ಓರಿಯಂಟಲ್ ಬ್ಯಾಂಕಲ್ಲಿ ವಿವಿಧ ಹುದ್ದೆಗಳಿವೆ, ಏ.26ರೊಳಗೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11 : ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 26ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.[ಅಂಚೆ ಕಚೇರಿ ಕರ್ನಾಟಕದಾದ್ಯಂತ 1048 ಹುದ್ದೆಗಳಿಗೆ ಅರ್ಜಿ ಆಹ್ವಾನ]

ಹುದ್ದೆ ಹೆಸರು: ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್
ಹುದ್ದೆ ಎಲ್ಲಿ?: ಭಾರತದೆಲ್ಲೆಡೆ
ಒಟ್ಟು ಹುದ್ದೆಗಳು: 120
ಪರೀಕ್ಷೆ ಸೆಂಟರ್: ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೊಲ್ಕತ್ತಾ, ಚೆನ್ನೈ, ವಾರಣಾಸಿ, ಪಾಟ್ನಾ ಭೂಪಾಲ್, ಪುಣೆ, ಜೈಪುರ್.

ವೇತನ ಶ್ರೇಣಿ

ವೇತನ ಶ್ರೇಣಿ

* ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಮ್ಯಾನೇಜರ್ ಹುದ್ದೆಗೆ 42020 ರಿಂದ 51490 ರು ತಿಂಗಳಿಗೆ,

* ಅಸಿಸ್ಟೆಂಟ್ ಮ್ಯಾನೇಜರ್ ಗೆ 23700 ರಿಂದ 42020 ರು. (ತಿಂಗಳಿಗೆ).

ವಯೋಮಿತಿ:

ವಯೋಮಿತಿ:

* ಚಾರ್ಟರ್ಡ್ ಅಕೌಂಟೆಂಟ್ ಮ್ಯಾನೇಜರ್- 25ರಿಂದ 35 ವರ್ಷದೊಳಗಿರಬೇಕು
* ಅಸಿಸ್ಟೆಂಟ್ ಮ್ಯಾನೇಜರ್- 21ರಿಂದ 30 ವರ್ಷದೊಳಗಿರಬೇಕು.
* ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರಲಿದೆ.

ಆಯ್ಕೆ ವಿಧಾನ:

ಆಯ್ಕೆ ವಿಧಾನ:

ಹಿರಿಯ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟ 200 ಅಂಕಗಳಿಗೆ ಪರೀಕ್ಷೆ 120 ನಿಮಿಷಗಳನ್ನು ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನವಿರಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 100 ರು. ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ 600 ರು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ನೆಟ್ ಬ್ಯಾಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oriental Bank of Commerce released new notification on their official website for the recruitment of total 120 (one hundred and twenty) jobs. Job seekers should register from 07th April 2017 and before 26th April 2017.
Please Wait while comments are loading...