ಕೆಪಿಟಿಸಿಎಲ್ ನೇಮಕಾತಿ, ಅರ್ಜಿ ಹಾಕಲು ಆ.25 ಕೊನೆ ದಿನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10 : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಿರಿಯ ಮಾರ್ಗದಾಳು ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 25/8/2016.

ಕಿರಿಯ ಮಾರ್ಗದಾಳು (junior lineman) ಮತ್ತು ಕಿರಿಯ ಸ್ಟೇಷನ್ ಪರಿಚಾರಕ (junior station attendant) ಸೇರಿ ಒಟ್ಟು 6,262 ಹುದ್ದೆಗಳ ಮೀಸಲಾತಿ ವಿವರ, ವಯಸ್ಸು, ವೇತನ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಗಳನ್ನು ನೀಡಲಾಗಿದೆ.[KSRP ಪೊಲೀಸ್ ನೇಮಕಾತಿ ವಿವರ]

Now apply for 6262 posts in KPTCL

ಆಗಸ್ಟ್ 8ರಿಂದ ವಿವಿಧ ನಿಗಮಗಳ ವೆಬ್‌ಸೈಟ್‌ಗೆ ಲಾಗಿನ್ ಆಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಆಗಸ್ಟ್ 25 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವಾಗ ಗೊಂದಲಗಳು ಉಂಟಾದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.[ಐಸಿಐಸಿಐ ಬ್ಯಾಂಕಿನಲ್ಲಿ Walk in interview]

Now apply for 6262 posts in KPTCL

ವಿಶೇಷ ಸೂಚನೆ : 5/8/2016ರಂದು ತಂತ್ರಾಶ ಪರೀಕ್ಷೆ ವೇಳೆಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿರುವುದು ಕಂಡುಬಂದಿದೆ. ಈ ಅರ್ಜಿಗಳನ್ನು ಪರಿಗಣನೆ ಮಾಡಲಾಗುವುದಿಲ್ಲ. 8/8/2016ರ ಮಧ್ಯಾಹ್ನ 3 ಗಂಟೆಯ ನಂತರ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ವಿಳಾಸ

* ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) www.kptcl.com ಸಹಾಯವಾಣಿ ಸಂಖ್ಯೆ 080-22211527

* ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ www.bescom.org ಸಹಾಯವಾಣಿ ಸಂಖ್ಯೆ 080-22085061

* ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ www.hescom.co.in ಸಹಾಯವಾಣಿ ಸಂಖ್ಯೆ 0836-2223865, 0836-2223867

* ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿಯಮಿತ www.cescmysore.org ಸಹಾಯವಾಣಿ ಸಂಖ್ಯೆ 0821-23433

ಇಂಗ್ಲಿಷ್ ನಲ್ಲಿ ಓದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Power Transmission Corporation Limited (KPTCL) invited applications for Junior Station Attendant and Junior Lineman post. August 25, 2016 last date to submit application.
Please Wait while comments are loading...