ನವೋದಯ ವಿದ್ಯಾಲಯ ಸಮಿತಿಯಲ್ಲಿ 2370 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಜುಲೈ 08: ನವೋದಯ ವಿದ್ಯಾಲಯ ಸಮಿತಿ(NVS) ದೇಶದೆಲ್ಲೆಡೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಖಾಲಿ ಇರುವ 2370 ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಅರ್ಹ, ಆಸಕ್ತ ಅಭ್ಯರ್ಥಿಗಳು ಅಸಿಸ್ಟೆಂಟ್ ಕಮೀಷನರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆ ಬಯಸುವವರು ಆನ್ ಲೈನ್ ಮೂಲಕ ಆಗಸ್ಟ್ 09,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು: ನವೋದಯ ವಿದ್ಯಾಲಯ ಸಮಿತಿ(NVS)
ಹುದ್ದೆ ಹೆಸರು: ಸಹಾಯಕ ಆಯುಕ್ತರು, ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ), ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ)
ಒಟ್ಟು ಹುದ್ದೆ : 2370
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09.08.2019

ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಪದವಿ/ಸ್ನಾತಕೋತ್ತರ ಪದವಿ, ಬಿಇ/ ಬಿಟೆಕ್, ಪಿಜಿ ಡಿಪ್ಲೋಮಾ, ಬಿಎಸ್ ಸಿ, ಬಿಸಿಎ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ವಯೋಮಿತಿ:
* ಸಹಾಯಕ ಆಯುಕ್ತ (ಗುಂಪು-ಎ) : 45 ವರ್ಷಗಳು
* ಸ್ನಾತಕೋತ್ತರ ಶಿಕ್ಷಕರು (ಪಿಜಿಟಿ) (ಗುಂಪು-ಬಿ): 40 ವರ್ಷಗಳು
* ಶಿಕ್ಷಕರ ವಿವಿಧ ವರ್ಗ (ಗುಂಪು-ಬಿ),ಸಂಗೀತ,ಮಹಿಳಾ ಸಿಬ್ಬಂದಿ ದಾದಿ : 35 ವರ್ಷಗಳು
* ಕಾನೂನು ಸಹಾಯಕ (ಗುಂಪು ಸಿ) : 18 ರಿಂದ 32 ವರ್ಷಗಳು
* ಕಿರಿಯ ದರ್ಜೆ ಗುಮಾಸ್ತ (ಗ್ರೂಪ್ ಸಿ): 18 ಮತ್ತು 27 ವರ್ಷಗಳು
ಅರ್ಜಿ ಶುಲ್ಕ:
* ಎಸ್ ಸಿ/ ಎಸ್ಟಿ/ ದಿವ್ಯಾಂಗ : ಯಾವುದೇ ಶುಲ್ಕವಿಲ್ಲ.
* ಸಹಾಯಕ ಆಯುಕ್ತರು: ರೂ. 1500
* ಪಿಜಿಟಿ, ಟಿಜಿಟಿ, ಶಿಕ್ಷಕ ಮತ್ತು ಮಹಿಳಾ ಸಿಬ್ಬಂದಿ : ರೂ. 1200
* ಕಾನೂನು ಸಹಾಯಕ, ಅಡುಗೆ ಮತ್ತು ಎಲ್‌ಡಿಸಿ - ರೂ. 1000
ಪ್ರಮುಖ ದಿನಾಂಕ:
* ಆನಲೈನ್ ನೋಂದಣಿ ಮತ್ತು ಶುಲ್ಕದ ಪ್ರಾರಂಭ ದಿನಾಂಕ : 10 ಜುಲೈ 2019, * ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ಆಗಸ್ಟ್ 2019,
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ











Click it and Unblock the Notifications