846 ಇಂಜಿನಿಯರ್‌ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

ಬೆಂಗಳೂರು, ಫೆಬ್ರವರಿ 10 : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 846 ಇಂಜಿನಿಯರ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಫೆಬ್ರವರಿ 27 ಕೊನೆಯ ದಿನವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ನೇಮಕಕ್ಕೆ ಆದೇಶ ಹೊರಡಿಸಲಾಗಿದೆ. ಒಟ್ಟು 846 ಹುದ್ದೆಗಳಿವೆ (761 ಸಿವಿಲ್, 85 ಮ್ಯಾಕಾನಿಕಲ್).[RTO ಹುದ್ದೆಯ ನೇಮಕಾತಿ ವಿವರಗಳು]

kpsc

ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಯು ತಪ್ಪು ಮಾಹಿತಿಯನ್ನು ಭರ್ತಿ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. [ಕೊಡಗು ನ್ಯಾಯಾಲಯದಲ್ಲಿ ಕೆಲಸ ಖಾಲಿ ಇದೆ]

ವಿದ್ಯಾರ್ಹತೆ, ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವ ಬಿ.ಟೆಕ್ ಪದವಿಯನ್ನು ಸಿವಿಲ್ ಅಥವ ಮ್ಯಾಕಾನಿಕಲ್‌ನಲ್ಲಿ ಪಡೆದಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ 40 ವರ್ಷಗಳು. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

ಮೀಸಲಾತಿ : ಸಹಾಯಕ ಇಂಜಿನಿಯರ್ 761 ಹುದ್ದೆಗಳು. ಮಹಿಳೆ 229, ಗ್ರಾಮೀಣ 191, ಮಾಜಿ ಸೈನಿಕ 75, ಇತರೆ 266. ಸಹಾಯಕ ಇಂಜಿನಿಯರ್ ಮ್ಯಾಕಾನಿಕಲ್ 85 ಹುದ್ದೆಗಳು. ಮಹಿಳೆ 26, ಗ್ರಾಮೀಣ 22, ಮಾಜಿ ಸೈನಿಕ 8, ಇತರೆ 29. ಅರ್ಜಿ ಸಲ್ಲಿಸಲು ವಿಳಾಸ

ಇಂಗ್ಲಿಶ್‌ನಲ್ಲಿ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+