ಜವಳಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಮಾರ್ಚ್. ೦2 : ಕೇಂದ್ರ ಜವಳಿ(ಟೆಕ್ಸ್ ಟೈಲ್ಸ್) ಸಚಿವಾಲಯದಲ್ಲಿ ಖಾಲಿ ಇರುವ 40 ವೃತ್ತಿಪರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕ ಮಾರ್ಚ್ 06, 2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ: ವೃತ್ತಿಪರ(ಕರಕುಶಲ)
ವೇತನ: 25000 ರು.(ತಿಂಗಳಿಗೆ)
ಸ್ಥಳ: ಭಾರತದಾದ್ಯಂತ
ವಯಸ್ಸು: 35 ವರ್ಷ [ಭಾರತೀಯ ವಾಯುಸೇನೆಯಲ್ಲಿ ವಿವಿಧ ಹುದ್ದೆಗಳು, ಅರ್ಜಿ ಹಾಕಿ]

ಅರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡಿಸೈನಿಂಗ್, ಫೈನ್ ಆರ್ಟ್ಸ್, ಫ್ಯಾಷನ್ ಅಥವಾ ಜವಳಿ ಉಡುಪು ಉತ್ಪಾದನೆಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಡಿಪ್ಲಮೋ ಅಥವಾ ಪದವಿ ಪಡೆದಿರಬೇಕು.
ಹಾಗೂ ಕರಕುಶಲದಲ್ಲಿ ಒಂದು ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ಅಥವಾ ಡಿಪ್ಲಮೋ ಫೈನ್ ಆರ್ಟ್ಸ್ ನಲ್ಲಿ ಮೂರು ವರ್ಷದ ಪದವಿ ಪಡೆದಿರಬೇಕು. ಹಾಗೂ ಎರಡು ವರ್ಷಗಳ ಕರಕುಶಲದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು.
ಆಯ್ಕೆ ವಿಧಾನ: ಕಂಪ್ಯೂಟರ್ ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವೈಯಕ್ತಿ ಸಂದರ್ಶನ ಕೂಡ ಇರಲಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications