NCBS Recruitment: ಬೆಂಗಳೂರಿನಲ್ಲಿ ಮಾಸಿಕ ₹1,00,000 ವೇತನದ ಉದ್ಯೋಗ ಖಾಲಿ ಇದೆ

ಬೆಂಗಳೂರು, ಸೆಪ್ಟಂಬರ್ 15: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS) ತನ್ನಲ್ಲಿರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಸಂಬಂಧಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಕಸ್ತರು ಸೆಪ್ಟೆಂಬರ್ 20ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಬೆಂಗಳೂರಿನಲ್ಲಿ ಉದ್ಯೋಗ ಪಡೆಯುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS) ಒಂದು ಪ್ರೋಗ್ರಾಂ ಮ್ಯಾನೇಜರ್ ಹುದ್ದೆ ಖಾಲಿ ಇದೆ. ಕೂಡಲೇ ಆನ್‌ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೈತುಂಬ ವೇತನದ ಕೆಲಸ ಸಿಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ ಸಡಿಲಿಕೆ ಬಗ್ಗೆ ಇಲ್ಲಿ ಮುಂದೆ ಓದಿ.

NCBS Recruitment Can Apply for Program Manager Post of NCBS

ನೇಮಕಾತಿ ಪೂರ್ಣ ವಿವರ

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ (NCBS)

ಹುದ್ದೆ ಹೆಸರು: ಪ್ರೋಗ್ರಾಂ ಮ್ಯಾನೇಜರ್

ಖಾಲಿ ಹುದ್ದೆಗಳು: ಒಂದು

ಮಾಸಿಕ ವೇತನ: 1,00,000 ರೂಪಾಯಿ

ಅರ್ಜಿ ಸಲ್ಲಿಕೆ ಕೊನೆ ದಿನ: ಸೆಪ್ಟಂಬರ್ 20

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ವಿದ್ಯಾರ್ಹತೆ ಮಾಹಿತಿ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಕಡ್ಡಾಯವಾಗಿ ನ್ಯಾಚುರಲ್ ಸೈನ್ಸಸ್/ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಲ್ಲದೇ ಸೈನ್ಸ್/ಎಂಜಿನಿಯರಿಂಗ್/ಟೆಕ್ನಾಲಜಿ/ಫಾರ್ಮಾದಲ್ಲಿ ಡಾಕ್ಟರಲ್ ಪದವಿ, ಎಂ.ಡಿ, ಎಂ.ಎಸ್ ಆಗಿರಬೇಕು ಎಂದು ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ ಎಷ್ಟಿರಬೇಕು

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ತಿಳಿಸಿರುವ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಇದೇ ವರ್ಷ 2024 ಜುಲೈ 1ಕ್ಕೆ ಗರಿಷ್ಠ 45 ವರ್ಷ ದಾಟಿರಬಾರದು. ಇನ್ನೂ ಜಾತಿ ಮೀಸಲಾತಿಗೆ ಅನುಗುಣವಾಗಿ ನಿಮಗೆ ವಯಸ್ಸಿನಲ್ಲಿ ಸಡಿಲಿಕೆ ಸಿಗುತ್ತದೆ.

NCBS Recruitment Can Apply for Program Manager Post of NCBS

ಮಾಸಿಕ ವೇತನ

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಪ್ರಕಟಣೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 1,00,600 ರೂ. ವೇತನ ಸಿಗಲಿದೆ. ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಮಾಹಿತಿ

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ ಲಿಸ್ಟ್ ಮಾಡಲಾಗುತ್ತದೆ. ನಂತರ ಅವರಿಗೆ ಲಿಖಿತ ಪರೀಕ್ಷೆ ನೀಡಿ, ಅಲ್ಲಿ ಉತ್ತಮ ಅಂಗ ಗಳಿಸುವವರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿ ಉತ್ತೀರ್ಣ ಆಗುವವರಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ವಿವರ

ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ನೀವು ಇಲ್ಲಿ ನೀಡಲಾಗಿರುವ https://www.ncbs.res.in/jobportal/node/add/application/105177 ಮೇಲೆ ಕ್ಲಿಕ್ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+