NIMHANS Recruitment 2023: ಉದ್ಯೋಗ ಖಾಲಿ ಇದೆ, ನ. 20ರಂದು ಸಂದರ್ಶನದಲ್ಲಿ ಪಾಲ್ಗೊಳ್ಳಿ

ಬೆಂಗಳೂರು, ನವೆಂಬರ್ 08: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ(NIMHANS) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (NIMHANS) ಒಟ್ಟು 34 ನ್ಯೂರೋಲಜಿಸ್ಟ್​ ಹುದ್ದೆಗಳು ಖಾಲಿ ಇವೆ. ಆಸಕ್ತರು ಇದೇ ನವೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರು ಈ ಅವಕಾಶದ ಲಾಭ ಪಡೆದುಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.

NIMHANS Recruitment 2023: Candidates Attend for NIMHANS Neurologist Posts Interview on Nov 20

ನಿಮ್ಹಾನ್ಸ್ ನೇಮಕಾತಿ ವಿವರ

ಹುದ್ದೆ ಹೆಸರು: ನ್ಯೂರೋಲಜಿಸ್ಟ್

ಖಾಲಿ ಹುದ್ದೆಗಳು: 34

ತಿಂಗಳ ವೇತನ: 75,000 ನಿಂದ 1,50,000 ರೂಪಾಯಿ

ಉದ್ಯೋಗ ಎಲ್ಲಿ: ಬೆಂಗಳೂರು

ಸಂದರ್ಶನ ದಿನ: ನವೆಂಬರ್ 20

ಸಂದರ್ಶನ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಡಿ, ಡಿಎಮ್​, ಡಿಎನ್​ಬಿ ಪದವಿ ಮಾಡಿರಬೇಕು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ತಿಳಿಸಿದೆ.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 60 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ. ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಕೌಶಲ್ಯ ಟೆಸ್ಟ್, ಸಂದರ್ಶನ ಇರಲಿದೆ.

NIMHANS Recruitment 2023: Candidates Attend for NIMHANS Neurologist Posts Interview on Nov 20

ಇದೇ ನವೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ 'ಉಪನ್ಯಾಸ ಸಭಾಂಗಣ I, ಎಂವಿ ಗೋವಿಂದಸ್ವಾಮಿ ಕಟ್ಟಡ, 2ನೇ ಮಹಡಿ, ಸಾಂಕ್ರಾಮಿಕ ರೋಗ ವಿಭಾಗ, ನಿಮ್ಹಾನ್ಸ್, ಬೆಂಗಳೂರು-560029' ಇಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಅಗತ್ಯ ದಾಖಲೆಗಳ ಸಹಿತ ಪಾಲ್ಗೊಳ್ಳಬೇಕಿದೆ.

ನೆನಪಿಡಬೇಕಾದ ಅಂಶಗಳು

ಅಧಿಸೂಚನೆ ಬಿಡುಗಡೆ ದಿನ: ನವೆಂಬರ್ 06

ಸಂದರ್ಶನ ನಡೆಯುವ ದಿನ: ನವೆಂಬರ್ 20

ಸಂದರ್ಶನ ಸ್ಥಳ: ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+