ಮೈಸೂರು: ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

Written By:
Subscribe to Oneindia Kannada

ಮೈಸೂರು, ಜೂನ್ 10 : ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹಾಗೂ ದಲಾಯತ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಡಳಿತ ಸಹಾಯಕರ ಹುದ್ದೆಗೆ ನಿವೃತ್ತ ಪದವೀಧರ ಸರ್ಕಾರಿ ನೌಕರರು / ಪದವೀಧರರು ಅರ್ಜಿ ಸಲ್ಲಿಸಬಹುದು. ಗಣಕಯಂತ್ರದ ಪರಿಣಿತಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಮಾಸಿಕ ಸಂಚಿತ ವೇತನ ರು. 8,000 + 300 ದೂರವಾಣಿ ಭತ್ಯೆ ನೀಡಲಾಗುವುದು. [ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ವಾಯುಸೇನೆ]

jobs

ದಲಾಯತ್ ಹುದ್ದೆಗೆ ನಿವೃತ್ತ ಸರ್ಕಾರಿ ಗ್ರೂಪ್-ಡಿ ದರ್ಜೆ ನೌಕರರು/ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಮಾಸಿಕ ಸಂಚಿತ ವೇತನ ರೂ 3,000 ನೀಡಲಾಗುವುದು.

ಆಸಕ್ತ ನಿವೃತ್ತ ಸರ್ಕಾರಿ ನೌಕರರು/ಅರ್ಹ ಅಭ್ಯರ್ಥಿಗಳು ತಮ್ಮ ವೈಯುಕ್ತಿಕ ವಿವರಗಳೊಂದಿಗೆ ಸ್ವ ಅಕ್ಷರದಿಂದ ಭರ್ತಿ ಮಾಡಿದ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್. ಸೆಂಟರ್, ಮಳಲವಾಡಿ, ಜಯನಗರ 5ನೇ ಕ್ರಾಸ್, ಮೈಸೂರು ಇವರಿಗೆ ಜೂನ್ 26ರ ಸಂಜೆ 5ರೊಳಗೆ ಸಲ್ಲಿಸಬೇಕು.[ಉಡುಪಿ ಕಂದಾಯ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821- 2330130 ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರುಲ್ಲಾ ಸಿ.ಜಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru: Mysuru District administration has invited applications for recruitment as administrative assistant. Any degree holders can apply this post before 26 June 2016.
Please Wait while comments are loading...