ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೋದಯದಲ್ಲಿ 5000 ಬೋಧಕ, ಬೋಧಕೇತರ ಹುದ್ದೆಗೆ ನೇಮಕಾತಿ

|
Google Oneindia Kannada News

ಬೆಂಗಳೂರು, ನವೆಂಬರ್‌ 2: ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್‌) 5000 ಬೋಧಕ ಮತ್ತು ಬೋಧಕೇತರ ಉದ್ಯೋಗಗಳಿಗೆ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಎನ್‌ವಿಎಸ್‌ ನೇಮಕಾತಿ 2022 ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇದು ಫೆಬ್ರವರಿ 2023ರೊಳಗೆ ಪೂರ್ಣಗೊಳ್ಳುತ್ತದೆ. ಇಲ್ಲಿ ಕೆಲವು ಹುದ್ದೆಗಳನ್ನು ಕೊನೆಯ ಸುತ್ತಿನ ಬಡ್ತಿಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಜುಲೈನಲ್ಲಿ ಶಿಕ್ಷಣ ಸಚಿವಾಲಯವು 2021 ರ ಹೊತ್ತಿಗೆ, ಕೇಂದ್ರ ಸರ್ಕಾರವು ನಿರ್ವಹಿಸುವ ನವೋದಯ ವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳಲ್ಲಿ 3,156 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿತ್ತು. ಈ ಪೈಕಿ ಜಾರ್ಖಂಡ್‌ನಲ್ಲಿ (230) ಅತಿ ಹೆಚ್ಚು ಹುದ್ದೆಗಳು ಖಾಲಿ ಇವೆ.

ಕಲಬುರಗಿ; ನವೆಂಬರ್ 3ರಂದು ಉದ್ಯೋಗ ಮೇಳಕಲಬುರಗಿ; ನವೆಂಬರ್ 3ರಂದು ಉದ್ಯೋಗ ಮೇಳ

ಶಿಕ್ಷಣ ಸಚಿವಾಲಯದ ಸಂಯೋಜಿತ ನವೋದಯ ವಿದ್ಯಾಲಯ ಸಂಘಟನೆ ನಾಲ್ಕು ತಿಂಗಳಲ್ಲಿ ಸುಮಾರು ಐದು ಸಾವಿರ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. ಈ ಹುದ್ದೆಗಳು ಬೋಧಕ ಮತ್ತು ಬೋಧಕೇತರ ವಿಭಾಗಗಳಾಗಿರುತ್ತದೆ. ದೇಶಾದ್ಯಂತ ಸುಮಾರು 700 ವಸತಿ ನವೋದಯ ವಿದ್ಯಾಲಯಗಳಿವೆ ಎಂದು ಸಚಿವಾಲಯದ ಟ್ವೀಟ್ ಮಾಡಿದೆ.

Navodaya Vidyalaya Samiti Recruitment for 5000 post of Non-Teaching post

ನೂತನ ಶಿಕ್ಷಣ ನೀತಿ (ಎನ್‌ಇಪಿ) 2020 ರ ಶಿಫಾರಸುಗಳನ್ನು ಜಾರಿಗೊಳಿಸುವ ಅಗತ್ಯವನ್ನು ಪರಿಗಣಿಸಿ ಎನ್‌ವಿಎಸ್‌ ನೇಮಕಾತಿ ಪ್ರಕ್ರಿಯೆ 2022 ಅನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶದ ಪ್ರತಿ ಶಾಲೆಯಲ್ಲಿ 30:1 ರ ವಿದ್ಯಾರ್ಥಿ- ಶಿಕ್ಷಕರ ಅನುಪಾತವನ್ನು ಕಡ್ಡಾಯ ನಿರ್ವಹಿಸಬೇಕು ಎಂದು ನೀತಿ ನಿಯಮ ಹೇಳುತ್ತದೆ. ಹೆಚ್ಚಿನ ಸಂಖ್ಯೆಯ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ 25:1ಕ್ಕಿಂತ ಕಡಿಮೆ ವಿದ್ಯಾರ್ಥಿ- ಶಿಕ್ಷಕರ ಅನುಪಾತವನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂದು ನೀತಿ ಹೇಳುತ್ತದೆ.

ಟಾಟಾ ಗ್ರೂಪ್‌ನಿಂದ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳ ನೇಮಕಟಾಟಾ ಗ್ರೂಪ್‌ನಿಂದ ಹೊಸೂರು ಘಟಕಕ್ಕೆ 45 ಸಾವಿರ ಉದ್ಯೋಗಿಗಳ ನೇಮಕ

ನವೋದಯ ವಿದ್ಯಾಲಯಗಳು ಸಹ- ಶಿಕ್ಷಣ ವಸತಿ ಶಾಲೆಗಳಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸ್ಥಾಪಿಸಲಾಗಿದೆ. ಎನ್‌ವಿಎಸ್‌ ಪ್ರಸ್ತುತ ದೇಶದಾದ್ಯಂತ ಹರಡಿರುವ ಸುಮಾರು 700 ವಸತಿ ಶಾಲೆಗಳನ್ನು ನಿರ್ವಹಿಸುತ್ತಿದೆ. ಈ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ನಿಗದಿಪಡಿಸಿದ ಪಠ್ಯಕ್ರಮವನ್ನು ಅನುಸರಿಸುತ್ತವೆ. ಇದು 6ರಿಂದ 12ನೇ ತರಗತಿವರೆಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ.

Navodaya Vidyalaya Samiti Recruitment for 5000 post of Non-Teaching post

ನೂತನ ಶಿಕ್ಷಣ ನೀತಿ 2020 ದೇಶದಾದ್ಯಂತ ಹೆಚ್ಚಿನ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಸ್ಥಳೀಯವಾಗಿ ವಾಸಿಸುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಲು ಮಹತ್ವಾಕಾಂಕ್ಷೆಯ ಜಿಲ್ಲೆಗಳು, ವಿಶೇಷ ಶಿಕ್ಷಣ ವಲಯಗಳು ಮತ್ತು ಇತರ ಅನನುಕೂಲಕರ ಪ್ರದೇಶಗಳಲ್ಲಿ ಈ ಶಾಲೆಗಳನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ.

English summary
Navodaya Vidyalaya Samiti (NVS) is inviting applications for recruitment to 5000 teaching and non-teaching posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X