Tech Layoffs in March 2024: ಆಪಲ್, ಐಬಿಎಂ, ಡೆಲ್‌ನಂತಹ ಕಂಪನಿಗಳಲ್ಲಿ ನೌಕರರ ವಜಾ ಆಗಿದ್ದೆಷ್ಟು? ಡಿಟೇಲ್ಸ್
ಬೆಂಗಳೂರು, ಏಪ್ರಿಲ್ 01: ಸಾಂಕ್ರಾಮಿಕ ಪಿಡುಗಿನ ನಂತರವು ಐಟಿ ಕಂಪನಿಗಳು ಸೇರಿದಂತೆ ಪ್ರತಿಷ್ಠಿತ ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರಿಸಿವೆ. ಇತ್ತೀಚೆಗೆ ಸ್ವೀಡನ್ ದೇಶದ ಎರಿಕ್ಸನ್ ಒಂದು ಸಾವಿರಕ್ಕೂ ಹೆಚ್ಚು ತನ್ನ ನೌಕರರನ್ನು ಕೆಲಸದಿಂದ ತೆಗೆದು ಹಾಕುವುದಾಗಿ ತಿಳಿಸಿತ್ತು. ಈ ಕಂಪನಿ ಜೊತೆಗೆ ವಜಾ ಪ್ರಕ್ರಿಯೆ ಪಟ್ಟಿಗೆ ಡೆಲ್, ಆಪಲ್, ಐಬಿಎಂ, ಟರ್ನಿಟಿನ್ ಕಂಪನಿಗಳು ಸೇರಿವೆ. ಮಾರ್ಚ್ ತಿಂಗಳಲ್ಲಿ ಪ್ರಕಟಗೊಂಡ ವಜಾ ನಿರ್ಧಾರದ ಕಂಪನಿಗಳು, ಉದ್ಯೋಗಗಳ ಪೂರ್ಣ ಮಾಹಿತಿ ಇಲ್ಲಿದೆ.
ತಂತ್ರಜ್ಞಾನ ಉದ್ಯಮ ವಲಯ ಸಾಕಷ್ಟು ಸವಾಲು ಎದುರಿಸುತ್ತಿವೆ. ಈ ಮಧ್ಯೆ ತಾಂತ್ರಿಕವಾಗಿ ಮಹತ್ವದ ಸಾಧನೆ ಮಾಡಿರುವಂತಹ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿವೆ. ಮಾರ್ಚ್ ತಿಂಗಳಲ್ಲಿ ಅತ್ಯಧಿಕ ನೌಕರರನ್ನು ವಜಾಗೊಳಿಸುವಲ್ಲಿ ಈ ಕಂಪನಿಗಳು ಸಾಕ್ಷಿಯಾಗಿವೆ. ಕೈ ತುಂಬ ಸಂಬಳದ ಉದ್ಯೋಗ ಕಳೆದುಕೊಂಡು ನೌಕರರು ಅಂತಂತ್ರರಾಗಿದ್ದಾರೆ.

ಈ ಪೈಕಿ ಕೆಲವು ಕಂಪನಿಗಳು ವೆಚ್ಚ ಹೆಚ್ಚಳದಂತಹ ಆರ್ಥಿಕ ಕಾರಣ ಕೊಟ್ಟು ನೌಕರರನ್ನು ಉದ್ಯೋಗದಿಂದ ತೆಗೆಯುತ್ತಿವೆ. ಇತ್ತೀಚೆಗೆ Ericsson ಕಂಪನಿಯು ತನ್ನ ಉದ್ಯೋಗಗಳನ್ನು ಕೈ ಬಿಡುತ್ತಿರುವ ಬಗ್ಗೆ ಪ್ರಕಟಿಸಿ ನೌಕರರಗೆ ಆಘಾತ ನೀಡಿತ್ತು.
Ericsson: ಎರಿಕ್ಸನ್ ಕಂಪನಿ ಉದ್ಯೋಗ ಕಡಿತ
ಕಳೆದ ತಿಂಗಳು ಮಾರ್ಚ್ ನಲ್ಲಿ ಸ್ವೀಡನ್ ಟೆಲಿಕಾಂ ವಲಯದ ದೈತ್ಯನ ದೈತ್ಯ ಕಂಪನಿಯಾದ Ericsson 5G ನೆಟ್‌ವರ್ಕ್ ಉಪಕರಣಗಳ ಬೇಡಿಕೆಯು ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ಕರೆದು 1,200 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಪ್ರಕಟಿಸಿತು. ಅಲ್ಲದೆ ಮಾರುಕಟ್ಟೆಗಳಲ್ಲಿ ಅತ್ಯಧಿಕ ಸವಾಲು ಎದುರಾಗಿದೆ ಎಂದು ಕೆಲವು ಭವಿಷ್ಯದ ಯೋಜನೆ ಕುರಿತು ತಿಳಿಸಿತು.
ಆದರೆ ಯಾವ ವರ್ಗದವರನ್ನು ಕೆಲಸದಿಂದ ತೆಗೆಯಲಾಗುತ್ತದೆ ಎಂದು ತಿಳಿಸಿರಲಿಲ್ಲ. ಕಳೆದ ವರ್ಷ ಈ ಸಂಸ್ಥೆ 8,500 (8%) ಕೆಲಸಗಾರರನ್ನು ಉದ್ಯೋಗಿಗಳನ್ನು ತೆಗೆದುಹಾಕಿತ್ತು.

Dell: 'ಡೆಲ್' ಸಂಸ್ಥೆಯಲ್ಲಿ ವಜಾ ಆಗಿದ್ದೆಷ್ಟು?
ಲ್ಯಾಪ್‌ಟಾಫ್ ಉತ್ಪಾದನೆಯಲ್ಲಿ ಗುರುತಿಸಿಕೊಂಡಿರುವ ಜಾಗತಿಕ ಸಂಸ್ಥೆ ಡೆಲ್ (Dell) ತನ್ನ ಉದ್ಯೋಗಿಗಳನ್ನು ಕಡಿತಗೊಳಿದ್ದರ ಬಗ್ಗೆ ಮಾಹಿತಿ ನೀಡಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಡೆಲ್ ಸಂಸ್ಥೆಯಲ್ಲಿ ಒಟ್ಟು 1,26,000 ರಷ್ಟು ನೌಕರರು ಇದ್ದಾರು. ಅದು ಈಗ (2023) 1,20,000 ರಷ್ಟಕ್ಕೆ ಇಳಿಕೆ ಆಗಿದೆ. ಅಂದರೆ ಶೆಕಡಾ 11ರಷ್ಟು ನೌಕರರನ್ನು ಡೆಲ್ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
Apple: 'ಆಪಲ್' ಕಂಪನಿ ವಜಾ ಮಾಹಿತಿ
ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಗ್ಯಾಡ್ಜೆಟ್ ವಿಭಾಗದಲ್ಲಿ ಹೆಸರು ಮಾಡಿರುವ ಖ್ಯಾತ ಆಪಲ್ ಸಂಸ್ಥೆಯು ನೌಕರರ ವಜಾ ಮಾಡಿದೆ. ಆಪಲ್ ವಾಚ್ ಮಾದರಿಗಾಗಿ ಮೈಕ್ರೋಎಲ್ಇಡಿ ಡಿಸ್‌ಪ್ಲೈಗಳನ್ನು ಅಭಿವೃದ್ಧಿಪಡಿಸುವ ಆಂತರಿಕ ಪ್ರಯತ್ನ ನಿಲ್ಲಿದೆ ಎಂದು ಇತ್ತೀಚೆಗೆ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇದರಿಂದಾಗಿ ಅಮೆರಿಕಾ ಹಾಗೂ ಏಷ್ಯಾದ ಕಚೇರಿಯಲ್ಲಿಗಲ್ಲಿ ನೂರಾರು ಜನರನ್ನು ಕೈಬಿಟ್ಟಿತು.
IBM: ಐಬಿಎಂ ಉದ್ಯೋಗ ಕಡಿತದ ವಿವರ
ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪ್ (IBM) ಕಂಪನಿಯು ಒಂದೇ ಒಂದು ಮಾತು ತಿಳಿಸದೇ ತನ್ನ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಅನೇಕ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಆದರೆ ಎಷ್ಟು ಉದ್ಯೋಗಿಗಳನ್ನು ಕಡಿತ ಮಾಡುತ್ತೇವೆ ಎಂದು ತಿಳಿಸಿಲ್ಲ. ಕೇವಲ ಏಳು ನಿಮಿಷದ ಸಭೆಯಲ್ಲಿ, ಕಾರಣ ತಿಳಿಸದೇ ನೌಕರರ ವಜಾ ಘೋಷಿಸಿತು.
Turnitin: ಟರ್ನಿಟಿನ್ ಉದ್ಯೋಗ ವಜಾ
ಕೃತಿಚೌರ್ಯ ಪತ್ತೆ ಸಂಸ್ಥೆಯಾದ ಟರ್ನಿಟಿನ್ (Turnitin) ಪ್ರಸಕ್ತ ವರ್ಷ 2024ರ ಆರಂಭದಲ್ಲಿ ಸುಮಾರು 15 ಜನರನ್ನು ವಜಾಗೊಳಿಸಿತು. ಈ ಕಂಪನಿಯು ಒಂದೂವರೆ ವರ್ಷದ ಅಂತದಲ್ಲಿ ತನ್ನಲ್ಲಿನ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಿದೆ ಎಂದು ಕಂಪನಿಯ CEO ಕ್ರಿಸ್ ಕ್ಯಾರೆನ್ ತಿಳಿಸಿದ್ದಾರೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.












Click it and Unblock the Notifications