Linkedin Layoffs: ನೂರಾರು ಉದ್ಯೋಗಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಪ್ರತಿಷ್ಠಿತ ಕಂಪನಿ
Linkedin Layoffs: ವೃತ್ತಿ ಸಾಮಾಜಿಕ ಜಾಲತಾಣ ವೇದಿಕೆ ಆಗಿರುವ ಲಿಂಕ್ಡ್‌ಇನ್ (Linkedin) ಕಂಪನಿಯು ತನ್ನ ನೌಕರರಿಗೆ ಶಾಕ್ ನೀಡಿದೆ. ದೇಶ ವಿದೇಶಗಳಲ್ಲಿರುವ ಟೆಕ್ ಕಂಪನಿ, ಭಾಷ್‌ನಂತರ ಇತರ ವಲಯದ ಕಂಪನಿಗಳು ಸಹ ತಮ್ಮ ನೌಕರರ ಉದ್ಯೋಗ ಕಡಿತ ಘೋಷಿಸಿತ್ತುವೆ. ಅದರ ಬೆನ್ನಲ್ಲೇ ಲಿಂಕ್ಡ್ ಇನ್ ಸಹ ನೂರಾರು ಉದ್ಯೋಗಿಗಳನ್ನು ಕಡಿಗೊಳಿಸಿದೆ ಎಂದು ವರದಿ ಆಗಿದೆ.
ಲಿಂಕ್ಡ್‌ಇನ್ ಕಂಪನಿಯು ನಿರ್ದಿಷ್ಟ ಒಂದು ಪ್ರದೇಶಕ್ಕೆ ಸಂಬಂಧಿಸಿದಂತೆ ಅಲ್ಲದೇ ಒಟ್ಟಾರೆ ಜಾಗತಿಕವಾಗಿ ಎರಡು ವಾರಗಳ ಹಿಂದೆ ಉದ್ಯೋಗಿಗಳ ಕಡಿತಕ್ಕೆ ನಿರ್ಧರಿಸಿತ್ತು. ಜಾಗತಿಕ ಉದ್ಯೋಗಿಗಳ ಶೇಕಡಾ 1ರಷ್ಟು ನೌಕರರಿಗೆ ತಾವು ಕೆಲಸ ಕಳೆದುಕೊಳ್ಳುವ ಬಗ್ಗೆ ಕಂಪನಿ ಖಾತ್ರಿಪಡಿಸಿದೆ.

ಜಾಗತಿಕವಾಗಿ ಹೊಂದಿರುವ ಒಟ್ಟು ನೌಕರರರಲ್ಲಿ ಲಿಂಕ್ಡ್ ಇನ್ ಶೇಕಡಾ 1 ರಷ್ಟು ಅಂದರೆ ಸುಮಾರು 200 ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಅದರ ಸಂದೇಶವನ್ನು ಉದ್ಯೋಗಿಗಳ ಇ- ಮೇಲ್‌ಗೆ ಕಳುಹಿಸಿದೆ ಎಂದು ದಿ ಇನ್ಫಾರ್ಮೇಶನ್ ವರದಿ ಮಾಡಿದೆ. ಉದ್ಯೋಗದಲ್ಲಿನ ಮರು ಹೊಂದಾಣಿಕೆ, ಅಗತ್ಯಕ್ಕಿಂತ ಹೆಚ್ಚುವರಿ ನೇಮಕಾತಿ, ಆರ್ಥಿಕ ವೆಚ್ಚ ಸರಿದೂಗಿಸಲು ಉದ್ಯೋಗ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ವೃತ್ತಿಪರ ಉದ್ಯೋಗಿಗಳ ಹೊಂದಾಣಿಕೆ ಭಾಗವಾಗಿ ಕಳೆದ ವರ್ಷ 2023 ರಲ್ಲಿ, ಕಂಪನಿಯು ಒಂದಷ್ಟು ವಜಾಗೊಳಿಸಿತ್ತು. ಒಂದೆರಡು ಭಾರಿ ಉದ್ಯೋಗಿಗಳ ವಜಾ ಘೋಷಿಸಿತು. ತನ್ನ ಅಪ್ಲಿಕೇಷನ್‌ನಲ್ಲಿ ಮಹತ್ವದ ಬದಲಾವಣೆ ತಂದಿದೆ. ಲಿಂಕ್ಡ್‌ಇನ್‌ನ ಮೂಲ ಕಂಪನಿ, ಮೈಕ್ರೋಸಾಫ್ಟ್, 2024 ರಲ್ಲಿ ಅನೇಕ ಅಧಿಕ ಉದ್ಯೋಗಿಗಳ ವಜಾಗೊಳೀಸಿದೆ. ವಿವಿಧ ಯುನಿಟ್‌ಗಳಲ್ಲಿ ಕಾರ್ಯದಲ್ಲಿದ್ದ ಒಟ್ಟು ಸುಮಾರು 1,000 ಕ್ಕೂ ಹೆಚ್ಚು ನೌಕರರು ಕೆಲಸ ಕಳೆದಿಕೊಂಡಿದ್ದಾರೆ.

ಲಿಂಕ್ಡ್ಇನ್ ತಮ್ಮ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಉತ್ಪಾದಕ AI-ಚಾಲಿತ ಸಾಧನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಷಯ ರಚನೆ ಸರಳಗೊಳಿಸಲು ಈ ಎಐ ಬಳಕೆ ಪರಿಣಾಮಕಾರಿಯಾಗಿದೆ. ಇದರಿಂದ ವೈಯಕ್ತಿಕ ಮತ್ತು ಉದ್ಯಮ ಬಳಕೆದಾರರನ್ನು ಆಕರ್ಷಿಸಲು ಸಾಧ್ಯಾಗುತ್ತದೆ ಎಂದು ಕಂಪನಿ ನಂಬಿದೆ. ಇದು ಸಹ ಒಂದು ರೀತಿಯಲ್ಲಿ ಉದ್ಯೋಗ ಕಡಿತಕ್ಕೆ ಕಾರಣ ಎನ್ನಲಾಗುತ್ತದೆ.
ಕಂಪನಿಯ ಉದ್ಯೋಗಿಗಳು ಮಾಡುವ ಅದೆಷ್ಟೋ ಕಾರ್ಯವನ್ನು, ನಿರ್ವಹಣೆಯನ್ನು ಎಐ ತಂತ್ರಜ್ಞಾನ ಮಾಡುತ್ತಿದೆ. ಹೀಗಾಗಿ ಎಐ ಸಾಧನವು ನೌಕರರ ಜಾಗ ತುಂಬುತ್ತಿದೆ. ಇದರ ಬೆನ್ನಲ್ಲೆ ಮಾರುಕಟ್ಟೆಯ ಅಗತ್ಯತೆ, ತಾಂತ್ರಿಕ ಅಗತ್ಯತೆ ನೋಡಿಕೊಂಡು ಕೆವೊಂದಿಷ್ಟು ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದಲೇ ಉದ್ಯೋಗಿಗಳ ಕಡಿತ ಮಾಡಲಾಗುತ್ತಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ ಎಂದು ವರದಿ ಆಗಿದೆ.












Click it and Unblock the Notifications