ಮೈಸೂರು; ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮೈಸೂರು, ನವೆಂಬರ್ 20; ಜಿಲ್ಲಾ ಸರ್ವೇಕ್ಷಣಾ ಘಟಕ ಮೈಸೂರು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 23/11/2020 ಕೊನೆಯ ದಿನವಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಎನ್. ಪಿ. ಸಿ. ಡಿ. ಸಿ. ಎಸ್ - ಎನ್. ಪಿ. ಹೆಚ್. ಸಿ. ಇ ಮತ್ತುಎನ್. ಪಿ. ಪಿ. ಸಿ. ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು. ಸಂದರ್ಶನದ ಸಮಯವನ್ನು ತಿಳಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

ಎನ್. ಹೆಚ್. ಎಂ. ನಿಂದ ನೀಡಲಾದ ಮಾರ್ಗಸೂಚಿ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ವಿವರಗಳು; ವೈದ್ಯಾಧಿಕಾರಿಗಳು 11, ಶುಶ್ರೂಷಕರು 2, ಪ್ರಯೋಗ ಶಾಲಾ ತಂತ್ರಜ್ಞರು 2, ಕನ್ಸಲ್‌ಟೆಂಟ್ ಮೆಡಿಸನ್ 2, ಫಿಜಿಯೋಥೆರಪಿಸ್ಟ್ 1 ಸೇರಿದಂತೆ ವಿವಿಧ ಹುದ್ದೆಗಳು.
ಹುದ್ದೆಗಳು ಖಾಲಿ ಇರುವ ಸ್ಥಳ, ವಿದ್ಯಾರ್ಹತೆ, ವೇತನ, ವಯಸ್ಸು ಮುಂತಾದ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications