KSEEB Recruitment 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೇಮಕಾತಿ
ಬೆಂಗಳೂರು, ಏಪ್ರಿಲ್ 12; ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು, ಗುತ್ತಿಗೆ ಆಧಾರದ ಮೇಲೆ ವಕೀಲರ ನೇಮಕಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಮಾಡಲು ಏಪ್ರಿಲ್ 25 ಕೊನೆಯ ದಿನವಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವಾಲಯ ಬಹುಮಹಡಿ ಕಟ್ಟಡ ಬೆಂಗಳೂರು ಮತ್ತು ಧಾರವಾಡ ವಿಭಾಗಕ್ಕೆ ಸಂಬಂಧಪಟ್ಟಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ನಿರ್ವಹಣೆಗೆ ಸಹಾಯಕರನ್ನು ನೇಮಕ ಮಾಡಲಾಗುತ್ತಿದೆ.
ಸರ್ಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರಾಗಿ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಹಿರಿಯ ವಕೀಲರು, ಕಿರಿಯ ವಕೀಲರ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಹಿರಿಯ ವಕೀಲರ ಹುದ್ದೆಗಳ ಸಂಖ್ಯೆ 2. ಕ್ರೋಡೀಕೃತ ಮಾಸಿಕ ಸಂಭಾವನೆ 50,000. ಮಾಸಿಕ ಇತರ ಭತ್ಯೆ 5 ಸಾವಿರ ರೂ., ಒಟ್ಟು 55,000 ರೂ.ಗಳು.
ಕಿರಿಯ ವಕೀಲರ ಹುದ್ದೆಗಳ ಸಂಖ್ಯೆ 3. ಕ್ರೋಡಿಕೃತ ಮಾಸಿಕ ಸಂಭಾವನೆ 40,000 ರೂ., ಮಾಸಿಕ ಇತರೆ ಭತ್ಯೆ 5 ಸಾವಿರ ರೂ., ಒಟ್ಟು ರೂ. 45,000.
ವಕೀಲರ ನೇಮಕಾತಿ ಆಯ್ಕೆಯು ಸಂಪೂರ್ಣವಾಗಿ ಸಮಾಲೋಚನೆ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಆಧಾರಿತವಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 25/4/2022.
ಆಸಕ್ತ ಅರ್ಹ ವಕೀಲರು ಸಂದರ್ಶನಕ್ಕೆ ಹಾಜರಾಗಲು ಮತ್ತು ವಕೀಲರ ಸಂಭಾವನೆ, ಅರ್ಹತೆ, ಅನುಭವ ಮತ್ತು ಇತರೆ ಮಾನದಂಡ ಹಾಗೂ ಷರತ್ತುಗಳು ಒಳಗೊಂಡಿರುವ ವಕೀಲರ ಆಹ್ವಾನದ ವಿವರಗಳನ್ನು ವೆಬ್ ಸೈಟ್‌ನಲ್ಲಿ ನೋಡಬಹುದಾಗಿದೆ.
ವೆಬ್ ಸೈಟ್ ವಿಳಾಸ sslc.karnataka.gov.in
ಅಭ್ಯರ್ಥಿಗಳು ಇ-ಮೇಲ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಾನೂನು ಸಲಹೆಗಾರ ಹುದ್ದೆ; ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ 'ಸಖಿ' ಒನ್ ಸ್ಟಾಪ್ ಕೇಂದ್ರಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರು/ ಪ್ಯಾರಾಲೀಗಲ್ ಪರ್ಸನಲ್ 2 ಹುದ್ದೆ (ಮಹಿಳಾ ಅಭ್ಯರ್ಥಿಗಳಿಗೆ ಮೀಸಲು) ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವವರು ಕಾನೂನು ಪದವೀಧರರಾಗಿರಬೇಕು. ಸರ್ಕಾರಿ, ಸರ್ಕಾರೇತರ ಯೋಜನೆ, ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಮತ್ತು ಕಂಪ್ಯೂಟರ್ ತರಬೇತಿ ಕಡ್ಡಾಯವಾಗಿದೆ.
ಆಯ್ಕೆಯಾದವರಿಗೆ ಮಾಸಿಕ ರೂ. 25000 ಗೌರವಧನ ನೀಡಲಾಗುತ್ತದೆ. 'ಸಖಿ' ಒನ್ ಸ್ಟಾಪ್ ಸೆಂಟರ್‌ಗೆ ಆಯ್ಕೆಯಾಗುವ ಕಾನೂನು ಸಲಹೆಗಾರರು 24*7 ಕಾರ್ಯನಿರ್ವಹಿಸಲು ಅನುವಾಗುವಂತೆ ಹಗಲು ಮತ್ತು ರಾತ್ರಿ ಪಾಳಿಯದಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. ಈ ನೇಮಕಾತಿಯು 11 ತಿಂಗಳ ಅವಧಿಯದಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ನವೀಕರಿಸಲಾಗುವುದು.
ಅರ್ಹ ಅಭ್ಯರ್ಥಿಗಳು ಸ್ವಯಂ ದೃಡೀಕರಿಸಿದ ಸ್ವ ವಿವರಗಳುಳ್ಳ ಅರ್ಜಿಯೊಂದಿಗೆ ಅಂಕಪಟ್ಟಿಗಳು ಮತ್ತು ಅನುಭವ ಪ್ರಮಾಣ ಪತ್ರಗಳನ್ನು ಏಪ್ರಿಲ್ 26ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ. ಅರ್ಜಿಗಳನ್ನು ಖುದ್ದಾಗಿ ಸಲ್ಲಿಕೆ ಮಾಡಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-298379 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications