ಕೊಪ್ಪಳ: ಗ್ರೂಪ್-ಡಿ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಕೊಪ್ಪಳ, ಅಕ್ಟೋಬರ್.22: ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನವಂಬರ್ 19 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

ಡಿ ವೃಂದದ ಅಡುಗೆಯವರ ಒಟ್ಟು 41 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಹೈದರಾಬಾದ-ಕರ್ನಾಟಕ ಭಾಗಕ್ಕೆ 35 ಹುದ್ದೆ, ಹೈಕಬಿಟ್ಟು ಉಳಿದ ಅಭ್ಯರ್ಥಿಗಳಿಗೆ 6 ಹುದ್ದೆಗಳು ಮೀಸಲಿವೆ. ಅಡುಗೆ ಸಹಾಯಕರ ಒಟ್ಟು 32 ಹುದ್ದೆಗಳಲ್ಲಿ ಹೈ-ಕ ವಿಭಾಗಕ್ಕೆ 78, ಉಳಿಕೆ ಮೂಲ ವೃಂದ್ದಕ್ಕೆ 14 ಹುದ್ದೆಗಳು ಮೀಸಲಿವೆ. ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲಾಗುವುದು.

Job

ವಿದ್ಯಾರ್ಹತೆ: ಅಡುಗೆಯವರ ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‍ಎಸ್‍ಎಲ್ ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.

ವಯಸ್ಸು: ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 18 ವರ್ಷ. ಗರಿಷ್ಠ ವಯಸ್ಸು ಅಭ್ಯರ್ಥಿಯು ಅರ್ಜಿ ಸ್ವೀಕರಿಸಲು ನಿಗಧಿಪಡಿಸಲಾಗಿರುವ ಕೊನೆಯ ದಿನಾಂಕದಂದು ಪ.ಜಾತಿ ಹಾಗೂ ಪ.ಪಂಗಡದ/ ಪ್ರ ವರ್ಗ-1 ಅಭ್ಯರ್ಥಿಗಳ ವಯಸ್ಸು 40 ವರ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳ ವಯಸ್ಸು 38 ವರ್ಷ, ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 35 ವರ್ಷ.

ಅಡುಗೆಯವರ ಹುದ್ದೆಗೆ ಅರ್ಜಿ ಶುಲ್ಕ: ಆನ್‍ಲೈ ನ್ ಮೂಲಕ ಅರ್ಜಿಯನ್ನು www.koppal.nic.in ಇಲ್ಲಿ ಅ.25 ರಿಂದ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನ.19 ಕೊನೆಯ ದಿನ. ಶುಲ್ಕ ಪಾವತಿಗೆ ನ.21 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಅಡುಗೆಯವರ ಹುದ್ದೆಗೆ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ-150 ಹಾಗೂ ಸಾಮಾನ್ಯ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ. 250 ನಿಗದಿಪಡಿಸಲಾಗಿದೆ.

ಅಡುಗೆ ಸಹಾಯಕರ ಹುದ್ದೆಗೆಅರ್ಜಿ ಶುಲ್ಕ: ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100. ಸಾಮಾನ್ಯ, ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ-200 ನಿಗದಿಪಡಿಸಿದೆ. ಅಭ್ಯರ್ಥಿಯು ಎರಡೂ ಹುದ್ದೆಗೆ ಆನ್‍ಲೈ ನ್‍ ನಲ್ಲಿ ಅರ್ಜಿ ಸಲ್ಲಿಸುವುದಾದಲ್ಲಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ಅರ್ಜಿ ಶುಲ್ಕವನ್ನು ಅಂಚೆ ಕಛೇರಿಯ ಕೆಲಸದ ವೇಳೆಯಲ್ಲಿ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲ್ಲಿ ( ಇ ಪೇಮೆಂಟ್ ಪೋಸ್ಟ್ ಆಫೀಸ್) ನಿಗದಿಪಡಿಸಿರುವ ದಿನಾಂಕದೊಳಗಾಗಿ ಪಾವತಿ ಮಾಡಬೇಕು. ಇದನ್ನು ಹೊರತುಪಡಿಸಿ ಡಿ.ಡಿ ಪೋಸ್ಟಲ್ ಆರ್ಡರ್, ಮನಿ ಆರ್ಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Koppal Backward Classes Welfare Department invited online applications for group 'D' and Assistant posts. november 19 last date for submit application.
Please Wait while comments are loading...