMM @KarnatakaVarthe @PIBBengaluru @BlrCityPolice pic.twitter.com/49SdLHHaO0
— K'taka Health Dept (@DHFWKA) July 17, 2020












Click it and Unblock the Notifications