KPSC Recruitment 2023: ಕರ್ನಾಟಕದಲ್ಲಿ 230 ಹುದ್ದೆಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ ವಿಸ್ತರಣೆ, ವೇತನ, ವಿವರ
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕ ಲೋಕಸೇವಾ ಆಯೋಗ (KPSC)ವು ಖಾಲಿ ಇರುವ ನೂರಾರು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಮೊದಲು ಸೆಪ್ಟಂಬರ್ 30ಎಂದು ಹೇಳಾಗಿತ್ತು, ಇದೀಗ ಆ ದಿನಾಂಕವನ್ನು ಅಕ್ಟೊಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಸರ್ಕಾರಿ ಉದ್ಯೋಗ ಹುಡುಕುವವರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗ (KPSC) ಒಟ್ಟು 230 ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ (RPC) ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ವಿಸ್ತರಣೆ ಮಾಡಲಾಗಿದೆ. ಆಯ್ಕೆ ಆಗುವವರಿಗೆ ಅರ್ಜಿ ಕರ್ನಾಟಕದಲ್ಲಿ ಕೆಲಸ ದೊರೆಯಲಿದ್ದು, ಸೆಪ್ಟೆಂಬರ್ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಕರ್ನಾಟಕ ಲೋಕ ಸೇವಾ ಆಯೋಗ
ಹುದ್ದೆ ಹೆಸರು: ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್
ಹುದ್ದೆ ಸಂಖ್ಯೆ ಎಷ್ಟು: 230
ಮಾಸಿಕ ವೇತನ: ₹33,450 ರಿಂದ 62,600
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 31
ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗ ತಿಳಿಸಿದೆ.

ವಯಸ್ಸಿನ ಮಿತಿ: ಸಡಿಲಿಕೆ
ಕರ್ನಾಟಕ ಲೋಕ ಸೇವಾ ಆಯೋಗ ನೇಮಕಾತಿ ಪ್ರಕಾರ, ಅರ್ಜಿ ಸಲ್ಲಿಕೆ ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 30ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ-ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ ಐದು ವರ್ಷ, ಪ್ರವರ್ಗ 2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ವರ್ಷ ಹಾಗೂ ಪಿಎಚ್/ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರಲಿದೆ ಎಂದು ತಿಳಿಸಿದೆ.
ಅರ್ಜಿ ಶುಲ್ಕದ ವಿವರ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿ, ಪ್ರವರ್ಗ 2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 300 ರೂಪಾಯಿ, ಸಾಮಾನ್ಯ ಅಭ್ಯರ್ಥಿಗಳು- 600 ರೂಪಾಯಿ ಮತ್ತು ಪರಿಶಿಷ್ಟ ಜಾತಿ-ಪಂಗಡ, ಪ್ರವರ್ಗ 1,ಪಿಎಚ್ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ ಎಂದು ತಿಳಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಲ್ಕ ಪಾವತಿಸೇಕು.
ಆಯ್ಕೆ ಪ್ರಕ್ರಿಯೆ: ವೇತನ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮಾಸಿಕ ವೇತನ ಮತ್ತು
ಮಾಸಿಕ ₹33,450 ರಿಂದ 62,600 ರೂಪಾಯಿ ನೀಡಲಾಗುವುದು. ರಾಜ್ಯದಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ಕೆಪಿಎಸ್‌ಸಿ ಮಾಹಿತಿ ನೀಡಿದೆ.
ನೆನಪಿಡಬೇಕಾದ ದಿನಾಂಕ
ಅರ್ಜಿ ಸಲ್ಲಿಕೆ ಕೊನೆಯ ದಿನ: ಅಕ್ಟೋಬರ್ 31
ಕನ್ನಡ ಭಾಷಾ ಪರೀಕ್ಷೆ ದಿನಾಂಕ: 2024 ಜನವರಿ 20
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: 2024 ಜನವರಿ 21












Click it and Unblock the Notifications