ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ರೇಷ್ಮೆ ಸಂಶೋಧನೆ ಸಂಸ್ಥೆ; ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕೆಲಸ

|
Google Oneindia Kannada News

ಬೆಂಗಳೂರು, ಫೆಬ್ರವರಿ 15; ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ 371 (ಜೆ) ಅಡಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 28/2/2020 ಕೊನೆಯ ದಿನವಾಗಿದೆ.

ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸರ್ಕಾರದ ಒಂದು ಸ್ವಾಯತ್ತ ಅನುದಾನಿತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆ1980 ರಡಿ ನೋಂದಣಿಯಾಗಿರುತ್ತದೆ.

ಬಿಡಿಎ ನೇಮಕಾತಿ; ಫೆಬ್ರವರಿ 25ರೊಳಗೆ ಅರ್ಜಿ ಹಾಕಿಬಿಡಿಎ ನೇಮಕಾತಿ; ಫೆಬ್ರವರಿ 25ರೊಳಗೆ ಅರ್ಜಿ ಹಾಕಿ

ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ವಯ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ 371 (ಜೆ) ಅಡಿ ಗುರುತಿಸಿರುವ ಹುದ್ದೆಗಳನ್ನು ಸಂಸ್ಥೆಯ ಮುಖ್ಯ ಕಚೇರಿ ತಲಘಟ್ಟಪುರ ಬೆಂಗಳೂರು ಇಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ ಯುಐಡಿಎಐ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

KSSRDI Recruitment Apply For Various Post

ಹುದ್ದೆಯ ವಿವರಗಳು; ವಿಜ್ಞಾನಿ-ಸಿ (ರೇಷ್ಮೆ ಕೃಷಿ ವಿಭಾಗ) 1 ಹುದ್ದೆ. ಸಾಮಾನ್ಯ ಅಭ್ಯರ್ಥಿ. ವೇತನ 55,900 ರಿಂದ 99,300. ವಿಜ್ಞಾನಿ-ಸಿ (ರೇಷ್ಮೆ ತಾಂತ್ರಿಕ ವಿಭಾಗ) 1 ಹುದ್ದೆ. ಪರಿಶಿಷ್ಟ ಜಾತಿ. ವೇತನ 53,900 ರಿಂದ 99,600 ರೂ.ಗಳು. ವಿಜ್ಞಾನಿ (ಇ) 1 ಹುದ್ದೆ. ಪರಿಶಿಷ್ಟ ಜಾತಿ. ವೇತನ 52,650 ರಿಂದ 97,100 ರೂ.ಗಳು.

ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ; 500 ಹುದ್ದೆಗಳು ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ; 500 ಹುದ್ದೆಗಳು

ಹಿರಿಯ ಸಂಶೋಧನಾ ಸಹಾಯಕರು. 4 ಹುದ್ದೆಗಳು. ಹಿಪ್ಪುನೇರಳೆ ವಿಭಾಗ 1, ರೇಷ್ಮೆ ಕೃಷಿವಿಭಾಗ 2, ರೇಷ್ಮೆ ತಾಂತ್ರಿಕ ವಿಭಾಗ 1 ಹುದ್ದೆ. ವೇತನ 27,650 ರಿಂದ 52,650 ರೂ.ಗಳು. ದ್ವಿತೀಯ ದರ್ಜೆ ಸಹಾಯಕರು 1 ಹುದ್ದೆ. ವೇತನ ಸಾಮಾನ್ಯ ಅಭ್ಯರ್ಥಿ 21,400 ರಿಂದ 42,000 ರೂ.ಗಳು.

ಪ್ರಾದೇಶಿಕ ಸ್ಥಳೀಯ ವೃಂದಕ್ಕೆ (ಕ.ರಾ.ರೇ.ಸಂ.ಅ. ಸಂಸ್ಥೆಯ ಉಪ ಕೇಂದ್ರ ಕಡಗಂಚಿ. ಕಲಬುರಗಿ ಜಿಲ್ಲೆ). ಹಿರಿಯ ಸಂಶೋಧನಾ ಸಹಾಯಕರು ರೇಷ್ಮೆ ವಿಭಾಗ 1 ಹುದ್ದೆ. ಪ್ರವರ್ಗ 2ಎ. ವೇತನ ಶ್ರೇಣಿ 27,650 ರಿಂದ 52,650 ರೂ.ಗಳು.

ಪ್ರಸ್ತುತ ಕಡಗಂಜಿಯ ಉಪಕೇಂದವನ್ನು ಸ್ಥಳಾಂತರ ಮಾಡಲಾಗುತ್ತಿದೆ. ಆದ್ದರಿಂದ ಅಲ್ಲಿನ ಸಂಶೋಧನಾ ಕಾರ್ಯಗಳನ್ನು ತಲಘಟ್ಟಪುರದ ಮುಖ್ಯ ಕಚೇರಿಯಲ್ಲಿಯೇ ಕೈಗೊಳ್ಳಬೇಕಾಗಿದೆ. ಆದಕಾರಣ ಆಯ್ಕೆಯಾದ ಅಭ್ಯರ್ಥಿಗಳು ಮುಖ್ಯ ಕಚೇರಿ ತಲಘಟ್ಟಪುರ ಅಥವ ಕಾರ್ಯ ಹಂಚಿಕೆ ಮಾಡುವ ಸಂಸ್ಥೆಯ ಇತರೆ ಉಪ ಕೇಂದ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ.

ವಯೋಮಿತಿ; ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮತಿ 28/2/2022ಕ್ಕೆ ವಿಜ್ಞಾನಿ-ಸಿ ಹುದ್ದೆಗೆ ಸಾಮಾನ್ಯ 45, ಪರಿಶಿಷ್ಟ ಜಾತಿ 50 ವರ್ಷಗಳು. ವಿಜ್ಞಾನಿ-ಬಿ ಹುದ್ದೆಗೆ ಪರಿಶಿಷ್ಟ ಜಾತಿ 40 ವರ್ಷಗಳು. ಹಿರಿಯ ಸಂಶೋಧನಾ ಸಹಾಯಕ ಹುದ್ದೆ ಸಾಮಾನ್ಯ, ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ 35 ವರ್ಷಗಳು. ಪರಿಶಿಷ್ಟ ಜಾತಿ 40 ವರ್ಷಗಳು. ಪ್ರವರ್ಗ 2 (ಎ) 38 ವರ್ಷಗಳು.

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್-ಕರ್ನಾಟಕ ಪ್ರದೇಶ ನೇಮಕಾತಿ ಮೀಸಲಾತಿ) ಆದೇಶ 2013ರ ಹಾಗೂ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಯ ನಿಯಮ (13) ರಿಂದ (17)ರ ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ವಯ ಮೆರಿಟ್ ಆಧಾರದ ಮೇಲೆ ಆಯಾ ಹುದ್ದೆಯ 1:3ರಂತೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ/ ನೇಮಕಾತಿ ಮಾಡಲಾಗುತ್ತದೆ.

ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲೆಗಳ ಜೊತೆ ಫೆಬ್ರವರಿ 28ರ ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು. ಅಂಚೆ ಮೂಲಕ ಮಾತ್ರ ತಲುಪುವಂತೆ ಕಳಿಸಬೇಕು.

ಅರ್ಜಿ ಸಲ್ಲಿಸಲು ವಿಳಾಸ ನಿರ್ದೇಶಕರು, ಕ.ರಾ.ರೇ.ಸಂ.ಅ. ಸಂಸ್ಥೆ, ತಲಘಟ್ಟಪುರ, ಕನಕಪುರ ರಸ್ತೆ, ಬೆಂಗಳೂರು 560109.

ಅರ್ಜಿ ಪಡೆಯಲು, ಹೆಚ್ಚಿನ ಮಾಹಿತಿಗಾಗಿ ವಿಳಾಸ www.kssrdi.karnataka.gov.in

ಈ ನೇಮಕಾತಿಯನ್ನು ಯಾವುದೇ ಸಂದರ್ಭದಲ್ಲಿಯೂ ರದ್ದುಗೊಳಿಸಲು ಸಂಸ್ಥೆ ಅಧಿಕಾರ ಹೊಂದಿರುತ್ತದೆ. ಅಪೂರ್ಣ ಮಾಹಿತಿ, ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗಳು ಎಲ್ಲಾ ದಾಖಲೆಗಳ ಮೂಲ ಪ್ರತಿ ಹೊಂದಿರಬೇಕು ಮತ್ತು ಸೂಚನೆ ನೀಡಿದ ಸಮಯದಲ್ಲಿ ಹಾಜರುಪಡಿಸಬೇಕು.

Recommended Video

RCB ಆಟಗಾರರ ಕಾಂಬಿನೇಷನ್ ನೋಡಿದ್ರೆ ಗ್ಯಾರೆಂಟಿ ಕಪ್ ನಮ್ದೇ | Oneindia Kannada

English summary
Karnataka State Sericulture Research & Development Institute invited applications for various post. Candidates can apply till February 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X