ಆಯಿಲ್ ಇಂಡಿಯಾ ಸಂಸ್ಥೆಯಲ್ಲಿ 535 ಹುದ್ದೆಗಳಿವೆ, ಅರ್ಜಿ ಹಾಕಿ

ನವದೆಹಲಿ, ಆಗಸ್ಟ್ 24: ಆಯಿಲ್ ಇಂಡಿಯಾ ಸಂಸ್ಥೆ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. 535 ಫಿಟ್ಟರ್ ಟ್ರೇಡ್, ಬಾಯ್ಲರ್ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 23, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: ಆಯಿಲ್ ಇಂಡಿಯಾ ಲಿಮಿಟೆಡ್
ಒಟ್ಟು ಹುದ್ದೆ: 535
ಹುದ್ದೆ ಹೆಸರು: Fitter Trade, Boiler Attendant
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 23, 2021
ಸಂಬಳ ನಿರೀಕ್ಷೆ: 26,600 ರು ನಿಂದ 90,000 ರು ಪ್ರತಿ ತಿಂಗಳಿಗೆ

ಹುದ್ದೆಗಳು: ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟರ್ ವೆಹಿಕಲ್ ಟ್ರೇಡ್, ಮಷಿನಿಸ್ಟ್, ಡ್ರಾಫ್ಟ್ ಮೇನ್, ಬಾಯ್ಲರ್ ಸಹಾಯಕ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರೂಮೆಂಟ್ ಮೆಕ್ಯಾನಿಕ್, ಸರ್ವೆಯರ್, ವೆಲ್ಡರ್, ಟರ್ನರ್, ಇತ್ಯಾದಿ

Oil India Recruitment 2021 apply for 535 Fitter Trade, Boiler Attendant Post

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಹಾಗೂ 12ನೇ ತರಗತಿ ಪಾಸ್. ಸಂಬಂಧಪಟ್ಟ ಟ್ರೇಡ್ ಅನುಭವ.

ವಯೋಮಿತಿ:
ವಿವಿಧ ಹುದ್ದೆಗಳಿಗೆ ಆಯಿಲ್ ಇಂಡಿಯಾ ನೇಮಕಾತಿ ನೋಟಿಫಿಕೇಷನ್‌ನಲ್ಲಿ ನೀಡಿರುವಂತೆ ಕನಿಷ್ಠ 18 ರಿಂದ ಗರಿಷ್ಠ 30 ವರ್ಷ(ಸೆಪ್ಟೆಂಬರ್ 23, 2021ರಂತೆ)
ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಎಸ್ ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಸಿಗಲಿದೆ.

ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ ಅಭ್ಯರ್ಥಿ: 200ರು
ಎಸ್ ಸಿ / ಎಸ್ಟಿ/ ದಿವ್ಯಾಂಗ/ಮಾಜಿ ಯೋಧ/ ಆರ್ಥಿಕವಾಗಿ ಹಿಂದುಳಿದವರು: ಯಾವುದೇ ಶುಲ್ಕವಿಲ್ಲ.
ಶುಲ್ಕಪಾವತಿ ವಿಧಾನ: ಆನ್ ಲೈನ್ ಮೂಲಕ

ನೇಮಕಾತಿ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ವೈಯಕ್ತಿಕ ಸಂದರ್ಶನ (ಪಿಐ).

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24/08/2021

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23/09/2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಆಯಿಲ್ ಇಂಡಿಯಾ ಅಧಿಕೃತ ವೆಬ್ ತಾಣದ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+