ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1,520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ಕರ್ನಾಟಕ ಲೋಕಸೇವಾ ಆಯೋಗವು 1,520 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್ 20, 2018 ಕೊನೆಯ ದಿನಾಂಕವಾಗಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ವಿವಿಧ ವೃತ್ತಿಯ ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಿಐಎಸ್‌ಎಫ್‌ನಲ್ಲಿ 447 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಸಿಐಎಸ್‌ಎಫ್‌ನಲ್ಲಿ 447 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಫಿಟ್ಟರ್ 348 , ಟರ್ನರ್ 85, ಎಲೆಕ್ಟ್ರಾನಿಕ್ ಮೆಕಾನಿಕ್ 133, ಮೆಕಾನಿಕ್ ಮೋಟಾರ್ ವೆಹಿಕಲ್ 99, ಐ.ಸಿ.ಟಿ.ಎಸ್.ಎಮ್ 77, ಎಂ.ಆರ್.ಎ.ಸಿ. 94, ವರ್ಕ್ ಷಾಪ್ ಕ್ಯಾಲುಕುಲೇಷನ್ ಅಂಡ್ ಸೈನ್ಸ್ 150 ಹುದ್ದೆಗಳಿವೆ.

KPSC recruitment 2018 : Apply for 1520 posts

ಎಂಜಿನಿಯರಿಂಗ್ ಡ್ರಾಯಿಂಗ್ 98, ಮೆಕಾನಿಕ್ ಡೀಸೆಲ್ 49, ಇನ್ಸುಟ್ರುಮೆಂಟ್ ಮೆಕಾನಿಕ್ 04, ಎಲೆಕ್ಟ್ರೋಪ್ಲೇಟರ್ 01, ಎಲೆಕ್ಟ್ರಿಷಿಯನ್ 288, ಡ್ರೆಸ್ ಮೇಕಿಂಗ್ 31, ಇಂಟೀರಿಯರ್ ಡಿಸೈನಿಂಗ್ ಅಂಡ್ ಡೆಕೋರೆಷನ್ 10, ಡ್ರಾಫ್ಟ್ ಮನ್ ಸಿವಿಲ್ 04, ವೆಲ್ಡರ್ 16 ಹುದ್ದೆಗಳು.

ಯುಪಿಎಸ್ ಸಿ: ಅರಣ್ಯ ಇಲಾಖೆಯಲ್ಲಿ 110 ಹುದ್ದೆಗಳಿವೆಯುಪಿಎಸ್ ಸಿ: ಅರಣ್ಯ ಇಲಾಖೆಯಲ್ಲಿ 110 ಹುದ್ದೆಗಳಿವೆ

ಮೆಷಿನಿಷ್ಟ್ 16, ಆರ್ಕಿಟೆಕ್ಚರ್ ಅಸಿಸ್ಟೆಂಟ್ 07, ಕಾರ್ಪೆಟರಿ 02, ಡ್ರಾಫ್ಟ್ಸ್‌ ಮನ್ ಮೆಕಾನಿಕಲ್ 09, ಎಂ.ಎಂ.ಟಿ.ಎಂ 07, ಸಕ್ರೆಟರಿಯಲ್ ಪ್ರಾಕ್ಟ್ರೀಸ್ 02, ಪಿ.ಪಿ.ಓ. 01 ಹುದ್ದೆಗಳಿವೆ.

ಒಟ್ಟು 1520 ಹುದ್ದೆಗಳ ಪೈಕಿ 266 ಹುದ್ದೆಗಳು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೀಸಲಾಗಿವೆ. ಅಭ್ಯರ್ಥಿಗಳು 19/02/2018 ರಿಂದ 20/03/2018ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ಪಾವತಿ ಮಾಡಲು 21/03/2018 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Karnataka Public Service Commission (KPSC) invites application for 1,520 posts. 20th March 2018 last date to submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X