Jobs: ವಾರಕ್ಕೆ 70, 90 ಗಂಟೆ ಕೆಲಸ ಮಾಡಬೇಕು!: 'ಕಾರ್ಮಿಕ ಕಾನೂನು' ಕೆಲಸದ ಅವಧಿ ಬಗ್ಗೆ ಹೇಳುವುದೇನು? ಮಾಹಿತಿ
ಬೆಂಗಳೂರು, ಜನವರಿ 12: ಐಟಿ ಕಂಪನಿಗಳ ಮುಖ್ಯಸ್ಥರು ಕೆಲಸ ಅವಧಿ ಕುರಿತು ನೀಡಿದ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗೆ ಕೆಲಸ ಮಾಡಬೇಕು ಎಂಬ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅದರ ಬೆನ್ನಲ್ಲೆ ಎಲ್ ಆಂಡ್ ಟಿ ಕಂಪನಿ ಚೇರ್ಮನ್ ಸುಬ್ರಹ್ಮಣ್ಯನ್ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಕಾರ್ಮಿಕ ಕಾಯ್ದೆ ಕೆಲಸ ಬಗ್ಗೆ ಏನು ಹೇಳುತ್ತದೆ? ರಾಜ್ಯದಲ್ಲಿ ಯಾವ ಕೆಲಸ ಅವಧಿ ಜಾರಿಯಲ್ಲಿದೆ.
ವಾರಕ್ಕೆ 90 ಗಂಟೆ ಕೆಲಸ ಅಂದರೆ ಪ್ರತಿ ದಿನ ಒಬ್ಬ ಉದ್ಯೋಗಿಯು 15 ಗಂಟೆ ಕೆಲಸ ಮಾಡಬೇಕಾಗುತ್ತದೆ. ಈ ಉದ್ಯಮಿಗಳು ಹೇಳುವಷ್ಟು ಸಮಯ ಕೆಲಸ ಮಾಡಿದರೆ ಆರೋಗ್ಯದ ಕತೆ ಏನು ಎಂದು ಉದ್ಯೋಗಿಗಳು, ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ. ಆದರೆ ತಮ್ಮ ಹೇಳಿಕೆಗಳನ್ನು ಉದ್ಯಮಿಗಳು ಸಮರ್ಥಿಸಿಕೊಂಡಿದ್ದಾರೆ ಎಂದು 'ಟಿವಿ ನೈನ್' ವರದಿ ಮಾಡಿದೆ.

ಕರ್ನಾಟಕ ಸೇರಿದಂತೆ ಭಾರತಾದ್ಯಂತ ವಿವಿಧ ರಂಗಗಳಲ್ಲಿ ದುಡಿಯು ವರ್ಗದವರು ತಮ್ಮದೇ ಆದ ರೀತಿಯ ಸಮಯಕ್ಕೆ ಹೊಂದಿಕೊಂಡು ದುಡಿಯುತ್ತಿದ್ದಾರೆ. ಐಟಿ ಕಂಪನಿಗಳು, ಖಾಸಗಿ ಕಚೇರಿಗಳ ಉದ್ಯೋಗಿಗಳು, ಗೃಹ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಿರ್ಕರು ಹೆಚ್ಚು ಸಮಯ ದುಡಿಯುತ್ತಿದ್ದಾರೆ. ಅವರು ಸದ್ಯ ದುಡಿಯುತ್ತಿರುವ ಸಮಯವೇ ಕಾರ್ಮಿಕ ಕಾಯ್ದೆಗಿಂತಲೂ ಅಧಿಕ ಸಮಯ ಎನ್ನಲಾಗಿದೆ.
1948ರ ಕಾರ್ಖಾನೆ ಕಾಯ್ದೆ : 48 ಗಂಟೆ ಕೆಲಸ
ಭಾರತಕ್ಕೆ ಸ್ವಾತಂತ್ರ್ಯ ಬಂದ ಬೆನ್ನಲ್ಲೆ 1948ರ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು 1948ರ ಕಾರ್ಖಾನೆ ಕಾಯ್ದೆ ಜಾರಿಗೆ ತರಲಾಯಿತು. ಇದು ದೇಶ ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದ್ದಾಗಿದೆ. ಎಲ್ಲ ವರ್ಗದ ನೌಕರರು/ಕಾರ್ಮಿಕರರಿಗೂ ಈ ಕಾಯ್ದೆ ಅನ್ವಯಿಸುತ್ತದೆ. ದೇಶಕ್ಕೆ ಒಂದು ಕಾಯ್ದೆ ಆದರೆ, ಆಯಾ ರಾಜ್ಯಗಳು ತಮ್ಮದೇ ಆದ ಸಾಂಸ್ಥಿಕ ಕಾಯ್ದೆಗಳು ಇವೆ. ಈ ಕಾಯ್ದೆಗಳ ಅಡಿ ವಾರಕ್ಕೆ 48ಗಂಟೆ ಮಾತ್ರ ಕೆಲಸ ಮಾಡಬೇಕು.

ಕಾಯ್ದೆಯಡಿ ಇರುವ ನಿಗದಿತ ಅವಧಿಗಿಂತಲೇ ಹೆಚ್ಚು ಅವಧಿಗೆ ದುಡಿದರೆ ಅದನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಕೆಲವು ರಂಗದಲ್ಲಿ ದಿನಕ್ಕೆ 08 ಗಂಟೆಗೂ ಹೆಚ್ಚು ಕೆಲಸ ಮಾಡಿದರೆ ನೌಕರರಿಗೆ 'ಓಟಿ' ರೀತಿಯಲ್ಲಿ ಹೆಚ್ಚುವರಿ ಅವಧಿಗೆ ಹೆಚ್ಚುವರಿ ವೇತನ ನೀಡುತ್ತಾರೆ.
ಕರ್ನಾಟಕ ರಾಜ್ಯ ಕಾರ್ಖಾನೆಗಳ ಕಾಯ್ದೆ ಕುರಿತು..
ಕರ್ನಾಟಕದಲ್ಲಿ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಒಬ್ಬ ನೌಕರರ/ಕಾರ್ಮಿಕ ವಾರಕ್ಕೆ 48 ಗಂಟೆ ಕೆಲಸ ಮಾಡಬಹುದು. ದಿನಕ್ಕೆ ಗರಿಷ್ಠ 12 ಗಂಟೆ ದುಡಿಯಬಹುದು. ಹೆಚ್ಚುವರಿ ಕೆಲಸ ಮಾಡದರೆ ಆ ಅವಧಿಯನ್ನು ಅದನ್ನು ಪಾವತಿ ರಜಾದಿನವಾಗಿ ಪರಿಗಣಿಸಬೇಕು ಎಂದೆಲ್ಲ ನಿಯಮ ರೂಪಿಸಲಾಗಿದೆ. ಇವೆಲ್ಲವು ಕಾರ್ಮಿಕರು/ಉದ್ಯೋಗಿಗಳ ಪರವಾಗಿದೆ.
ಇನ್ನೂ ಮಹಿಳೆಯರು ಒಪ್ಪಿದರೆ ಮಾತ್ರವೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಬೇಕು. ಒತ್ತಾಯಿಸುವಂತಿಲ್ಲ, ಬದಲಾಗಿ ಹಗಲು ನಿಗದಿತ ಅವಧಿಗೆ ಮಾತ್ರವೇ ದುಡಿಸಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ.
ವಾರದ 48 ಗಂಟೆ ಅವಧಿಯು ಊಟ, ಟೀ ಕಾಫಿ ಸಮಯ ಒಳಗೊಂಡಿರುತ್ತದೆ. ಗರಿಷ್ಠ 12 ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತಾಗುತ್ತದೆ. ಉಳಿದ ದಿನ ಪಾವತಿ ರಜಾ ದಿನವಾಗಿ ಪರಿಗಣಿಸಬೇಕು. ಹೀಗೆ ಅತ್ಯಧಿಕ ಸಮಯ ದುಡಿದರೆ ತಕ್ಕ ಸೌಲಭ್ಯ ನೀಡುವಂತೆ ನಿಯಮಗಳು ಹೇಳುತ್ತವೆ.
ಈ ಮಧ್ಯೆ ವಾರಕ್ಕೆ 70 ಗಂಟೆ ಇಲ್ಲವೇ 90 ಗಂಟೆ ಕೆಲಸ ಮಾಡಬೇಕು. ಇದರಿಂದ ಜಾಗತಿಕ ಸ್ಪರ್ಧೆಯಲ್ಲಿ ಪೈಪೋಟಿ ಒಡ್ಡಲು ಸಾಧ್ಯ. ಉದ್ಯೋಗಿಗಳು ವೇಗವಾಗಿ ಮುಂದೆ ಬರಲು, ಜೀವನ ಸುಧಾರಿಸಲು ಹೆಚ್ಚು ಕೆಲಸ ಮಾಡಬೇಕು. ಭಾನುವಾರವು ರಜೆ ಪಡೆಯದೇ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದೆಲ್ಲ ಹೇಳಿಕೆ ನೀಡಿದ ಉದ್ಯಮಿಗಳು ಸಮರ್ಥನೆ ನೀಡಿದ್ದಾರೆ.
ಕೆಲಸದ ಜೊತೆಗೆ ಉದ್ಯೋಗಿಗೆ ವೈಯಕ್ತಿಕ ಬದುಕು ಮುಖ್ಯ
ಆದರೆ ಹೀಗೆ ಕೆಲಸ ಮಾಡಿದರೆ, ಆರೋಗ್ಯ ಸ್ಥಿತಿ, ಉದ್ಯೋಗಿಗಳ ಮನೆ ಸ್ಥಿತಿ ಏನಾಗಬೇಕು? ಎಂದೆಲ್ಲ ಸಾರ್ವಜನಿಕರು ಈ ಹೇಳಿಕೆಯನ್ನು ವಿರೋಧಿಸಿವೆ. ವೈಯಕ್ತಿಕ ಜೀವನ ಕಥೆ ಏನಾಗುತ್ತದೆ. ಉದ್ಯೋಗ ಮುಖ್ಯ ಹೇಗೋ ನೌಕರರನಿಗೆ ಮಾನಸಿಕವಾಗಿ ಉತ್ತಮ ಸ್ಥಿತಿ ಹೊಂದಿರುವುದು, ಮನರಂಜನೆ, ಕುಟುಂಬಕ್ಕೆ ಪ್ರಾಶಸ್ತ್ಯ ನೀಡುವುದು ಮುಖ್ಯವಾಗಿರುತ್ತದೆ. ಇದೆಲ್ಲ ಆಗಬೇಕಾದರೆ, ಉದ್ಯಮಿಗಲು ಹೇಳುವಷ್ಟು ಗರಿಷ್ಠ ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಅಂತಲೂ ಕೆಲವು ವಾದಿಸಿದ್ದಾರೆ.
ಕಾಯ್ದೆಗಳು ಜಾರಿಯಲ್ಲಿದ್ದರು ಆಯಾ ರಂಗ, ಕಂಪನಿಗಳು ಹೆಚ್ಚು ಸಮಯವೇ ದುಡಿಸಿಕೊಳ್ಳಲು ಮುಂದಾಗುತ್ತವೆ. ಕೆಲವು ನೌಕರರು ಇದಕ್ಕೆ ಪೂರಕವಾಗಿ ಮಾತನಾಡಿದರೆ, ಇನ್ನೂ ಹಲವರು ವಾರದಲ್ಲಿ 90 ಗಂಟೆ, 70ಗಂಟೆ ಸಮಯ ದುಡಿಯುವ ಕೆಲಸ ಹೇಳಿಕೆ ವಿರೋಧಿಸಿದ್ದಾರೆ.












Click it and Unblock the Notifications